ಭಾರತದ ವಿರುದ್ಧದ ಪಂದ್ಯಕ್ಕೆ ಇಂದೇ 12 ಸದಸ್ಯರ ತಂಡ ಘೋಷಿಸಿದ ಪಾಕಿಸ್ತಾನ

author img

By

Published : Oct 23, 2021, 2:37 PM IST

Updated : Oct 23, 2021, 5:10 PM IST

akistan announced 12-man squad

ಭಾನುವಾರ ನಡೆಯುವ ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೆ ಪಾಕಿಸ್ತಾನ ತಂಡ 12 ಸದಸ್ಯರ ತಂಡವನ್ನು ಬಿಡುಗಡೆ ಮಾಡಿದೆ.

ದುಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ನಡೆಯುವ ಸೂಪರ್ 12 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಆದರೆ, ಪಾಕ್ ಮ್ಯಾನೇಜ್​ಮೆಂಟ್​ ಶನಿವಾರವೇ ನಾಳೆಯ ಪಂದ್ಯಕ್ಕಾಗಿ 12 ಸದಸ್ಯರ ಬಳಗವನ್ನು ಪ್ರಕಟಿಸಿದೆ.

ಬಾಬರ್​ ಅಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಮೊಹಮ್ಮದ್ ಹಫೀಜ್​, ಶೋಯಬ್ ಮಲಿಕ್, ಆಸಿಫ್ ಅಲಿ, ಹೈದರ್​ ಅಲಿ, ಇಮಾದ್ ವಸೀಂ, ಶದಬ್ ಖಾನ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್​ ರವೂಫ್​

ಭಾರತ ಮತ್ತು ಪಾಕಿಸ್ತಾನ ತಂಡಗಳು 2ನೇ ಗುಂಪಿನಲ್ಲಿದ್ದು, ಭಾನುವಾರ ಸಂಜೆ 7:30 ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

Last Updated :Oct 23, 2021, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.