ವಿಶ್ವಕಪ್​ನಲ್ಲಿ ಆಂಗ್ಲರ ಎದುರು ವಿಂಡೀಸ್​ಗೆ ಸೋಲೇ ಇಲ್ಲ!!.. ಈ ಬಾರಿಯಾದ್ರು ಗೆಲ್ಲುತ್ತಾ ODI ಚಾಂಪಿಯನ್?

author img

By

Published : Oct 23, 2021, 8:57 AM IST

WI face tough battle against England in their T20 WC opener

ಪಂದ್ಯದಲ್ಲಿ ಎದುರಾಗಲಿವೆ. ಇಲ್ಲಿಯವರೆಗೆ ವಿಶ್ವಕಪ್​ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಇಂಗ್ಲೆಂಡ್​ ಸೋಲು ಕಂಡಿದ್ದು, ಈ ವರ್ಷವಾದರೂ ಅಷ್ಟೇನೂ ಬಲಿಷ್ಠವಾಗಿರದ ವಿಂಡೀಸ್ ವಿರುದ್ಧ ಗೆಲುವು ಸಾಧಿಸಲು ಇಂಗ್ಲೆಂಡ್ ಎದುರು ನೋಡುತ್ತಿದೆ.

ದುಬೈ: 2016 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೆಣಸಾಡಿದ್ದ ಹಾಲಿ ಚಾಂಪಿಯನ್​ ವೆಸ್ಟ್‌ ಇಂಡೀಸ್‌ ಮತ್ತು ರನ್ನರ್ಸ್ ಅಪ್‌ ಇಂಗ್ಲೆಂಡ್‌ ಶನಿವಾರ ನಡೆಯಲಿರುವ ಸೂಪರ್​ 12ಪಂದ್ಯದಲ್ಲಿ ಎದುರಾಗಲಿವೆ. ಇಲ್ಲಿಯವರೆಗೆ ವಿಶ್ವಕಪ್​ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಇಂಗ್ಲೆಂಡ್​ ಸೋಲು ಕಂಡಿದ್ದು, ಈ ವರ್ಷವಾದರೂ ಅಷ್ಟೇನೂ ಬಲಿಷ್ಠವಾಗಿರದ ವಿಂಡೀಸ್ ವಿರುದ್ಧ ಗೆಲುವು ಸಾಧಿಸಲು ಇಂಗ್ಲೆಂಡ್ ಎದುರು ನೋಡುತ್ತಿದೆ.

2016ರಲ್ಲಿ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಕಾರ್ಲೋಸ್‌ ಬ್ರಾತ್‌ವೇಟ್‌ ಅವರ ಸ್ಫೋಟಕ ಬ್ಯಾಟಿಂಗ್​ನ ನೆರವಿನಿಂದ 4 ವಿಕೆಟ್​ಗಳಿಂದ ಗೆದ್ದು 2ನೇ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು. ಇದೀಗ 5 ವರ್ಷಗಳ ಬಳಿಕ ನಡೆಯುತ್ತಿರುವ ಚುಟುಕು ಮಹಾಸಮರದಲ್ಲಿ ಎರಡೂ ತಂಡಗಳು ಮತ್ತೆ ಎದುರುಬದುರಾಗುತ್ತಿವೆ.

ವೆಸ್ಟ್​ ಇಂಡೀಸ್​ ಸ್ಫೋಟಕ ಬ್ಯಾಟರ್​ಗಳ ದಂಡನ್ನೇ ಹೊಂದಿದೆಯಾದರೂ ಅಭ್ಯಾಸ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದೆದುರು ಸೋಲು ಕಂಡು ನಿರಾಶೆಯನುಭವಿಸಿದೆ. ಮೊನಚಿಲ್ಲದ ಬೌಲಿಂಗ್ ದಾಳಿ, ಸ್ಪಿನ್ನರ್​ಗಳನ್ನೆದುರಿಸುವ ಸಾಮರ್ಥ್ಯದಲ್ಲಿ ವಿಂಡೀಸ್​ ಭಾರಿ ಹಿನ್ನಡೆ ಸಾಧಿಸಿದೆ.

ಇತ್ತ 2010ರ ಚಾಂಪಿಯನ್​ ಇಂಗ್ಲೆಂಡ್ ಅಭ್ಯಾಸ ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಪಡೆದಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಭಾರತದೆದುರು ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯ ಸಾಧಿಸಿದೆ. ಪ್ರಸ್ತುತ ತಂಡಗಳ ಪ್ರದರ್ಶನ, ಬಲಾಬಲ ನೋಡಿದರೆ ಇಂಗ್ಲೆಂಡ್ ತಂಡವೇ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಲಿದೆ.

ಮುಖಾಮುಖಿ

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಟ್ಟು 18 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ವಿಂಡೀಸ್ 11, ಇಂಗ್ಲೆಂಡ್ 7ರಲ್ಲಿ ಜಯ ಸಾಧಿಸಿದೆ.ಟಿ20 ವಿಶ್ವಕಪ್​ನಲ್ಲಿ ಆಡಿದ ಎಲ್ಲಾ 5 ಪಂದ್ಯಗಳಲ್ಲೂ ವೆಸ್ಟ್​ ಇಂಡೀಸ್​ ತಂಡವೇ ಜಯ ಸಾಧಿಸಿದೆ. ಇನ್ನೂ ತಟಸ್ಥ ಸ್ಥಳದಲ್ಲಿ ನಡೆದಿರುವ 6 ಪಂದ್ಯಗಳಲ್ಲು ಕೂಡ ಕೆರಿಬಿಯನ್ನರೆ ಜಯ ಸಾಧಿಸಿದ್ದಾರೆ. ಆದರೆ 2016ರ ವಿಶ್ವಕಪ್​ ಬಳಿಕದ 4 ಮುಖಾಮುಖಿಯಲ್ಲಿ ಇಂಗ್ಲೆಂಡ್ ತಂಡ ಮೂರರಲ್ಲಿ ಜಯ ಸಾಧಿಸಿದೆ.

ಸಂಭಾವ್ಯ ಇಂಗ್ಲೆಂಡ್ ಇಲೆವೆನ್: ಜೇಸನ್ ರಾಯ್, ಜೋಸ್ ಬಟ್ಲರ್, ಮೊಯೀನ್ ಅಲಿ, ಜಾನಿ ಬೈರ್‌ಸ್ಟೋವ್, ಇಯೋನ್ ಮಾರ್ಗನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಆದಿಲ್ ರಶೀದ್

ಸಂಭಾವ್ಯ ವೆಸ್ಟ್ ಇಂಡೀಸ್ ಇಲೆವೆನ್: ಎವಿನ್ ಲೆವಿಸ್, ಲೆಂಡ್ಲ್ ಸಿಮನ್ಸ್, ಕ್ರಿಸ್ ಗೇಲ್, ರಾಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್, ಕೀರಾನ್ ಪೊಲಾರ್ಡ್, ಆಂಡ್ರೆ ರಸೆಲ್, ಡ್ವೇನ್ ಬ್ರಾವೋ, ಹೇಡನ್ ವಾಲ್ಷ್, ಓಬೆಡ್ ಮೆಕಾಯ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.