ಆಸ್ಟ್ರೇಲಿಯನ್ ಓಪನ್‌: ಟೂರ್ನಿಯಲ್ಲಿ ಭಾಗವಹಿಸುವುದಾಗಿ ಜೊಕೊವಿಕ್ ಘೋಷಣೆ

author img

By

Published : Jan 4, 2022, 7:28 PM IST

Djokovic to defend Australian Open title after exemption from vaccination

ಕೋವಿಡ್‌ ವ್ಯಾಕ್ಸಿನೇಷನ್‌ನಿಂದ ವೈದ್ಯಕೀಯ ವಿನಾಯಿತಿ ಪಡೆದ ಹಿನ್ನೆಲೆಯಲ್ಲಿ ಜನವರಿ 17 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಭಾಗವಹಿಸುವುದಾಗಿ ವಿಶ್ವದ ನಂಬರ್ ಒನ್ ಟೆನಿಸ್‌ ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.

ಬೆಲ್‌ಗ್ರೇಡ್(ಸರ್ಬಿಯಾ): ಕೋವಿಡ್-19 ವ್ಯಾಕ್ಸಿನೇಷನ್‌ನಿಂದ ವೈದ್ಯಕೀಯ ವಿನಾಯಿತಿ ಪಡೆದಿರುವ ವಿಶ್ವದ ಅಗ್ರ ಶ್ರೇಯಾಂಕಿತ ಟೆನಿಸ್‌ ಆಟಗಾರ ನೊವಾಕ್ ಜೊಕೊವಿಕ್ ಇದೇ ತಿಂಗಳು ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಬಗ್ಗೆ ಜೊಕೊವಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೊಕೊವಿಕ್ ತನ್ನ ವ್ಯಾಕ್ಸಿನೇಷನ್ ಸ್ಥಿತಿಗತಿ ಬಗ್ಗೆ ಈವರೆಗೆ ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. ಆದರೆ ಆಟಗಾರರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕೆಂಬ ಆದೇಶವನ್ನು ಅವರು ಟೀಕಿಸಿದ್ದರು. ಆಸ್ಟ್ರೇಲಿಯಾದ ಕ್ವಾರಂಟೈನ್ ನಿಯಮಗಳ ಮೇಲಿನ ಕಳವಳದಿಂದಾಗಿ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಸ್ಪರ್ಧಿಸುವ ಖಾತ್ರಿ ಇಲ್ಲ ಎಂದು ವಾರದ ಹಿಂದಷ್ಟೇ ಹೇಳಿದ್ದರು.

ಜನವರಿ 17 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕೆಂದು ಟೂರ್ನಿಯ ಸಂಘಟಕರು ಸೂಚಿಸಿದ್ದರು. ಆದರೆ ಜೊಕೊವಿಕ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಜೊಕೊವಿಕ್ ಈ ಹಿಂದೆ ಸಿಡ್ನಿಯಲ್ಲಿ ನಡೆದ ಎಟಿಪಿ ಕಪ್‌ಗಾಗಿ ಸರ್ಬಿಯಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ನಂತರ ಆಸ್ಟ್ರೇಲಿಯನ್ ಓಪನ್‌ನ ಸಾಂಪ್ರದಾಯಿಕ ಅಭ್ಯಾಸ ಪಂದ್ಯಗಳಿಂದ ಹಿಂದೆ ಸರಿದಿದ್ದರು. ಇದು ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಅವರ ಭಾಗವಹಿಸುವಿಕೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಇದೀಗ ಅವರು ತಮ್ಮ ಲಸಿಕೆ ವಿನಾಯಿತಿಯನ್ನು ಬಹಿರಂಗಪಡಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ATP Finals: ವಿಶ್ವದ ನಂ.1 ಜೊಕೊವಿಕ್​​ಗೆ ಶಾಕ್​ ನೀಡಿದ ಜ್ವೆರೆವ್ ಫೈನಲ್​ಗೆ ಲಗ್ಗೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.