ನೆನಪಿದೆಯಾ? 6 ಸಿಕ್ಸ್ ಸಿಡಿಸಿ ಯುವರಾಜ್ ಸಿಂಗ್ 'ಸಿಕ್ಸರ್​ ಕಿಂಗ್' ಆಗಿದ್ದು ಇದೇ ದಿನ..

author img

By

Published : Sep 19, 2021, 7:54 PM IST

ಯುವರಾಜ್ ಸಿಂಗ್

ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಹಾಗೂ ಯುವಿ - ಈ ಮೂವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದುಕೊಂಡು 218 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿ ಸೋಲುಂಡಿತ್ತು..

2007ರ ಸೆಪ್ಟೆಂಬರ್ 19.. ಇಂಗ್ಲೆಂಡ್​ ತಂಡದ ಸ್ಟುವರ್ಟ್​ ಬ್ರಾಡ್​ ಎಸೆದ ಒಂದೇ ಓವರ್ ನ ಎಲ್ಲಾ ಆರು ಬಾಲ್​ಗಳನ್ನು ಬೌಂಡರಿ ಗೆರೆ ದಾಟಿಸಿ ​ಯುವರಾಜ್ ಸಿಂಗ್ 'ಸಿಕ್ಸರ್​ ಕಿಂಗ್' ಆದ ದಿನವಿದು.

ಭಾರತ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 6 ಬಾಲಿಗೆ 6 ಸಿಕ್ಸ್​​ ಸಿಡಿಸಿ ಇಂದಿಗೆ 14 ವರ್ಷ ಸಂದಿವೆ. ಈ ಅದ್ಭುತ ಹಾಗೂ ಮೈನವಿರೇಳಿಸುವ ಘಳಿಗೆಯನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಮ್ಮ ಅಧಿಕೃತ ಟ್ವೀಟರ್​ನಲ್ಲಿ ಸ್ಮರಿಸಿವೆ.

ಇದನ್ನೂ ಓದಿ: 2007ರ ಟಿ-20 ವಿಶ್ವಕಪ್​ನಲ್ಲಿ ನಾನೇ ನಾಯಕನಾಗುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದೆ! ಆದ್ರೆ ಧೋನಿ ಆದ್ರು

ದಕ್ಷಿಣ ಆಫ್ರಿಕಾದಲ್ಲಿ ಭಾರತ - ಇಂಗ್ಲೆಂಡ್ ನಡುವೆ ನಡೆದಿದ್ದ ಟಿ20 ಪಂದ್ಯದಲ್ಲಿ ಯುವರಾಜ್​ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಒಂದೇ ಓವರ್​ನಲ್ಲಿ ಆರು ಸಿಕ್ಸ್ ಹೊಡೆದು ಬೌಲರ್​ ಸ್ಟುವರ್ಟ್​ ಬ್ರಾಡ್​ಗೆ ಯುವರಾಜ್ ಸಿಂಗ್ ಮುಖಭಂಗವಾಗುವಂತೆ ಮಾಡಿದ್ದರು.

ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಹಾಗೂ ಯುವಿ - ಈ ಮೂವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದುಕೊಂಡು 218 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 20 ಓವರ್‌ಗೆ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿ ಸೋಲುಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.