ಕಾಮನ್​ವೆಲ್ತ್​ ಗೇಮ್ಸ್​: ಹೈಜಂಪ್, ಸ್ಕ್ವ್ಯಾಷ್​ನಲ್ಲಿ ಐತಿಹಾಸಿಕ ಕಂಚು, ಜುಡೋದಲ್ಲಿ ಮೂರನೇ ಪದಕ

author img

By

Published : Aug 4, 2022, 7:55 AM IST

commonwealth-games

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಸ್ಕ್ವ್ಯಾಶ್​​, ಹೈಜಂಪ್​, ಜುಡೋ, ವೇಟ್​ ಲಿಫ್ಟಿಂಗ್​ನಲ್ಲಿ ಪದಕಗಳನ್ನು ಕೊಳ್ಳೆ ಹೊಡೆದಿದೆ. ಸ್ಕ್ವ್ಯಾಷ್​, ಹೈಜಂಪ್​ನಲ್ಲಿ ಪದಕ ಸಿಕ್ಕಿರುವುದು ಇದೇ ಮೊದಲು.

ಬರ್ಮಿಂಗ್​ಹ್ಯಾಮ್​(ಯುಕೆ): ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ನಿನ್ನೆ ಒಂದೇ ದಿನ ಟೆನಿಸ್​, ಸ್ಕ್ವ್ಯಾಶ್​​, ಹೈಜಂಪ್​, ಜುಡೋ, ವೇಟ್​ ಲಿಫ್ಟಿಂಗ್​ನಲ್ಲಿ ಪದಕ ಸಿಕ್ಕಿದೆ.

ಕಾಮನ್​ವೆಲ್ತ್​ ಗೇಮ್ಸ್​ ಪದಕ ಪಟ್ಟಿ
ಕಾಮನ್​ವೆಲ್ತ್​ ಗೇಮ್ಸ್​ ಪದಕ ಪಟ್ಟಿ

ಜುಡೋದಲ್ಲಿ ಮೂರನೇ ಪದಕ: ಮಹಿಳೆಯರ ಜುಡೋ ಸ್ಪರ್ಧೆಯ 78+ ಕೆಜಿ ವಿಭಾಗದಲ್ಲಿ ಭಾರತದ ತುಲಿಕಾ ಮಾನ್​ ಬೆಳ್ಳಿ ಪದಕ ಜಯಿಸಿದರು. ಫೈನಲ್​ ಪ್ರವೇಶಿಸಿದ್ದ ದೆಹಲಿ ಮೂಲದ ಜುಡೋ ಪಟು, ಕಾಮನ್​ವೆಲ್ತ್​ನಲ್ಲಿ ವಿಶ್ವ ನಂ 5 ಶ್ರೇಯಾಂಕಿತೆ ಸ್ಕಾಟ್ಲೆಂಡ್​ನ ಸಾರಾ ಆ್ಯಡ್ಲಿಂಗ್ಟನ್​ ವಿರುದ್ಧ ಸೋಲನುಭವಿಸಿದರು. ಈ ಕೂಟದಲ್ಲಿ ಜುಡೋಗೆ ಭಾರತಕ್ಕೆ ಸಿಕ್ಕ ಮೂರನೇ ಪದಕ ಇದಾಗಿದೆ.

"ಲವ್"​ಗೆ ಒಲಿದ ಕಂಚು: ವೇಟ್​ ಲಿಫ್ಟಿಂಗ್​ನ 109 ಕೆಜಿ ವಿಭಾಗದಲ್ಲಿ ಲವ್​ಪ್ರೀತ್​ಸಿಂಗ್​ ಕಂಚಿನ ಪದಕಕ್ಕೆ ಮುತ್ತಿಟ್ಟರು. ಪಂಜಾಬ್​ನ ಲವ್​ಪ್ರೀತ್​ ಒಟ್ಟು 355 ಕೆಜಿ ತೂಕ ಎತ್ತಿ 3ನೇ ಸ್ಥಾನ ಪಡೆದರು. ಸ್ನ್ಯಾಚ್​ನಲ್ಲಿ 163, ಕ್ಲೀನ್​ಅಂಡ್ ಜರ್ಕ್​ನಲ್ಲಿ 192 ಕೆಜಿ ಎತ್ತಿದರು. ವೇಟ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಸಿಕ್ಕ 8ನೇ ಪದಕವಾಗಿದೆ. ಲವ್​ಪ್ರೀತ್​ಗೆ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಇದು ಚೊಚ್ಚಲ ಪದಕ ಸಂಭ್ರಮವಾಗಿದೆ.

  • BRONZE FOR SAURAV! 🥉

    Our talented Squash player @SauravGhosal 🎾 clinches Bronze after getting past James Willstrop of England 3-0 (11-6, 11-1, 11-4) in the Bronze medal match 🇮🇳

    Way to go Saurav 🔥

    Congratulations! 🇮🇳's 1st medal in Squash this #CWG2022 👏#Cheer4India pic.twitter.com/At5VcvRfH0

    — SAI Media (@Media_SAI) August 3, 2022 " class="align-text-top noRightClick twitterSection" data=" ">

ಸೌರವ್​ಗೆ ಸ್ಕ್ವ್ಯಾಶ್​​ ಕಂಚು: ಭಾರತದ ತಾರಾ ಸ್ಕ್ವ್ಯಾಶ್​​ ಆಟಗಾರ ಸೌರವ್​ ಘೋಷಾಲ್ ​ಪುರುಷರ ಸಿಂಗಲ್ಸ್​ನಲ್ಲಿ ಐತಿಹಾಸಿಕ ಕಂಚಿನ ಪದಕ ಸಾಧನೆ ಮಾಡಿದರು. ಇಂಗ್ಲೆಂಡ್​ನ ಜೇಮ್ಸ್​ ವಿಲ್ಸ್​ಟ್ರೊಪ್​ ವಿರುದ್ಧ 11-6, 11-1,11-4 ಅಂತರದಲ್ಲಿ ಜಯ ಸಾಧಿಸಿದರು. ಕಾಮನ್​ವೆಲ್ತ್​ ಗೇಮ್ಸ್​ ಇತಿಹಾಸದಲ್ಲಿಯೇ ಭಾರತಕ್ಕೆ ಸ್ಕ್ವ್ಯಾಶ್​ಗೆ ಸಿಕ್ಕ ಮೊದಲ ಪದಕ ಇದಾಗಿದೆ.

ಹೈಜಂಪ್​ನಲ್ಲಿ ಐತಿಹಾಸಿಕ ಕಂಚು: ಪುರುಷರ ಹೈಜಂಪ್‌ನಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಪಡೆದರು. 23ರ ಹರೆಯದ ತೇಜಸ್ವಿನ್​ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಹೈಜಂಪ್​ನಲ್ಲಿ ಮೊದಲ ಪದಕ ಭಾರತಕ್ಕೆ ತಂದುಕೊಟ್ಟರು.

ತೇಜಸ್ವಿನ್ ಶಂಕರ್ ಅವರು 2.22 ಮೀಟರ್‌ಗಳಷ್ಟು ಜಂಪ್​ ಮಾಡಿ ಮೂರನೇ ಸ್ಥಾನ ಪಡೆದರು. ನ್ಯೂಜಿಲ್ಯಾಂಡ್​​​ನ​ ಹಮೀಶ್ ಕೆರ್ 2.25 ಮೀಟರ್‌ ಜಿಗಿದರೆ ಚಿನ್ನ ಬಾಚಿದರೆ, ಆಸ್ಟ್ರೇಲಿಯಾದ ಬ್ರ್ಯಾಂಡನ್ ಸ್ಟಾರ್ಕ್ ಬೆಳ್ಳಿ ಗೆದ್ದರು.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತೇಜಸ್ವಿನ್ ಶಂಕರ್​ 2.27 ಮೀ ಎತ್ತರ ಜಿಗಿದು ದಾಖಲೆ ಬರೆದಿದ್ದರು. ತೇಜಸ್ವಿನ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೈಜಂಪ್ ವಿಭಾಗದಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

18 ಪದಕ, 7 ನೇ ಸ್ಥಾನ: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ 5 ಚಿನ್ನ, 6 ಬೆಳ್ಳಿ, 7 ಕಂಚು ಸೇರಿದಂತೆ 18 ಪದಕಗಳನ್ನು ಪಡೆದಿರುವ ಭಾರತ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಇಂದು ಬಾಕ್ಸಿಂಗ್​, ವೇಟ್​ ಲಿಫ್ಟಿಂಗ್​ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕ ಸಿಗುವ ನಿರೀಕ್ಷೆ ಇದೆ.

ಓದಿ: ಕಾಮನ್​ವೆಲ್ತ್​ ಗೇಮ್ಸ್: ಕಂಚು ಗೆದ್ದ ಭಾರತದ ವೇಟ್‌ ಲಿಫ್ಟರ್‌ ಲವ್‌ಪ್ರೀತ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.