ಕನ್ನಡಿಗನಿಗೆ ಜಾಕ್​ಪಾಟ್​​: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್​​ ಆದ​ ಮಯಾಂಕ್​

author img

By

Published : Nov 30, 2021, 10:20 PM IST

Updated : Nov 30, 2021, 10:45 PM IST

PBKS retained Mayank Agarwal

ಇಂಡಿಯನ್​ ಪ್ರೀಮಿಯರ್ ಲೀಗ್​​ನ 2022ರ ಆವೃತ್ತಿಗಾಗಿ ಪಂಜಾಬ್​ ಕಿಂಗ್ಸ್​​​​ ಕನ್ನಡಿಗನಿಗೆ ಮಣೆ ಹಾಕಿದ್ದು, ಮಯಾಂಕ್​ ಅಗರವಾಲ್​ಗೆ ದಾಖಲೆಯ 12 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.

ಮುಂಬೈ: ಇಂಡಿಯನ್​ ಪ್ರೀಮಿಯರ್​​ ಲೀಗ್​​​ 2022ರ ಆವೃತ್ತಿಗಾಗಿ ವಿವಿಧ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಇದೀಗ ರಿಲೀಸ್ ಮಾಡ್ತಿದ್ದು, ಪಂಜಾಬ್​ ಕಿಂಗ್ಸ್​​​ ಕನ್ನಡಿಗ ಮಯಾಂಕ್​ ಅಗರವಾಲ್​ಗೆ ಮಣೆ ಹಾಕಿದೆ.

ಈ ಹಿಂದೆ ಪಂಜಾಬ್​ ತಂಡ ಕರ್ನಾಟಕದ ಆರಂಭಿಕ ಆಟಗಾರನಿಗೆ 1 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ ಇದೀಗ ದಾಖಲೆಯ 12 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಈ ಮೂಲಕ ಕನ್ನಡಿಗನಿಗೆ ಜಾಕ್​​ಪಾಟ್​ ಹೊಡೆದಿದೆ. ಉಳಿದಂತೆ ಮತ್ತೋರ್ವ ವೇಗದ ಬೌಲರ್​​ ಅರ್ಷದೀಪ್ ಸಿಂಗ್​ಗೆ 4 ಕೋಟಿ ರೂ. ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.

ವಿಶೇಷವೆಂದರೆ ತಂಡದ ಕ್ಯಾಪ್ಟನ್​ ಆಗಿದ್ದ ಕನ್ನಡಿಗ ಕೆ.ಎಲ್.​ ರಾಹುಲ್​, ದೈತ್ಯ ಆಟಗಾರ ಕ್ರಿಸ್ ಗೇಲ್​, ವೇಗದ ಬೌಲರ್​ ಮೊಹಮ್ಮದ್​ ಶಮಿ, ದೀಪಕ್ ಹೂಡಾ, ರವಿ ಬಿಷ್ನ್ಣೂಯಿ​ ಹಾಗೂ ಶಾರೂಖ್ ಖಾನ್​ ಅವರನ್ನು ಕೈಬಿಡಲಾಗಿದೆ. ಎಲ್ಲ ತಂಡಗಳಿಗೆ 90 ಕೋಟಿ ರೂ. ಖರೀದಿ ಮಾಡಲು ನೀಡಲಾಗಿದ್ದು, ಇದೀಗ ಪಂಜಾಬ್​ ತಂಡದ ಬಳಿ 72 ಕೋಟಿ ರೂ. ಉಳಿದುಕೊಂಡಿದೆ. ಉಳಿದ ಆಟಗಾರರನ್ನು ಅದು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಲಿದೆ.

ಇದನ್ನೂ ಓದಿರಿ: IPL Retention: ಕೊಹ್ಲಿ, ಮ್ಯಾಕ್ಸ್​ವೆಲ್​​, ಸಿರಾಜ್​​ ಉಳಿಸಿಕೊಂಡ ಆರ್​ಸಿಬಿ

ಮಯಾಂಕ್​ ಅಗರವಾಲ್​​ ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಆಡಿದ್ದು, 2018ರಿಂದ ಪಂಜಾಬ್​ ತಂಡದ ಭಾಗವಾಗಿದ್ದಾರೆ.

Last Updated :Nov 30, 2021, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.