ಇದಲ್ಲವೇ ಕ್ರೀಡೆಯ ಸೊಗಸು.. ಫೆಡರರ್​, ನಡಾಲ್​ ಕಣ್ಣೀರಿಗೆ ವಿರಾಟ್​ ಕೊಹ್ಲಿ ಭಾವನಾತ್ಮಕ ನುಡಿ

author img

By

Published : Sep 24, 2022, 9:27 PM IST

virat-kohli-on-rafael-nadal-crying

ರೋಜರ್​ ಫೆಡರರ್​ ಟೆನಿಸ್​ ಬದುಕಿನ ಕೊನೆಯ ಪಂದ್ಯದದ ಬಳಿಕ ಕಣ್ಣೀರಿಟ್ಟರು. ಈ ವೇಳೆ ರಾಫೆಲ್​ ನಡಾಲ್​ ಕೂಡ ಗಳಗಳನೆ ಅತ್ತರು ಇದು ಕ್ರೀಡೆ ಸೊಗಸುಗಳಲ್ಲಿ ಒಂದಾಗಿದೆ. ಇದನ್ನು ಭಾರತದ ವಿರಾಟ್​ ಕೊಹ್ಲಿ ಕೂಡ ಹಾಡಿ ಹೊಗಳಿದ್ದಾರೆ.

24 ವರ್ಷಗಳಿಂದ ಟೆನಿಸ್​ ಅಂಗಳದ ರಾಜನಾಗಿ ಮೆರೆದಿದ್ದ ರೋಜರ್​ ಫೆಡರರ್​ ಇಂದಿಗೆ ತಮ್ಮ ವೃತ್ತಿ ಬದುಕು ಮುಗಿಸಿದರು. ಲೆವರ್​ ಕಪ್​ನಲ್ಲಿ ಎದುರಾಳಿ ರಾಫೆಲ್​ ನಡಾಲ್​ ವಿರುದ್ಧ ಸೋಲುವ ಮೂಲಕ ಅವರು ಅಭಿಯಾನ ಮುಗಿಸಿದರು.

ವಿದಾಯ ಭಾಷಣ ಮಾಡಿದ ರೋಜರ್​ ತನ್ನ ವೃತ್ತಿ ಬದುಕಿನಲ್ಲಿ ಬಂದ ಎಲ್ಲರಿಗೂ ಧನ್ಯವಾದ ಹೇಳಿದರು. ಈ ವೇಳೆ ಉಮ್ಮಳಿಸಿ ಬಂದ ದುಃಖದಿಂದ ಅವರು ಕಣ್ಣೀರಾದರು. ಈ ವೇಳೆ ಸಹ ಆಟಗಾರ ರಾಫೆಲ್​ ನಡಾಲ್​ ಕೂಡ ಬಿಕ್ಕಳಿಸಿ ಅತ್ತು ಗೆಳೆಯನ ದುಃಖದಲ್ಲಿ ಭಾಗಿಯಾದರು.

ಫೆಡರರ್​, ನಡಾಲ್​ ಕಣ್ಣೀರಿಗೆ ವಿರಾಟ್​ ಕೊಹ್ಲಿ ಭಾವನಾತ್ಮಕ ನುಡಿ
ಫೆಡರರ್​, ನಡಾಲ್​ ಕಣ್ಣೀರಿಗೆ ವಿರಾಟ್​ ಕೊಹ್ಲಿ ಭಾವನಾತ್ಮಕ ನುಡಿ

ಪಂದ್ಯದ ವೇಳೆ ಮೈದಾನದಲ್ಲಿ ಮದಗಜಗಳಂತೆ ಕಾದಾಡುವ ಇಬ್ಬರು ಶ್ರೇಷ್ಠ ಟೆನಿಸ್​ ಪಟುಗಳು ಮಗುವಿನಂತೆ ಕಣ್ಣೀರಿಟ್ಟಿದ್ದು ಎಲ್ಲರಲ್ಲೂ ಭಾವುಕತೆ ಮೂಡಿಸಿತು. ಇಬ್ಬರ ಅಪ್ಯಾಯಮಾನತೆಗೆ ಸೋತ ಭಾರತದ ವಿರಾಟ್​ ಕೊಹ್ಲಿ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

"ಇಬ್ಬರು ಎದುರಾಳಿಗಳು ಎಂದಾದರೂ ಈ ರೀತಿಯ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆಂದು ಯಾರಾದರೂ ಯೋಚಿಸಿದ್ದೀರಾ. ಕ್ರೀಡೆಯ ಸೊಗಸೆಂದರೆ ಇದಲ್ಲವೆ?. ಇದು ನನ್ನ ಪಾಲಿಗೆ ಕ್ರೀಡೆಯಲ್ಲಿನ ಅದ್ಭುತ ಕ್ಷಣವಾಗಿದೆ. ಸಹ ಆಟಗಾರ ನಮಗಾಗಿ ಕಣ್ಣೀರಿಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ದೇವರು ನಿಮಗೆ ನೀಡಿದ ಪ್ರತಿಭೆಯನ್ನು ಬಳಸಿಕೊಂಡಿದ್ದೇ ಇದಕ್ಕೆ ಕಾರಣ. ಇಬ್ಬರು ದಿಗ್ಗಜರ ಬಗ್ಗೆ ಗೌರವವಿರಲಿ" ಎಂದು ಬರೆದುಕೊಂಡಿದ್ದಾರೆ.

ಓದಿ: ನಡಾಲ್​ ಜೊತೆಗೂಡಿ ಅಂತಿಮ ಪಂದ್ಯವಾಡಿದ ಫೆಡರರ್​.. ಸೋಲಿನೊಂದಿಗೆ ಟೆನ್ನಿಸ್​ ಅಂಗಳಕ್ಕೆ ಭಾವನಾತ್ಮಕ ವಿದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.