US Open: ಸೋಲಿನ ಬಳಿಕ ಸಹನೆ ಕಳೆದುಕೊಂಡ ನೋವಾಕ್ ಜೊಕೊವಿಕ್‌​ ಮಾಡಿದ್ದೇನು ನೋಡಿ..

author img

By

Published : Sep 13, 2021, 7:55 PM IST

ನೋವಾಕ್​ ಜೊಕೊವಿಕ್

ಸೋಲಿನ ಹತಾಶೆಯಲ್ಲಿ ನಿನ್ನೆ ವಿಶ್ವದ ಅಗ್ರ ಶ್ರೇಯಾಂಕಿತ ಟೆನ್ನಿಸ್ ಆಟಗಾರ ನೋವಾಕ್​ ಜೊಕೊವಿಕ್​​ ಸಹನೆ ಕಳೆದುಕೊಂಡಿದ್ದರು. ಪಂದ್ಯ ಸೋತ ಸಿಟ್ಟಿನಲ್ಲಿ ಅವರು ತಮ್ಮ ರಾಕೆಟ್ ಅ​​ನ್ನು ನೆಲಕ್ಕೆ ಹೊಡೆದು ಮುರಿದೇ ಬಿಟ್ಟರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ಭಾನುವಾರ ನಡೆದ ಯುಎಸ್ ಓಪನ್ ಟೆನ್ನಿಸ್ ಫೈನಲ್‌ ಪಂದ್ಯದಲ್ಲಿ ನೋವಾಕ್​ ಜೊಕೊವಿಕ್​​​​ ಆಘಾತಕಾರಿ ಸೋಲು ಅನುಭವಿಸಿದ್ದರು. ಈ ಪಂದ್ಯದಲ್ಲಿ ನೋವಾಕ್​ ಅವರು ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 6-4, 6-4, 6-4 ನೇರ ಸೆಟ್​ಗಳಿಂದ ಸೊಲೋಪ್ಪಿಕೊಂಡಿದ್ದರು.

ಈ ಪಂದ್ಯದ ಕೊನೆಯ ಪಾಯಿಂಟ್​​ ಕಳೆದುಕೊಂಡಾಗ ಅವರು​​ ತಮ್ಮ ಸಹನೆ ಕಳೆದುಕೊಂಡಿದ್ದು, ಸಿಟ್ಟಿನಲ್ಲಿ ರಾಕೆಟ್ ಅ​​ನ್ನು ನೆಲಕ್ಕೆ ಹೊಡೆದು ಮುರಿದು ಹಾಕಿದರು. ಪಂದ್ಯದ ನಂತರ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ತಮ್ಮಿಂದಾದ ಪ್ರಮಾದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳುವುದಾಗಿ ತಿಳಿಸಿದರು.

ಡ್ಯಾನಿಲ್ ಮೆಡ್ವೆಡೆವ್​​ ಚೊಚ್ಚಲ ಗ್ರ್ಯಾಂಡ್​ ಸ್ಲಾಮ್​ ಗೆಲ್ಲುವ ಮೂಲಕ ಅಮೆರಿಕನ್​ ಒಪನ್​​​ ಟೆನ್ನಿಸ್​ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಮೆಡ್ವೆಡೆವ್​ ಆಶ್ಚರ್ಯಕರ ರೀತಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಜೊಕೊವಿಕ್​ ಅವರನ್ನು ಮಣಿಸಿದ್ದು, ವಿಶ್ವದ ನಂಬರ್​ ಒನ್​ ಆಟಗಾರನ 21 ಗ್ರ್ಯಾಂಡ್​ ಸ್ಲಾಮ್​ ಗೆಲುವಿನ ಆಸೆಗೆ ತಣ್ಣೀರೆರಚಿದ್ದಾರೆ.

ಈಗಾಗಲೇ ಟೆನಿಸ್​ ದಿಗ್ಗಜರಾದ ಫೆಡರರ್​ ಹಾಗೂ ನಡಾಲ್​ ತಲಾ 20 ಗ್ರ್ಯಾಂಡ್​ ಸ್ಲಾಮ್​​ ಗೆಲ್ಲುವ ಮೂಲಕ ಜೊಕೊವಿಕ್​ ಜತೆ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.