ಪಿವಿ ಸಿಂಧು ಶ್ರೇಷ್ಠ ಒಲಿಂಪಿಯನ್, ಭಾರತದ ಕ್ರೀಡಾ ಐಕಾನ್: ಕ್ರೀಡಾ ಸಚಿವ ಅನುರಾಗ್ ಠಾಕೂರ್

author img

By

Published : Aug 5, 2021, 5:46 PM IST

Olympic medalist PV Sindhu  facilitated  from union minsters

2016ರ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತೀಯ ಶಟ್ಲರ್​ ಟೋಕಿಯೋದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಲಿಂಪಿಕ್ಸ್​ನಲ್ಲಿ 2 ಪದಕ ಗೆದ್ದ 2ನೇ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ನವದೆಹಲಿ: ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ತಂದುಕೊಟ್ಟ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಸೇರಿದಂತೆ ಹಲವಾರು ಮಂದಿ ಗಣ್ಯರು ಶ್ವಾಗತ ಕೋರಿದ್ದಲ್ಲದೇ ಸನ್ಮಾನ ಮಾಡಿ ಗೌರವಿಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಭಾರತೀಯ ಶಟ್ಲರ್​ ಟೋಕಿಯೋದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಒಲಿಂಪಿಕ್ಸ್​ನಲ್ಲಿ 2 ಪದಕ ಗೆದ್ದ 2ನೇ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಂದು ಟೋಕಿಯೋದಿಂದ ನವದೆಹಲಿಯಿಂದ ಆಗಮಿಸಿದ ಸಿಂಧು ಮತ್ತು ಅವರ ಕೋಚ್​ ಅವರನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್​ ಕಾರ್ಯದರ್ಶಿ ಅಜಯ್​ ಸಿಂಗಾನಿಯಾ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಬರ ಮಾಡಿಕೊಂಡರು.

ನಂತರ ಸಿಂಧು ಹಾಗೂ ಕೋಚ್​ ಪರ್ಕ್ ಟೇ ಸಾಂಗ್ ಅವರನ್ನು ಕ್ರೀಡಾ ಸಚಿವಾ ಅನುರಾಗ್ ಠಾಕೂರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಈಶಾನ್ಯ ಪ್ರದೇಶದ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಜಿ ಕಿಶನ್ ರೆಡ್ಡಿ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಿಸಿತ್ ಪ್ರಾಮಾಣಿಕ್​ ಸೇರಿದಂತೆ ಕ್ರೀಡಾ ಸಚಿವಾಲಯದ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

ಪಿವಿ ಸಿಂಧುಗೆ ಸನ್ಮಾನ

ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, ಪಿವಿ ಸಿಂಧು ಭಾರತದ ಶ್ರೇಷ್ಠ ಒಲಿಂಪಿಯನ್. ಅವರು ಭಾರತದ ಐಕಾನ್ ಮತ್ತು ದೇಶಕ್ಕಾಗಿ ಆಡಬೇಕು ಎಂದು ಬಯಸುವ ಯುವಪೀಳಿಗೆಯ ಕನಸಿಗೆ ಸ್ಪೂರ್ತಿಯಾಗಿದ್ದಾರೆ. ಒಲಿಂಪಿಕ್ಸ್​ನಲ್ಲಿ ಸತತ ಎರಡು ಪದಕಗಳನ್ನು ಗೆದ್ದಿರುವುದು ಅವರ ನಂಬಲಸಾಧ್ಯವಾದ ಸಾಧನೆಯಾಗಿದೆ. ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(TOPS)ನ ಯೋಜನೆ ಹೇಗೆ ಕ್ರೀಡಾಪಟುಗಳನ್ನು ಪೋಷಿಸಿದೆ ಎಂಬುದನ್ನು ಸಿಂಧು ಅವರ ಯಶಸ್ಸು ತೋರಿಸುತ್ತದೆ ಎಂದು ಹೇಳಿದ ಅವರು ಸಿಂಧು ಅವರ ಬೆನ್ನಿಗೆ ನಿಂತು ಅವರ ಸಾಧನೆಗಾಗಿ ತ್ಯಾಗ ಮಾಡಿರುವ ಪೋಷಕರಿಗೆ ಧನ್ಯವಾದ ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಸಿಂಧು ತಾವೊಬ್ಬಳು ಅದ್ಭುತ ಕ್ರೀಡಾಪಟು ಎಂಬುದನ್ನು ಪದೇ ಪದೆ ತಮ್ಮ ಸಾಧನೆಯ ಮೂಲಕ ತಾವೇ ನಿರೂಪಿಸಿದ್ದಾರೆ. ನಿಖರವಾದ ತಯಾರಿ, ಗಚ್ಚಿಬೌಲಿಯಲ್ಲಿ ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳು, ಉತ್ತಮ ತರಬೇತುದಾರ, ಕುಟುಂಬ ಬೆಂಬಲ ಮತ್ತು ಸ್ವತಃ ಸಿಂಧು ಅವರ ಸ್ವಂತ ಪರಿಶ್ರಮ, ದೃಢನಂಬಿಕೆ ಮತ್ತು ಆಟದ ಕ್ಷೇತ್ರದಲ್ಲಿನ ಉತ್ಕೃಷ್ಟತೆ ಅವರ ಸಾಧನೆಗೆ ಕಾರಣವಾಗಿದೆ ಎಂದು ಸಿಂಧು ಸಾಧನೆ ಶ್ಲಾಘಿಸಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಂಧು, ನನ್ನ ಒಲಿಂಪಿಕ್ಸ್​ ಪಯಣಕ್ಕೆ ನೆರವಾದ ಸರ್ಕಾರ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಸಚಿವ ಠಾಕೂರ್ ಅವರಿಗೆ ಧನ್ಯವಾದಗಳು. ನಾನು ಕೇಳಿದ ಸೌಲಭ್ಯವನ್ನು ತಕ್ಷಣ ಎಲ್ಲರೂ ನನಗೆ ದೊರಕಿಸಿಕೊಟ್ಟರು. ಕೊರೊನಾ ಬಿಕ್ಕಟ್ಟಿನ ನಡುವೆಯೂ ನನಗೆ ಗಚ್ಚಿಬೌಲಿಯಲ್ಲಿ ಅಭ್ಯಾಸ ನಡೆಸಲು ಅವಕಾಶ ಮಾಡಿಕೊಟ್ಟರು.

ಇವರಲ್ಲದೇ ಬ್ಯಾಡ್ಮಿಂಟನ್ ಅಸೋಸಿಯೇಷನ್, ನನ್ನ ಪೋಷಕರು ಮತ್ತು ನನ್ನ ಜೊತೆ ಒಂದು ವರ್ಷ ಇದ್ದು ತರಬೇತಿ ನೀಡಿದ ಕೋಚ್ ಪರ್ಕ್​ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದರು.

ಸಿಂಧು ಕೋಚ್​ ಪರ್ಕ್​ ಮಾತನಾಡಿ, ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅಭಿನಂದನೆ ಮತ್ತು ಶುಭಾಶಯ ಕೇಳುತ್ತಿದ್ದೇನೆ, ಇದಕ್ಕೆಲ್ಲಾ ಕಾರಣ ಪಿವಿ ಸಿಂಧು, ಅವರು ಕೋವಿಡ್​ ಬಿಕ್ಕಟ್ಟಿನ ನಡುವೆ ಕಠಿಣ ಪರಿಶ್ರಮ ಪಟ್ಟಿದ್ದಕ್ಕೆ ಇದೆಲ್ಲಾ ಸಾಧ್ಯವಾಗಿದೆ ಎಂದು ತಿಳಿಸಿದರು.

ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್ 13ನೇ ದಿನ: ನೀರಜ್ ಚೋಪ್ರಾ ಮೇಲೆ ಪದಕದ ಭಾರಿ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.