ಮಹಿಳೆಯರ ಕ್ರಿಕೆಟ್‌ ವೇಳೆ ಆಟಗಾರ್ತಿಯರನ್ನು ಪೇಚಿಗೆ ಸಿಲುಕಿಸಿದ 'ಅತಿಥಿ'! ವಿಡಿಯೋ ನೋಡಿ..

author img

By

Published : Sep 13, 2021, 7:48 PM IST

Watch: "Small Furry Pitch Invader" Interrupts All-Ireland T20 Women's Cup Match

ಆಲ್‌ ಐರ್ಲೆಂಡ್‌ ಟಿ-20 ಮಹಿಳಾ ಕಪ್‌ ಸೆಮಿಫೈನಲ್‌ ಪಂದ್ಯದ ವೇಳೆ ಪುಟ್ಟ ಶ್ವಾನವೊಂದು ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿ ಮಾಡಿತು.

ನವದೆಹಲಿ: ಭಾರತ, ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್‌ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಜಾರ್ವೊ-69 ಜೆರ್ಸಿ ಹೆಸರಿನ ಡೇನಿಯಲ್‌ ಜಾರ್ವಿಸ್‌ ಆಟಗಾರರಿಗೆ ಅಡ್ಡಿ ಉಂಟು ಮಾಡಿದ್ದ. 3ನೇ ಬಾರಿ ಆತ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ದುರ್ನಡತೆ ತೋರಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ಭಾರಿ ಟ್ರೋಲ್‌ ಕೂಡ ಆಗಿತ್ತು.

ಇದೀಗ ಆಲ್‌ ಐರ್ಲೆಂಡ್‌ ಟಿ-20 ಮಹಿಳಾ ಕಪ್‌ನ ಸೆಮಿಫೈನಲ್‌ ಪಂದ್ಯದ ವೇಳೆ ಸಾಕು ನಾಯಿಯೊಂದು ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿ ಉಂಟುಮಾಡಿದೆ.

ಶ್ವಾನ ಮೈದಾನಕ್ಕೆ ನುಗ್ಗಿತ್ತಲ್ಲದೆ, ಚೆಂಡನ್ನು ಬಾಯಲ್ಲಿ ಕಚ್ಚಿಕೊಂಡು ಮೈದಾನದಲ್ಲಿ ಓಡುತ್ತಾ ಕ್ರೀಸ್‌ನಲ್ಲಿದ್ದ ಆಟಗಾರರತ್ತ ಬಂದಿದೆ. ಈ ವೇಳೆ ಶ್ವಾನದ ಮಾಲೀಕ ಬಾಲಕ ಕೂಡ ಮೈದಾನಕ್ಕೆ ಬಂದು ಶ್ವಾನದ ಹಿಂದೆಯೇ ಓಡಿದ್ದಾನೆ.

ಶ್ವಾನ ಹಾಗೂ ಬಾಲಕ ಮೈದಾನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲ ನಿಮಿಷ ಪಂದ್ಯಕ್ಕೆ ಅಡ್ಡಿಯಾಗಿತ್ತು. ಬ್ರೇಡಿ ಮತ್ತು ಸಿಎಸ್‌ಎನ್‌ ನಡುವಿನ ಸೆಮಿ ಪಂದ್ಯದ ವೇಳೆ ಘಟನೆ ನಡೆದಿದ್ದು, ವಿಡಿಯೋ ಸಖತ್‌ ವೈರಲ್‌ ಆಗಿದೆ.

ಸಣ್ಣ ನಾಯಿಯಿಂದ ಅದ್ಭುತವಾದ ಫೀಲ್ಡಿಂಗ್‌ ಅಂತ ಕೆಲವರು ಟ್ರೋಲ್‌ ಮಾಡಿದ್ದಾರೆ. ಐರ್ಲೆಂಡ್‌ ಮಹಿಳಾ ಕ್ರಿಕೆಟ್‌ ಕೂಡ ತನ್ನ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ.

ಇದನ್ನೂ ಓದಿ: England vs India : ಮತ್ತೆ ಬಂದ ಜಾರ್ವೋ... ಬೌಲಿಂಗ್ ಮಾಡಿ, ಬೈರ್​ಸ್ಟೋಗೆ ಡಿಕ್ಕಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.