ನಾಯಕನಾಗಿ ನನ್ನನ್ನು ನಂಬಿದ ಎಂಎಸ್​ ಧೋನಿಗೆ ದೊಡ್ಡ ಧನ್ಯವಾದ: ವಿರಾಟ್​ ಕೊಹ್ಲಿ

author img

By

Published : Jan 15, 2022, 8:29 PM IST

Virat Kohli thanks MS Dhoni

Virat Kohli thanks MS Dhoni and Ravi Shastri: ದಾಖಲೆಗಳ ವೀರ, ಡೆಲ್ಲಿ ಡ್ಯಾಶರ್, ರನ್​ ಮಷಿನ್​ ಮುಂತಾದ ಹೆಸರುಗಳಿಂದ ಕ್ರಿಕೆಟ್​ ಜಗತ್ತಿನಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ವಿರಾಟ್​​ ಕೊಹ್ಲಿ ಟೆಸ್ಟ್​​ ಕ್ರಿಕೆಟ್​ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ.

ಹೈದರಾಬಾದ್​: ದಿಢೀರ್​ ಬೆಳವಣಿಗೆವೊಂದರಲ್ಲಿ ಟೀಂ ಇಂಡಿಯಾ ಟೆಸ್ಟ್​ಗೂ ಡೆಲ್ಲಿ ಡ್ಯಾಶರ್​ ವಿರಾಟ್​​ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. 2014ರಲ್ಲಿ ಮಹೇಂದ್ರ ಸಿಂಗ್​ ಧೋನಿ ಟೆಸ್ಟ್​ ನಾಯಕತ್ವದಿಂದ ಹಠಾತ್​ ಆಗಿ ಕೆಳಗಿಳಿಯುತ್ತಿದ್ದಂತೆ ಆ ಜವಾಬ್ದಾರಿ ವಹಿಸಿಕೊಂಡ ರನ್ ಮಷಿನ್​​ ತಂಡವನ್ನು ನಂಬರ್​​ 1 ಪಟ್ಟಕೇರಿಸಿರುವ ಸಾಧನೆ ಮಾಡಿದ್ದು ವಿಶೇಷ ದಾಖಲೆ ಮತ್ತು ಇತಿಹಾಸದ ಪುಟಗಳಲ್ಲಿ ಸೇರಿದೆ.

ಕಾಂಗರೂ ನಾಡಲ್ಲಿ, ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಟೆಸ್ಟ್​​ ಸರಣಿ ಗೆದ್ದಿರುವ ವಿರಾಟ್​​ ಕೊಹ್ಲಿ ತಂಡವನ್ನ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​​ನಲ್ಲಿ ಫೈನಲ್​ವರೆಗೆ ತೆಗೆದುಕೊಂಡು ಹೋಗಿದ್ದರು. ಟೆಸ್ಟ್​​​ ಕ್ರಿಕೆಟ್​​ನಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿರಾಟ್​ ಇದೀಗ ದಿಢೀರ್​ ಆಗಿ ರಾಜೀನಾಮೆ ನೀಡಿದ್ದು, ಕೇವಲ ಆಟಗಾರನಾಗಿ ತಂಡದಲ್ಲಿ ಇರುವುದಾಗಿ ತಿಳಿಸಿದ್ದಾರೆ.

Virat Kohli thanks MS Dhoni
ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆದ್ದ ವಿರಾಟ್​ ಪಡೆ

ತಾವು ಟೆಸ್ಟ್ ನಾಯಕತ್ವ ತ್ಯಜಿಸಿರುವ ಬಗ್ಗೆ ಭಾವನಾತ್ಮಕ ಪತ್ರವನ್ನು ಟ್ವಿಟ್ಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದು, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿರಿ: ಟೆಸ್ಟ್​ ತಂಡದ ನಾಯಕತ್ವಕ್ಕೂ ರಾಜೀನಾಮೆ ಘೋಷಿಸಿದ ಕೊಹ್ಲಿ.. ದಾಖಲೆಗಳ ವೀರ ಬರೆದ್ರು ಭಾವನಾತ್ಮಕ ಪತ್ರ

ಟೆಸ್ಟ್​​ ಕ್ರಿಕೆಟ್​​ನಲ್ಲಿ ನಾಯಕನಾಗಿ ನನ್ನನ್ನು ನಂಬಿದ, ಭಾರತೀಯ ಕ್ರಿಕೆಟ್​​ ಮುನ್ನಡೆಸಬಲ್ಲ ಸಮರ್ಥ ವ್ಯಕ್ತಿ ಎಂದುಕೊಂಡ ಮಹೇಂದ್ರ ಸಿಂಗ್​ ಧೋನಿಗೆ ಧನ್ಯವಾದ ಎಂದಿರುವ ವಿರಾಟ್​​ ಕೊಹ್ಲಿ, ಭಾರತೀಯ ಕ್ರಿಕೆಟ್​ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ನನ್ನಲ್ಲಿ ಇದೆ ಎಂದು ಗುರುತಿಸಿದವರು ಅವರು. ನನ್ನ ಅದ್ಭುತ ಜರ್ನಿ ಹಿಂದೆ ಅವರ ಪಾಲು ಯಾವಾಗಲು ಇರುತ್ತದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಮಾಜಿ ಕೋಚ್​ ರವಿಶಾಸ್ತ್ರಿಗೂ ಥ್ಯಾಂಕ್ಸ್​​​

Virat Kohli thanks MS Dhoni
ರವಿಶಾಸ್ತ್ರಿಗೆ ಧನ್ಯವಾದ ಹೇಳಿದ ವಿರಾಟ್​​ ಕೊಹ್ಲಿ

ಇದರ ಜೊತೆಗೆ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿಗೂ ಥ್ಯಾಂಕ್ಸ್ ಹೇಳಿರುವ ವಿರಾಟ್​​ ಕೊಹ್ಲಿ, ತನಗೆ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅವಕಾಶ ನೀಡಿರುವ ಭಾರತೀಯ ಕ್ರಿಕೆಟ್​ ಮಂಡಳಿಗೂ ಧನ್ಯವಾದ ತಿಳಿಸಿದ್ದಾರೆ. ಟೆಸ್ಟ್​​ ಕ್ರಿಕೆಟ್​ನಲ್ಲಿ ತಂಡವನ್ನ ಮೇಲಕ್ಕೆ ತೆಗೆದುಕೊಂಡು ಹೋಗಲು ತಂಡದ ವಾಹನಕ್ಕೆ ರವಿ ಭಾಯ್​​ ಎಂಜಿನ್​ ಆಗಿದ್ದರು. ಅವರು ನಿರ್ವಹಿಸಿದ ಪಾತ್ರಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದು ಕೊಹ್ಲಿ ಹೊಗಳಿದ್ದಾರೆ.

ವಿರಾಟ್​ ಕೊಹ್ಲಿ ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದ್ದು, 40 ಟೆಸ್ಟ್‌ಗಳಲ್ಲಿ ಗೆಲುವು, 17 ಟೆಸ್ಟ್‌ಗಳಲ್ಲಿ ಸೋಲು ಕಂಡಿದ್ದು, 11 ಪಂದ್ಯಗಳು ಡ್ರಾ ಆಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.