ಟೋಕಿಯೋದ ಅನುಭವ ಪ್ಯಾರಿಸ್‌ನಲ್ಲಿ ಪದಕ ಗೆಲ್ಲಲು ಪ್ರೇರಣೆಯಾಗಿದೆ: ಹಾಕಿ ನಾಯಕಿ ರಾಣಿ ರಾಂಪಾಲ್

author img

By

Published : Aug 11, 2021, 5:34 PM IST

Rani Rampal

ಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿ ಹಾಕಿ ಲೆಜೆಂಡ್​ ಮೇಜರ್​ ಧ್ಯಾನ್​ಚಂದ್​ ರತ್ನ ಪ್ರಶಸ್ತಿ ಎಂದು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ನಿರ್ಧಾರ ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​ಚಂದ್​ ಅವರಿಗೆ ಸಿಕ್ಕ ಬಹುದೊಡ್ಡ ಗೌರವ ಎಂದು ರಾಣಿ ರಾಂಪಾಲ್ ಸಂತಸ ವ್ಯಕ್ತಪಡಿಸಿದ್ದಾರೆ.

ದುಬೈ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ಪ್ರವೇಶಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಅಲ್ಲದೇ ಕೂದಲೆಳೆ ಅಂತರದಿಂದ ಕಂಚಿನ ಪದಕದ ಪಂದ್ಯವನ್ನು ಕಳೆದುಕೊಂಡು ನಿರಾಸೆ ಅನುಭವಿಸಿತ್ತು. ಆದರೆ, ಭಾರತದ ವನಿತೆಯರ ದಿಟ್ಟ ಆಟ ಕೋಟ್ಯಂತರ ಭಾರತೀಯರ ಮನಗೆದ್ದಿದೆ. ಆದರೆ, ನಾಯಕಿ ರಾಣಿ ರಾಂಪಾಲ್ ಪ್ರಕಾರ ಟೋಕಿಯೋದಲ್ಲಿನ ಅನುಭವ ಪ್ಯಾರಿಸ್​ನಲ್ಲಿ ಪದಕ ಭದ್ರಪಡಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಬಲಿಷ್ಠ ಹಾಗೂ 3 ಬಾರಿಯ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ತಂಡವಾದ ಆಸ್ಟ್ರೇಲಿಯಾ ತಂಡವನ್ನು ಕ್ವಾರ್ಟರ್​ ಫೈನಲ್​ನಲ್ಲಿ ಬಗ್ಗು ಬಡಿದಿತ್ತು. ದುರಾದೃಷ್ಟವಶಾತ್​ ರಾಂಪಾಲ್ ಪಡೆ ಸೆಮಿಫೈನಲ್ ಅರ್ಜೆಂಟೀನಾ ವಿರುದ್ಧ​ ಮತ್ತು ಕಂಚಿನ ಪದಕದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ತೀವ್ರ ಹೋರಾಟದ ಹೊರತಾಗಿಯೂ ವಿರೋಚಿತ ಸೋಲು ಕಂಡು ಐತಿಹಾಸಿಕ ಪದಕ ತಪ್ಪಿಸಿಕೊಂಡಿತ್ತು.

ರಾಣಿ ರಾಂಪಾಲ್​ ಜತೆ ಚಿಟ್​ಚಾಟ್​

ಟೋಕಿಯೋದಿಂದ ಭಾರತಕ್ಕೆ ಮರಳಿದ ನಂತರ ಇಂಡಿಯನ್​ ಕ್ಯಾಟ್ಪಟನ್​ ರಾಣಿ ರಾಂಪಾಲ್ ಒಲಿಂಪಿಕ್ಸ್​ನಲ್ಲಿನ ತಮ್ಮ ಅನುಭವಗಳನ್ನು ಈಟಿವಿ ಭಾರತದ ಜೊತೆ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ಗೆ ಪ್ರವೇಶಿಸಿದ್ದು, ಭಾರತ ಮಹಿಳಾ ಹಾಕಿ ತಂಡಕ್ಕೆ ತುಂಬಾ ವಿಶೇಷವಾಗಿದೆ.

ಯಾರೊಬ್ಬರು ನಮ್ಮಿಂದ ಅಂತಹ ಪ್ರದರ್ಶನ ಹೊರಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಯುರೋಪಿಯನ್ ತಂಡಗಳ ವಿರುದ್ಧದ ಪಂದ್ಯಗಳ ನಂತರ ನಮ್ಮ ಆಟಗಾರ್ತಿಯರು ಉತ್ತಮವಾಗಿ ಆಡಿದರು. ಇಲ್ಲಿ ನಾವು ಪದಕ ಗೆಲ್ಲಲಾಗಲಿಲ್ಲ.

ಆದರೆ, ನಮ್ಮ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಮತ್ತು ನಮ್ಮಲ್ಲಿ ಸಂಪೂರ್ಣ ಆತ್ಮವಿಶ್ವಾಸ ಹೆಚ್ಚಾಗಿದೆ. 2024ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಲು ಈ ಅನುಭವ ನೆರವಾಗಲಿದೆ ಎಂದು ತಿಳಿಸಿದ್ದಾರೆ.

women's hockey team
ಮಹಿಳಾ ಹಾಕಿ ತಂಡ

ಒಲಿಂಪಿಕ್ಸ್​ ನಡೆಯುವ ವೇಳೆ ತಂಡದ ಪ್ರತಿಯೊಬ್ಬ ಆಟಗಾರ್ತಿಯರಲ್ಲೂ ಅತ್ಯಂತ ಉತ್ಸಾಹ ಮತ್ತು ಆತ್ಮವಿಶ್ವಾಸವಿತ್ತು. ಇದು ನಮಗೆ ಒಲಿಂಪಿಕ್ಸ್​ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸಲು ನೆರವಾಯಿತು. ಅಲ್ಲದೇ ಟೋಕಿಯೋ ಒಲಿಂಪಿಕ್ಸ್ ಭಾರತದ ಎಲ್ಲಾ ಆಟಗಾರ್ತಿಯರಲ್ಲೂ ಮುಂಬರುವ ದಿನಗಳಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳಲು ಒಂದು ಅತ್ಯುತ್ತಮ ಪಾಠವನ್ನು ಕಲಿಸಿದೆ ಎಂದು ತಿಳಿಸಿರುವ ರಾಂಪಾಲ್, ನಮಗೆ ಟೋಕಿಯೋದಿಂದ ಹಿಂತಿರುಗಿದಾಗ ಅಂತಹ ಅದ್ದೂರಿ ಸ್ವಾಗತ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ತಿಳಿಸಿದ್ದಾರೆ.

women's hockey team
ಮಹಿಳಾ ಹಾಕಿ ತಂಡ

ಇನ್ನು ರಾಜೀವ್​ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನು ಹಾಕಿ ಲೆಜೆಂಡ್​ ಮೇಜರ್​ ಧ್ಯಾನ್​ಚಂದ್​ ರತ್ನ ಪ್ರಶಸ್ತಿ ಎಂದು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಪ್ರಶಂಸಿಸಿದ್ದಾರೆ. ಮೋದಿ ಅವರ ನಿರ್ಧಾರ ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​ಚಂದ್​ ಅವರಿಗೆ ಸಿಕ್ಕ ಬಹುದೊಡ್ಡ ಗೌರವವಾಗಿದೆ, ನಾನೊಬ್ಬಳು ಹಾಕಿ ಆಟಗಾರ್ತಿ ಆಗಿರುವುದರಿಂದ ನನಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ರಾಂಪಾಲ್​ ಹೇಳಿದ್ದಾರೆ.

ಇದನ್ನು ಓದಿ:EXCLUSIVE: ದೆಹಲಿಗೆ ಬಂದಿಳಿದಾಗ ನೆರದಿದ್ದ ಜನರನ್ನು ನೋಡಿ ಕಣ್ತುಂಬಿತು: ಮನ್​ಪ್ರೀತ್​ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.