ಕಾಮನ್​ವೆಲ್ತ್​ ಗೇಮ್ಸ್​: ಪಾಕ್​ಗೆ ಸಿಕ್ತು ಮೊದಲ ಚಿನ್ನ, ಮುಹಮ್ಮದ್‌ಗೆ ಮೀರಾಬಾಯಿ ಚಾನು ಪ್ರೇರಣೆಯಂತೆ!

author img

By

Published : Aug 4, 2022, 6:28 PM IST

Etv BharatPakistani weightlifter Nooh Dastgir Butt

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ಚಿನ್ನ ಗೆದ್ದು ಕೊಟ್ಟಿರುವ ಮುಹಮ್ಮದ್ ದಸ್ತಗಿರ್‌ ಭಟ್‌​​, ಭಾರತದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬರ್ಮಿಂಗ್​ಹ್ಯಾಮ್​(ಲಂಡನ್​): ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿಂದು ಪಾಕಿಸ್ತಾನದ ಮುಹಮ್ಮದ್ ನೂಹ್ ಭಟ್​ ಚೊಚ್ಚಲ ಚಿನ್ನ ಗೆದ್ದರು. ಪುರುಷರ 109 ಕೆಜಿ ವೇಟ್ ಲಿಫ್ಟಿಂಗ್​ ವಿಭಾಗದಲ್ಲಿ 405 ಕೆಜಿ ಭಾರ ಎತ್ತುವ ಮೂಲಕ ಪಾಕ್​ ಕ್ರೀಡಾಪಟು ಈ ಸಾಧನೆ ಮಾಡಿದರು. ನಂತರ ಭಾರತದ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

  • Muhammad Nooh Dastgir Butt wins Pakistan's first gold of the 2022 CWG in the men's 109+kg weightlifting category with a total of 405kg (172kg snatch + 232kg. 🇮🇳Gurdeep Dullet wins his first CWG bronze with a total of 390kg (167kg + 223kg). David Liti of NZ gets silver with 394kg pic.twitter.com/YI3zkLgkPr

    — jonathan selvaraj (@jon_selvaraj) August 3, 2022 " class="align-text-top noRightClick twitterSection" data=" ">

ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 24 ವರ್ಷದ ಈ ಕ್ರೀಡಾಳುವಿಗೆ ಭಾರತದ ವೇಟ್ ಲಿಫ್ಟರ್ ಮೀರಾಬಾನು ಚಾನು ಪ್ರೇರಣೆಯಂತೆ. "ಕಳೆದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಮೀರಾ ಬಾಯಿ ಬೆಳ್ಳಿ ಗೆದ್ದಿದ್ದು ನನ್ನಲ್ಲಿ ಹೆಮ್ಮೆ ಉಂಟು ಮಾಡಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಬರುವ ನಾವೂ ಸಹ ಪದಕ ಗೆಲ್ಲಬಲ್ಲೆವು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ" ಎಂದರು.

ಇದನ್ನೂ ಓದಿ: ಕಾಮನ್​ವೆಲ್ತ್​ ಗೇಮ್ಸ್​: 109 ಕೆಜಿ ವಿಭಾಗದಲ್ಲಿ ಗುರುದೀಪ್​ ಸಿಂಗ್​ಗೆ ಕಂಚು

2015ರಲ್ಲಿ ಪುಣೆಯಲ್ಲಿ ನಡೆದ ಯೂತ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗಿಯಾಗಿರುವುದನ್ನು ಮೆಲುಕು ಹಾಕಿದ ಮುಹಮ್ಮದ್, 2016ರಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ಸೌತ್ ಏಷ್ಯನ್​ ಗೇಮ್ಸ್​​ ಬಗ್ಗೆಯೂ ಮಾತನಾಡಿದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ಅಪಾರ ಪ್ರೀತಿ ಹಾಗೂ ಬೆಂಬಲ ಸಿಕ್ಕಿದೆ ಎಂದು ಹೇಳಿದರು.

ಭಾರತಕ್ಕೆ ಮತ್ತೊಮ್ಮೆ ಹೋಗಬೇಕೆಂದಿರುವ ಅವರು, ಪಾಕಿಸ್ತಾನದಲ್ಲಿರುವ ಅಭಿಮಾನಿಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳು ನನಗೆ ಭಾರತದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 109 ಕೆಜಿ ವೇಟ್ ಲಿಫ್ಟಿಂಗ್​ ವಿಭಾಗದಲ್ಲಿ ಭಾರತದ ಗುರುದೀಪ್​ ಸಿಂಗ್​ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಈ ಸಂದರ್ಭದಲ್ಲಿ ಪಾಕ್​ ಅಥ್ಲೀಟ್ಸ್ ಜೊತೆಗೂ ಕೆಲ ಹೊತ್ತು ಅವರು ಮಾತುಕತೆ ನಡೆಸಿದರು.

"ನಾನು ಹಾಗು ವೇಟ್ ಲಿಫ್ಟರ್​ ಗುರ್ದೀಪ್ ಸಿಂಗ್ ಒಳ್ಳೆಯ ಸ್ನೇಹಿತರು. ಕಳೆದ 7-8 ವರ್ಷಗಳಿಂದ ನಮ್ಮ ನಡುವೆ ಉತ್ತಮ ಆತ್ಮೀಯತೆ ಇದೆ. ವಿದೇಶದಲ್ಲಿ ಇಬ್ಬರೂ ಒಟ್ಟಿಗೆ ತರಬೇತಿ ಸಹ ಪಡೆದುಕೊಂಡಿದ್ದೇವೆ. ಕಾಮನ್​ವೆಲ್ತ್​ನಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳಾಗಿದ್ದೇವೆ. ಇದೊಂದು ವೈಯಕ್ತಿಕ ಸಾಮರ್ಥ್ಯದ ಸ್ಪರ್ಧೆ ಮಾತ್ರ" ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.