ಟೆನಿಸ್​ ದಿಗ್ಗಜ ರಾಫೆಲ್ ನಡಾಲ್​ಗೆ ಕೋವಿಡ್​ 19 ಪಾಸಿಟಿವ್

author img

By

Published : Dec 20, 2021, 5:46 PM IST

Nadal tests COVID-19 positive after Abu Dhabi event

20 ಗ್ರ್ಯಾಂಡ್​ ಸ್ಲಾಮ್​ ವಿಜೇತ ಸ್ಪೇನ್​ಗೆ ಮರಳುವ ಮುನ್ನ ಕುವೈತ್​ ಮತ್ತು ಅಬುಧಾಬಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆದರೆ, ಸ್ಪೇನ್​ಗೆ ಮರಳಿದ ನಂತರ ಒಳಗಾದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಕಳೆದ ಎರಡು ದಿನಗಳಲ್ಲಿ ತನ್ನೊಂದಿಗೆ ಸಂಪರ್ಕದಲ್ಲಿದ್ದವರಿಗೆ ಪರೀಕ್ಷೆಗೆ ಒಳಗಾಗಿ ಎಂದು ನಡಾಲ್ ಮನವಿ ಮಾಡಿದ್ದಾರೆ..

ನವದೆಹಲಿ : ಸ್ಪೇನ್​ ಟೆನಿಸ್ ಸ್ಟಾರ್​ ಹಾಗೂ ವಿಶ್ವದಾಖಲೆಯ 20 ಗ್ರ್ಯಾಂಡ್​ಸ್ಲಾಮ್​ಗಳ ಒಡೆಯ ರಾಫೆಲ್ ನಡಾಲ್​​ಗೆ ಕೋವಿಡ್​-19 ಪಾಸಿಟಿವ್ ದೃಢಪಟ್ಟಿದೆ. ಕಳೆದ ವಾರ ಅಬುಧಾಬಿಯಲ್ಲಿ ನಡೆದಿದ್ದ ಎಕ್ಸಿಬಿಷನ್​ ಟೂರ್ನಮೆಂಟ್​ನಲ್ಲಿ ಭಾಗವಹಿಸಿದ್ದ ನಡಾಲ್​ ತವರಿಗೆ ಮರಳಿದ ನಂತರ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದರು. ವರದಿಯಲ್ಲಿ ಪಾಸಿಟಿವ್​ ದೃಢಪಟ್ಟಿದೆ ಎಂದು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

"ಎಲ್ಲರಿಗೂ ನಮಸ್ಕಾರ, ನಾನು ಅಬುಧಾಬಿ ಟೂರ್ನಮೆಂಟ್​​ ಮುಗಿಸಿ ಮನೆಗೆ ಬಂದ ನಂತರ ನಡೆಸಿದ ಪಿಸಿಆರ್​ ಪರೀಕ್ಷೆಯಲ್ಲಿ ಕೋವಿಡ್​-19 ಪಾಸಿಟಿವ್​ ಪಡೆದಿದ್ದೇನೆ" ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

20 ಗ್ರ್ಯಾಂಡ್​ ಸ್ಲಾಮ್​ ವಿಜೇತ ಸ್ಪೇನ್​ಗೆ ಮರಳುವ ಮುನ್ನ ಕುವೈತ್​ ಮತ್ತು ಅಬುಧಾಬಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆದರೆ, ಸ್ಪೇನ್​ಗೆ ಮರಳಿದ ನಂತರ ಒಳಗಾದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಕಳೆದ ಎರಡು ದಿನಗಳಲ್ಲಿ ತನ್ನೊಂದಿಗೆ ಸಂಪರ್ಕದಲ್ಲಿದ್ದವರಿಗೆ ಪರೀಕ್ಷೆಗೆ ಒಳಗಾಗಿ ಎಂದು ನಡಾಲ್ ಮನವಿ ಮಾಡಿದ್ದಾರೆ.

ನಡಾಲ್ ಫ್ರೆಂಚ್ ಓಪನ್​ ಸೆಮಿಫೈನಲ್​​ನಲ್ಲಿ ಸೋಲುಂಡ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಣಿಸಿಲ್ಲ. ಒಲಿಂಪಿಕ್ಸ್, ಯುಎಸ್​ ಓಪನ್​ನಿಂದಲೂ ಹೊರಗುಳಿದಿದ್ದರು. ಮುಂದಿನ ತಿಂಗಳು ನಡೆಯುವ ಆಸ್ಟ್ರೇಲಿಯಾ ಓಪನ್​ನಲ್ಲೂ ಆಡುವುದು ಗ್ಯಾರೆಂಟಿಯಿಲ್ಲ ಎಂದು ಇತ್ತೀಜೆಗೆ ಹೇಳಿದ್ದರು.

ಇದನ್ನೂ ಓದಿ:ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿ: 4ನೇ ಸ್ಥಾನಕ್ಕೆ ಕುಸಿದ ಭಾರತ, ಶ್ರೀಲಂಕಾ - ಆಸ್ಟ್ರೇಲಿಯಾಗೆ ಅಗ್ರಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.