ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ.. ವಿರಾಟ್​ ನಡೆಗೆ ಕಪಿಲ್​ ದೇವ್​ ಬೇಸರ..

author img

By

Published : Sep 18, 2021, 8:26 PM IST

Kapil dev

ವಿರಾಟ್​ ಕೊಹ್ಲಿ ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಾನು ಯೋಚನೆ ಮಾಡಿರಲಿಲ್ಲ. ಕ್ರಿಕೆಟಿಗರು ಏನು ಮಾಡಬೇಕು, ಏನು ಮಾಡಬಾರದು ಎಂದು ತಾವೇ ನಿರ್ಧರಿಸುತ್ತಿದ್ದಾರೆ. ಇದು ನನಗೆ ವಿಚಿತ್ರವೆನಿಸುತ್ತದೆ. ಇಂತಹ ನಿರ್ಧಾರಗಳ ಬಗ್ಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಮುಂದೆ ಹೇಳಬೇಕು..

ನವದೆಹಲಿ : ಐಸಿಸಿ ಟಿ-20 ವಿಶ್ವಕಪ್​​​ ಮುಕ್ತಾಯದ ಬಳಿಕ ಚುಟುಕು ಕ್ರಿಕೆಟ್​​ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್​​ ಕೊಹ್ಲಿ ಘೋಷಣೆ ಮಾಡಿದ್ದಾರೆ. ಡೆಲ್ಲಿ ಡ್ಯಾಶರ್​ ನಿರ್ಧಾರಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೇ, ಇನ್ನು ಕೆಲವರು ಟೀಕೆ ಮಾಡಿದ್ದಾರೆ.

1983 ವಿಶ್ವಕಪ್​ ವಿಜೇತ ತಂಡದ ಕ್ಯಾಪ್ಟನ್​ ಕಪಿಲ್​ ದೇವ್ ಈ ಬಗ್ಗೆ ಮಾತನಾಡಿದ್ದು​, ಕೊಹ್ಲಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲ ಕ್ರಿಕೆಟಿಗರು ಏನು ಮಾಡಬೇಕು, ಏನು ಮಾಡಬಾರದು ಎಂಬ ನಿರ್ಧಾರ ತಾವೇ ಕೈಗೊಳ್ಳುತ್ತಿದ್ದಾರೆ. ನನಗೆ ಇದು ವಿಚಿತ್ರವೆನಿಸುತ್ತದೆ ಎಂದಿದ್ದಾರೆ.

ವಿರಾಟ್​ ಕೊಹ್ಲಿ ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ನಾನು ಯೋಚನೆ ಮಾಡಿರಲಿಲ್ಲ. ಕ್ರಿಕೆಟಿಗರು ಏನು ಮಾಡಬೇಕು, ಏನು ಮಾಡಬಾರದು ಎಂದು ತಾವೇ ನಿರ್ಧರಿಸುತ್ತಿದ್ದಾರೆ. ಇದು ನನಗೆ ವಿಚಿತ್ರವೆನಿಸುತ್ತದೆ. ಇಂತಹ ನಿರ್ಧಾರಗಳ ಬಗ್ಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಮುಂದೆ ಹೇಳಬೇಕು.

ಜೊತೆಗೆ ಕ್ರಿಕೆಟಿಗರು ಆಯ್ಕೆಗಾರರ ಬಳಿ ಹೋಗಿ ತಮ್ಮ ನಿರ್ಧಾರ ತಿಳಿಸಬೇಕು ಎಂದಿದ್ದಾರೆ. ಜೊತೆಗೆ ಕೊಹ್ಲಿ ಓರ್ವ ಅದ್ಭುತ ಕ್ರಿಕೆಟಿಗನಾಗಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿರಿ: IPL 2021 ದ್ವೀತಿಯಾರ್ಧದ ಪಂದ್ಯಗಳ ವೇಳಾಪಟ್ಟಿ; ಯಾವ ದಿನ, ಯಾವ ಪಂದ್ಯ ನೋಡಿ ಸಂಪೂರ್ಣ ಮಾಹಿತಿ!

ಇಂಡಿಯನ್​​ ಪ್ರೀಮಿಯರ್ ಲೀಗ್​ನಲ್ಲಿ ಭಾಗಿಯಾಗಲು ದುಬೈನಲ್ಲಿ ಬೀಡು ಬಿಟ್ಟಿರುವ ವಿರಾಟ್​ ಕೊಹ್ಲಿ, ಕಳೆದ ನಾಲ್ಕು ದಿನಗಳ ಹಿಂದೆ ಟ್ವಿಟರ್​ನಲ್ಲಿ ದಿಢೀರ್​ ಆಗಿ ಟಿ-20 ನಾಯಕತ್ವದಿಂದ ಕೆಳಗಿಳಿಯುತ್ತಿರುವ ಸುದ್ದಿ ಪ್ರಕಟಗೊಳಿಸಿದ್ದರು. ಜೊತೆಗೆ ಓರ್ವ ಬ್ಯಾಟ್ಸ್​ಮನ್​ ಆಗಿ ತಾವು ಚುಟುಕು ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.