ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಕಂಚಿನ ಪದಕ ಗೆದ್ದ ವಿನೇಶ್‌ ಫೋಗಟ್‌

author img

By

Published : Sep 15, 2022, 7:45 PM IST

ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಟ್‌

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2022ರಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್‌ ಫೋಗಟ್‌ ಕಂಚು ಗೆದ್ದಿದ್ದಾರೆ. ವಿನೇಶ್ ಫೋಗಟ್ 53 ಕೆಜಿ ವಿಭಾಗದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರು.

ಬೆಲ್‌ಗ್ರೇಡ್: ಭಾರತದ ವಿನೇಶ್‌ ಫೋಗಟ್‌ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ವಿನೇಶ್‌ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಸ್ವೀಡನ್‌ನ ಎಮ್ಮಾ ಜೊನ್ನಾ ವಿರುದ್ಧ 6-0 ಅಂತರದಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮಂಗಳವಾರ ನಡೆದ ಮೊದಲ ಸುತ್ತಿನಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತೆ ಮಂಗೋಲಿಯಾದ ಖುಲಾನ್ ಬತ್ಖುಯಾಗ್ ವಿರುದ್ಧ ಸೋತಿದ್ದರು. ಆದರೆ ಖುಲಾನ್‌ ಫೈನಲ್‌ ಪ್ರವೇಶಿಸಿದ್ದರಿಂದ ವಿನೇಶ್‌ಗೆ ರಿಪಿಕೇಜ್‌ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಿತು.

ಇದನ್ನೂ ಓದಿ: 20 ಗ್ರ್ಯಾಂಡ್​ಸ್ಲ್ಯಾಮ್​ಗಳ ಒಡೆಯ ರೋಜರ್​ ಫೆಡರರ್​ ನಿವೃತ್ತಿ ಘೋಷಣೆ

2019ರಲ್ಲಿ ಕಜಕಿಸ್ತಾನದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ವಿನೇಶ್‌ ಕಂಚು ಜಯಿಸಿದ್ದರು. ಇನ್ನು ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದ ಫ್ರಿ ಸ್ಟೈಲ್‌ನಲ್ಲಿ ಶ್ರೀಲಂಕಾದ ಚಮೋಡಿಯಾ ಕೆಶಾನಿ ಮದುರವಲಗೆ ವಿರುದ್ಧ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.