ಕ್ಯಾನೋ ಸ್ಪ್ರಿಂಟ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಪ್ರಾಚಿ ಯಾದವ್​

author img

By

Published : Sep 2, 2021, 10:10 AM IST

ndia's Prachi Yadav qualifies for Canoe sprint semifinal

26 ವರ್ಷದ ಭೂಪಾಲ್​ 200 ಮೀಟರ್​ನ ಮೊದಲ ಹೀಟ್​ನಲ್ಲಿ ಒಂದು ನಿಮಿಷ 11.098-13.014 ಸೆಕೆಂಡ್​ಗಳಲ್ಲಿ ತಲುಪಿದರು. ಗ್ರೇಟ್​ ಬ್ರಿಟನ್​ ಎಮ್ಮಾ ವಿಗ್ಸ್​ 59.084 ಸೆಕೆಂಡ್​ಗಳಲ್ಲಿ ತಲುಪಿ ಮೊದಲ ಸ್ಥಾನ ಪಡೆದರು.

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪ್ರಾಚಿ ಯಾದವ್ ಮಹಿಳೆಯರ 200 ಮೀಟರ್​ ಕ್ಲಾಸ್​ VL2 ಸಿಂಗಲ್ಸ್​ ಕ್ಯಾನೋ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.​

26 ವರ್ಷದ ಭೂಪಾಲ್​ 200 ಮೀಟರ್​ನ ಮೊದಲ ಹೀಟ್​ನಲ್ಲಿ ಒಂದು ನಿಮಿಷ 11.098-13.014 ಸೆಕೆಂಡ್​ಗಳಲ್ಲಿ ಪೂರ್ಣಗೊಳಿಸಿದರು. ಗ್ರೇಟ್​ ಬ್ರಿಟನ್​ ಎಮ್ಮಾ ವಿಗ್ಸ್​ 59.084 ಸೆಕೆಂಡ್​ಗಳಲ್ಲಿ ತಲುಪಿ ಮೊದಲ ಸ್ಥಾನ ಪಡೆದರು. ಪ್ರಾಚಿ ಒಟ್ಟಾರೆ 4ನೇ ಸ್ಥಾನ ಪಡೆದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡರು.​ ಶುಕ್ರವಾರ ಸೆಮಿಫೈನಲ್​ ನಡೆಯಲಿದೆ.

ಯಾದವ್​ ಸೊಂಟದ ಕೆಳಭಾಗ ಪ್ಯಾರಾಲಿಸಿಸ್​ಗೆ ಒಳಗಾಗಿದೆ. ಇವರು ಮೊದಲು ಅವರು ಪ್ಯಾರಾ ಸ್ವಿಮ್ಮಿಂಗ್​​ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದರು. ಆದರೆ, ತಮ್ಮ ಕೋಚ್​ ವೀರೇಂದ್ರ ಕುಮಾರ್​ ಅವರ ಸಲಹೆಯ ಮೇರೆಗೆ ಕ್ಯಾನೋಯಿಂಗ್​ಗೆ ತಮ್ಮ ಕ್ರೀಡೆಯನ್ನು ಬದಲಾಯಿಸಿಕೊಂಡರು.

ಇದನ್ನು ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್: ಮತ್ತೊಂದು ಪದಕ ಮುಡಿಗೇರಿಸಿಕೊಳ್ಳುವಲ್ಲಿ ವಿಫಲರಾದ ಅವನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.