ಅಮೇರಿಕಾದ ಟೆನ್ನಿಸ್​ ದಂತಕತೆ ಆ್ಯಶ್ಲೆ ಕೂಪರ್​ ನಿಧನ

author img

By

Published : May 23, 2020, 11:33 AM IST

ಆಶ್ಲೇ ಕೂಪರ್

ಕೂಪರ್​ 1957ರಲ್ಲಿ ಅಮೇರಿಕಾ ವಿರುದ್ಧ ನಡೆದ ಡೇವೀಸ್​ ಕಪ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನಂತರದ ವರ್ಷದಲ್ಲಿ ಅದೇ ತಂಡದ ವಿರುದ್ಧ ಸೋಲನುಭವಿಸಿದ್ದರಿಂದ ಮನನೊಂದು ಟೆನ್ನಿಸ್​ ವೃತ್ತಿ ಬದುಕಿನಿಂದ ಹೊರ ಬಂದಿದ್ದರು.

ಸಿಡ್ನಿ: ಆಸ್ಟ್ರೇಲಿಯಾ ಟೆನ್ನಿಸ್​ ದಂತಕತೆ ಹಾಗೂ ನಾಲ್ಕು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳ ವಿಜೇತ ಆಶ್ಲೇ ಕೂಪರ್ ಶುಕ್ರವಾರ ನಿಧನರಾಗಿದ್ದಾರೆ.

83 ವಯಸ್ಸಿನ ಮಾಜಿ ನಂಬರ್​ ಒನ್ ಆಟಗಾರ ಕೂಪರ್​ ದೀರ್ಘ ಕಾಲದಿಂದ ಖಾಯಿಲೆಯಿಂದ ಬಳಲುತ್ತಿದ್ದು, ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಕೂಪರ್​ 1957ರಲ್ಲಿ ಅಮೇರಿಕಾ ವಿರುದ್ಧ ನಡೆದ ಡೇವೀಸ್​ ಕಪ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನಂತರದ ವರ್ಷದಲ್ಲಿ ಅದೇ ತಂಡದ ವಿರುದ್ಧ ಸೋಲನುಭವಿಸಿದ್ದರಿಂದ ಮನನೊಂದು ಟೆನ್ನಿಸ್​ ವೃತ್ತಿ ಬದುಕಿನಿಂದ ಹೊರ ಬಂದಿದ್ದರು.

1950ರ ದಶಕದಲ್ಲಿ ಟೆನ್ನಿಸ್​ ಜಗತ್ತನ್ನು ಆಳಿದ್ದ ಆಶ್ಲೇ ಕೂಪರ್ 4 ಸಿಂಗಲ್ಸ್ ಹಾಗೂ 4 ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದರು. ಇನ್ನು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಆಸ್ಟ್ರೇಲಿಯಾ, ಯುಎಸ್​ಎ, ವಿಂಬಲ್ಡನ್​ ಪ್ರಶಸ್ತಿ ಜಯಿಸಿದ್ದರು. ಫ್ರೆಂಚ್​ ಓಪನ್​ನಲ್ಲೂ ಸೆಮಿಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ಒಂದೇ ವರ್ಷದಲ್ಲಿ ಮೂರು ಗ್ರ್ಯಾಂಡ್​ಸ್ಲಾಮ್​ ಪ್ರಶಸ್ತಿ ಗೆದ್ದ 11 ಜನರ ಹೆಸರಿನಲ್ಲಿ ಕೂಪ್​ ಕೂಡ ಒಬ್ಬರಾಗಿದ್ದಾರೆ.

ಕೂಪರ್​ ಅವರ ಸಾವಿಗೆ ಆಸ್ಟ್ರೇಲಿಯಾ ಟೆನ್ನಿಸ್​ ಸ್ಟಾರ್​ಗಳಾದ ಲೇವರ್​ ರೋಟ್​, ಕೆನ್​ ರೋಸ್​ವಾಲ್​, ಫ್ರಾಂಕ್​ ಸೆಡ್​​ಗಾಮ್​ , ಲೆವ್​ ಹೋಡ್​ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.