ಇಂಡಿಯಾ ಓಪನ್: ಕ್ವಾರ್ಟರ್ ಫೈನಲ್ಸ್​ಗೆ ಸಿಂಧು, ಸೋತು ಹೊರಬಿದ್ದ ಸೈನಾ

author img

By

Published : Jan 13, 2022, 4:09 PM IST

Sindhu advances, Saina knocked out of India Open

2012ರ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ 17-19, 9-21ರ ಅಂತರದಲ್ಲಿ ಭಾರತದವರೇ ಆದ 111 ಶ್ರೇಯಾಂಕದ ಮಾಳವಿಕಾ ಬನ್ಸೋದ್ ವಿರುದ್ಧ ಕೇವಲ 34 ನಿಮಿಷಗಳಲ್ಲಿ ಪ್ರತಿರೋಧ ತೋರದೆ ಶರಣಾದರು.

ನವದೆಹಲಿ: ಭಾರತದ 2 ಬಾರಿಯ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಹೆಚ್.​ಎಸ್.ಪ್ರಣಯ್​ ಯುನೆಕ್ಸ್​ ಸನ್​ರೈಸ್​ ಇಂಡಿಯಾ ಓಪನ್​ ಟೂರ್ನಿಯಲ್ಲಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಮಾಜಿ ಚಾಂಪಿಯನ್​ ಸೈನಾ ನೆಹ್ವಾಲ್​ 2ನೇ ಸುತ್ತಿನ ಪಂದ್ಯದಲ್ಲೇ ಸೋಲು ಕಂಡು ನಿರಾಶೆ ಅನುಭವಿಸಿದ್ದಾರೆ.

2012ರ ಒಲಿಂಪಿಕ್ಸ್ ಪದಕ ವಿಜೇತೆ ಸೈನಾ 17-19, 9-21ರ ಅಂತರದಲ್ಲಿ ಭಾರತದವರೇ ಆದ 111 ಶ್ರೇಯಾಂಕದ ಮಾಳವಿಕಾ ಬನ್ಸೋದ್ ವಿರುದ್ಧ ಕೇವಲ 34 ನಿಮಿಷಗಳಲ್ಲಿ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡರು.

ಇನ್ನು ಮಾಜಿ ವಿಶ್ವಚಾಂಪಿಯನ್​ ಪಿ.ವಿ.ಸಿಂಧು ಭಾರತದ ಸಹ ಶಟ್ಲರ್​ ಇರಾ ಶರ್ಮಾ ವಿರುದ್ಧ 21-0, 21-10 ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದರು. ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಿಂಧು, ತಮ್ಮ ಮುಂದಿನ ಸುತ್ತಿನಲ್ಲಿ ಆಶ್ಮಿತಾ ಚಹಿಲಾ ವಿರುದ್ಧ ಸೆಣಸಾಡಲಿದ್ದಾರೆ.

ಆಶ್ಮಿತಾ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್​ನ ಯೆಲ್ಲೆ ಹೊಯಾಕ್ಸ್ ವಿರುದ್ಧ 21-17, 21-14ರ ಅಂತರದಲ್ಲಿ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಪ್ರವೇಶ ಪಡೆದರು.

ಸೈನಾರನ್ನು ಮಣಿಸಿದ ಮಾಳವಿಕ ತಮ್ಮ ಮುಂದಿನ ಸುತ್ತಿನಲ್ಲಿ ಆಕರ್ಷಿ ಕಶ್ಯಪ್​ ವಿರುದ್ಧ ಕ್ವಾರ್ಟರ್​ ಫೈನಲ್ಸ್​ನಲ್ಲಿ ಸೆಣಸಲಿದ್ದಾರೆ.

ಪುರುಷರ ವಿಭಾಗದಲ್ಲಿ ಮಿಥುನ್ ಮಂಜುನಾಥ್​ ಕೋವಿಡ್​ ಸೋಂಕು ಕಾರಣಕ್ಕೆ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ ಪ್ರಣಯ್​ ಸುಲಭವಾಗಿ ಕ್ವಾರ್ಟರ್ ಫೈನಲ್ಸ್‌ಗೆ ಎಂಟ್ರಿ ಕೊಟ್ಟರು. ಪ್ರಣಯ್ ಮುಂದಿನ ಸುತ್ತಿನಲ್ಲಿ 3ನೇ ಶ್ರೇಯಾಂಕದ ಲಕ್ಷ್ಯ ಮತ್ತು ಸ್ವೀಡನ್​ನ ಫೆಲಿಕ್ಸ್​ ನಡುವಿನ 2ನೇ ಸುತ್ತಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ:ವಿಶ್ವದ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ U-19 ಬ್ಯಾಡ್ಮಿಂಟನ್ ಆಟಗಾರ್ತಿ ತಸ್ನಿಮ್ ಮಿರ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.