CWG 2022: ಬಾಕ್ಸಿಂಗ್​​ನಲ್ಲಿ ಭಾರತಕ್ಕೆ 6 ಪದಕ ಪಕ್ಕಾ; ಸೆಮೀಸ್​​ ತಲುಪಿದ ಹಾಕಿ, ಹಿಮಾದಾಸ್

author img

By

Published : Aug 4, 2022, 9:37 PM IST

Commonwealth Games India

ಕಾಮನ್​ವೆಲ್ತ್ ಗೇಮ್ಸ್​ನ 7ನೇ ದಿನವಾದ ಇಂದು ಕೂಡ ಭಾರತದ ಅಥ್ಲೀಟ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಬರ್ಮಿಂಗ್​ಹ್ಯಾಮ್​(ಲಂಡನ್​): ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳ ಗೆಲುವಿನ ಓಟ ಮುಂದುವರೆದಿದೆ. 7ನೇ ದಿನವಾದ ಇಂದು ಕೂಡ ಕೆಲ ಅಥ್ಲೀಟ್‌​​ಗಳು ಗಮನಾರ್ಹ ಪ್ರದರ್ಶನ ನೀಡಿ, ದೇಶಕ್ಕೆ ಪದಕಗಳನ್ನು ಖಚಿತಪಡಿಸಿದ್ದಾರೆ. ಪುರುಷರ ಬಾಕ್ಸಿಂಗ್​ ವಿಭಾಗದಲ್ಲಿ ಅಮಿತ್ ಪಂಗಲ್​, ಜೈಸ್ಮಿನ್ ಲಂಬೋರಿಯಾ ಮತ್ತು ಸಾಗರ್​ ಅಹ್ಲಾವತ್​​ ಈಗಾಗಲೇ ಸಮಿಫೈನಲ್​ಗೆ ಲಗ್ಗೆ ಹಾಕಿದ್ದು, ದೇಶಕ್ಕೆ ಪದಕ ಭರವಸೆ ಮೂಡಿಸಿದ್ದಾರೆ.

ಇದರ ಜೊತೆಗೆ ಪೂಲ್ ಬಿ ವಿಭಾಗದಲ್ಲಿ ವೇಲ್ಸ್ ವಿರುದ್ಧ ನಡೆದ ಹಾಕಿ ಪಂದ್ಯದಲ್ಲಿ 4-1 ಅಂತರದಿಂದ ಗೆಲುವು ದಾಖಲು ಮಾಡಿರುವ ಭಾರತ ಪುರುಷರ ತಂಡ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ. ಅಥ್ಲೆಟಿಕ್ಸ್​​ನಲ್ಲಿ ಭಾರತದ ಹಿಮಾದಾಸ್ ಮಹಿಳೆಯರ 200 ಮೀಟರ್ ಓಟದಲ್ಲಿ ಸೆಮಿಫೈನಲ್​​ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮಂಜು ಬಾಲಾ ಮಹಿಳೆಯರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಫೈನಲ್​ ತಲುಪಿದ್ದಾರೆೆ.

ಇದನ್ನೂ ಓದಿ: ನಾಳೆಯಿಂದ ಪ್ರೊ ಕಬಡ್ಡಿ ಲೀಗ್ ಹರಾಜು: ಯಾರ ಪಾಲಾಗ್ತಾರೆ ಬುಲ್ಸ್​ನ ಪವನ್​ ಶೆರಾವತ್?

ಶಟ್ಲರ್​​ಗಳಾದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್​​ ಬ್ಯಾಡ್ಮಿಂಟನ್​ ಸಿಂಗಲ್ಸ್ ವಿಭಾಗದಲ್ಲಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿದ್ದಾರೆ. ಪ್ರಸ್ತುತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 5 ಚಿನ್ನ ಸೇರಿದಂತೆ 18 ಪದಕ ಗೆದ್ದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.