ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ ₹12 ಕೋಟಿ.. ಸೆಮಿಫೈನಲ್ಸ್​ ತಂಡಗಳಿಗೂ ಬಂಪರ್​..

author img

By

Published : Oct 10, 2021, 3:58 PM IST

Updated : Oct 10, 2021, 4:28 PM IST

T20 WC Winner to get USD 1.6 million, confirms ICC

2016ರ ವಿಶ್ವಕಪ್​ನಿಂದ ಸೂಪರ್ 12ನಲ್ಲಿ ತಂಡಗಳು ಗೆಲ್ಲುವ ಪ್ರತಿಯೊಂದು ಪಂದ್ಯಕ್ಕೂ ಬೋನಸ್​ ಸಿಗಲಿದೆ. ಒಟ್ಟು 30 ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ಪಂದ್ಯ ಗೆದ್ದ ತಂಡ 40,000 ಡಾಲರ್​ (30 ಲಕ್ಷರೂ) ಪಡೆಯಲಿವೆ. ಇದಕ್ಕಾಗಿ ಒಟ್ಟು 12 ಲಕ್ಷ ಡಾಲರ್​(9 ಕೋಟಿ ರೂ.) ಮೀಸಲಿಡಲಾಗಿದೆ..

ದುಬೈ : ಮುಂದಿನ ವಾರದಿಂದ ಒಮಾನ್ ಮತ್ತು ಯುಎಇಯಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗುವ ತಂಡ 12 ಕೋಟಿ ರೂ (1.6 ಮಿಲಿಯನ್​ ಯುಎಸ್​ಡಿ) ಮತ್ತು ರನ್ನರ್‌​ ಅಪ್​ ಆಗುವ ತಂಡ ಅದರಲ್ಲಿ ಅರ್ಧದಷ್ಟು ಪಡೆಯಲಿದೆ ಎಂದು ಭಾನುವಾರ ಐಸಿಸಿ ಘೋಷಿಸಿದೆ.

ಅಕ್ಟೋಬರ್​ 17ರಿಂದ ನವೆಂಬರ್​ 14ರವರೆಗೆ ನಡೆಯಲಿರುವ ಚುಟುಕು ಮಹಾ ಕದನದಲ್ಲಿ ಆಡುವ 16 ತಂಡಗಳು ಒಟ್ಟು 42 ಕೋಟಿ ರೂ.(5.6 ಮಿಲಿಯನ್ ಯುಎಸ್​ಡಿ) ಮೊತ್ತವನ್ನು ಹಂಚಿಕೊಳ್ಳಲಿವೆ.

ಚಾಂಪಿಯನ್ ತಂಡ 12 ಕೋಟಿ, ರನ್ನರ್​ ಅಪ್ ತಂಡ 6 ಕೋಟಿ ರೂ. ಪಡೆದರೆ, ಸೆಮಿಫೈನಲ್ಸ್​ನಲ್ಲಿ ಸೋಲುವ ತಂಡಗಳು ತಲಾ 3 ಕೋಟಿ ರೂ.(4,00,000 ಯುಎಸ್​ಡಿ) ಪಡೆಯಲಿವೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

2016ರ ವಿಶ್ವಕಪ್​ನಿಂದ ಸೂಪರ್ 12ನಲ್ಲಿ ತಂಡಗಳು ಗೆಲ್ಲುವ ಪ್ರತಿಯೊಂದು ಪಂದ್ಯಕ್ಕೂ ಬೋನಸ್​ ಸಿಗಲಿದೆ. ಒಟ್ಟು 30 ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ಪಂದ್ಯ ಗೆದ್ದ ತಂಡ 40,000 ಡಾಲರ್​ (30 ಲಕ್ಷರೂ) ಪಡೆಯಲಿವೆ. ಇದಕ್ಕಾಗಿ ಒಟ್ಟು 12 ಲಕ್ಷ ಡಾಲರ್​(9 ಕೋಟಿ ರೂ.) ಮೀಸಲಿಡಲಾಗಿದೆ.

ಇನ್ನು, ಕ್ವಾರ್ಟರ್​ ಫೈನಲ್​ ಪ್ರವೇಶಿಸುವ ತಂಡಗಳಿಗೆ 5,60,000 ಡಾಲರ್​ ಮೀಸಲಿಡಲಾಗಿದೆ. 8 ತಂಡಗಳೂ ತಲಾ 70 ಸಾವಿರ ಡಾಲರ್​ ಪಡೆಯಲಿವೆ. ಮೊದಲ ಸುತ್ತಿನಲ್ಲಿ ಗೆಲ್ಲುವ ತಂಡಗಳು ಕೂಡ 40 ಸಾವಿರ ಯುಎಸ್​ಡಿ ಪಡೆಯಲಿವೆ. ಇನ್ನು, ಮೊದಲ ಸುತ್ತಿನಲ್ಲಿ ಸೋತು ಹೊರ ಬೀಳುವ ತಂಡಗಳು ಕೂಡ ತಲಾ 40 ಸಾವಿರ ಡಾಲರ್​ ಪಡೆಯಲಿವೆ.

ಮೊದಲ ಸುತ್ತಿನಲ್ಲಿ ಬಾಂಗ್ಲಾದೇಶ, ಐರ್ಲೆಂಡ್​, ನಮೀಬಿಯಾ, ನೆದರ್ಲೆಂಡ್ಸ್​, ಒಮಾನ್, ಪಿಎನ್​ಜಿ, ಸ್ಕಾಟ್ಲೆಂಡ್​ ಮತ್ತು ಶ್ರೀಲಂಕಾ ತಂಡಗಳಿವೆ. ಇನ್ನು, ಸೂಪರ್-12ರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನ್ಯೂಜಿಲ್ಯಾಂಡ್, ದ.ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್​ ತಂಡಗಳಿವೆ.

ಇದನ್ನು ಓದಿ: ಮಾರಕ ಬೌಲರ್​ಗೆ ಟೀಂ ಇಂಡಿಯಾ ಮಣೆ.. T-20 ವಿಶ್ವಕಪ್​​ ನೆಟ್​​ ಬೌಲರ್​ ಆಗಿ ಉಮ್ರಾನ್ ಮಲಿಕ್​ ಆಯ್ಕೆ

Last Updated :Oct 10, 2021, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.