ಕ್ಲೀವ್​ಲ್ಯಾಂಡ್​ ಓಪನ್: ಫೈನಲ್​ನಲ್ಲಿ ಸೋಲುಕಂಡ ಸಾನಿಯಾ ಮಿರ್ಜಾ

author img

By

Published : Aug 29, 2021, 3:05 PM IST

Sania Mirza-Christina McHale pair ends runner-up in Cleveland

ಈ ವರ್ಷದ ಜಾಗತಿಕ ಟೆನಿಸ್ ಕ್ರೀಡಾಕೂಟಗಳಲ್ಲಿ ಮೊದಲ ಫೈನಲ್​ ತಲುಪಿದ ಸಾನಿಯಾ 180 ರ್ಯಾಂಕಿಂಗ್ ಪಾಯಿಂಟ್ಸ್ ಪಡೆದಿದ್ದು, 3,000 ಯುಎಸ್ ಡಾಲರ್ ಬಹುಮಾನ ಮೊತ್ತ ಪಡೆದಿದ್ದಾರೆ.

ಕ್ಲೀವ್​ಲ್ಯಾಂಡ್​: ಭಾರತದ ಹಿರಿಯ ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅವರ ಅಮೆರಿಕಾದ ಜೊತೆಗಾರ್ತಿ ಕ್ರಿಸ್ಟಿನಾ ಮೆಕಾಲೆ ಕ್ಲೀವ್​ಲ್ಯಾಂಡ್​ ಓಪನ್​ನಲ್ಲಿ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಶನಿವಾರ ತಡರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜಪಾನ್ ಜೋಡಿ ಶುಕೊ ಒಯೋಮಾ ಮತ್ತು ಈನಾ ಶಿಬಹಾರ​​ ವಿರುದ್ಧ ಅವರು ಸೋಲು ಅನುಭವಿಸಿದರು. ಇಂಡೋ-ಅಮೆರಿಕನ್ ಜೋಡಿಯು ಒಂದು ಗಂಟೆ 24 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ 5-7, 3-6 ಸೆಟ್​ಗಳ ಅಂತರದಿಂದ ಸೋಲು ಕಂಡರು.

ಈ ವರ್ಷದ ಜಾಗತಿಕ ಟೆನಿಸ್ ಕ್ರೀಡಾಕೂಟಗಳಲ್ಲಿ ಮೊದಲ ಫೈನಲ್​ ತಲುಪಿದ ಸಾನಿಯಾ 180 ರ್ಯಾಂಕಿಂಗ್ ಪಾಯಿಂಟ್ಸ್ ಪಡೆದಿದ್ದು, 3,000 ಯುಎಸ್ ಡಾಲರ್ ಬಹುಮಾನ ಮೊತ್ತ ಪಡೆದಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಕ್ರಿಸ್ಟಿನಾ ಶುಕ್ರವಾರ ಮಧ್ಯರಾತ್ರಿ ನಡೆದಿದ್ದ ಸೆಮಿಫೈನಲ್ಸ್‌ನಲ್ಲಿ ನಾರ್ವೆ-ಅಮೆರಿಕನ್​ ಜೋಡಿ ಉಲ್​ರಿಕ್ ಐಕರಿ ಮತ್ತು ಕ್ಯಾಥರೀನ್ ಹ್ಯಾರಿಸನ್ ಜೋಡಿಯನ್ನು 7-6(5) 6-2 ನೇರ ಸೆಟ್​ಗಳ ಅಂತರದಲ್ಲಿ ಮಣಿಸಿ ಡಬ್ಲ್ಯೂಟಿಎ 250 ಟೂರ್ನಮೆಂಟ್​ ಫೈನಲ್​ ಪ್ರವೇಶಿಸಿದ್ದರು.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ; ಟೇಬಲ್​ ಟೆನ್ನಿಸ್‌ನಲ್ಲಿ ಬೆಳ್ಳಿ ಗೆದ್ದು ಭಾವಿನಾ ಪಟೇಲ್ ದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.