Tokyo Olympics Women's Hockey: ಹಾಕಿಯಲ್ಲಿ ಇತಿಹಾಸ ಸೃಷ್ಟಿಗೆ ಹೊರಟ ಭಾರತೀಯ ವನಿತೆಯರಿಗೆ ನಿರಾಸೆ

author img

By

Published : Aug 6, 2021, 8:47 AM IST

Updated : Aug 6, 2021, 8:56 AM IST

tokyo-olympics-india-women-hockey-team for bronze medal

ಗುರುವಾರವಷ್ಟೇ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಗೋಲುಗಳ ಅಂತರದ ಸೋಲು ಅನುಭವಿಸಿದ್ದ ಹಾಕಿ ತಂಡ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಈಗ ಕಂಚಿನ ಪದಕ ಕಳೆದುಕೊಂಡಿದ್ದು, ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆಯಾಗಿದೆ.

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಗ್ರೇಟ್​ ಬ್ರಿಟನ್ ವಿರುದ್ಧ ಹೋರಾಡಿ ಪರಾಭವಗೊಂಡಿದ್ದು ಕಂಚಿನ ಪದಕ ಗೆಲ್ಲುವಲ್ಲಿ ವಿಫಲವಾಗಿದೆ.

ಮೊದಲಿಗೆ ಎರಡು ಗೋಲ್​ಗಳನ್ನು ಗ್ರೇಟ್​ ಬ್ರಿಟನ್ ತಂಡ ದಾಖಲಿಸಿದಾಗ ನಿರಾಸೆಗೊಳಗಾಗಿದ್ದ ಭಾರತೀಯ ವನಿತೆಯರ ತಂಡ ಮಿಂಚಿನ ವೇಗದಲ್ಲಿ ಮೂರು ಗೋಲುಗಳನ್ನು ದಾಖಲಿಸಿ ಪದಕದ ಭರವಸೆ ಸೃಷ್ಟಿಸಿತ್ತು. ಆದರೆ ಪಂದ್ಯದ ಅಂತ್ಯಕ್ಕೆ 4-3 ಗೋಲುಗಳ ಅಂತರದಿಂದ ಭಾರತೀಯ ವನಿತೆಯರ ತಂಡ ಸೋಲನ್ನಪ್ಪಿದೆ.

ಗುರುವಾರವಷ್ಟೇ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಗೋಲುಗಳ ಅಂತರದ ಸೋಲು ಅನುಭವಿಸಿದ್ದ ಹಾಕಿ ತಂಡ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಈಗ ಕಂಚಿನ ಪದಕದ ಕಳೆದುಕೊಂಡಿದ್ದು, ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಸೆಯಾಗಿದೆ.

ಈ ಹಿಂದೆ 1980ರಲ್ಲಿ ನಡೆದ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಭಾರತ ಮಹಿಳಾ ಹಾಕಿ ತಂಡವು ಆರು ತಂಡಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿತ್ತು. ಭಾರತದ ಮಹಿಳಾ ಹಾಕಿ ಇತಿಹಾಸದಲ್ಲಿ ಇದೇ ಅತಿ ದೊಡ್ಡ ಸಾಧನೆಯಾಗಿದ್ದು, ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದು, ದೊಡ್ಡ ಸಾಧನೆಯಾಗಿದೆ.

Last Updated :Aug 6, 2021, 8:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.