ODIನಲ್ಲಿ ಗರಿಷ್ಠ ಸರಾಸರಿ ದಾಖಲೆ ಹೊಂದಿದ್ದ ನೆದರ್ಲೆಂಡ್ಸ್​ನ ಡೋಶೇಟ್​ ನಿವೃತ್ತಿ

author img

By

Published : Oct 23, 2021, 1:51 PM IST

Netherlands All-Rounder Ryan Ten Doeschate Retires From International Cricket

41 ವರ್ಷದ ಆಟಗಾರ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್​ನಲ್ಲಿ 67ರ ವಿಶ್ವದಾಖಲೆಯ ಸರಾಸರಿಯೊಂದಿಗೆ 33 ಪಂದ್ಯಗಳಲ್ಲಿ 1541 ರನ್​ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡಸೆನ್(65) ಮಾತ್ರ 60 ಸರಾಸರಿ ಹೊಂದಿರುವ ಬ್ಯಾಟರ್ ಆಗಿದ್ದಾರೆ.

ದುಬೈ: ನೆದರ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ರ‍್ಯಾನ್ ಟೆನ್ ಡೋಶೇಟ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಕ್ವಾಲಿಫೈಯರ್​ನ ಕೊನೆಯ ಪಂದ್ಯದ ಬಳಿಕ ನೆದರ್ಲೆಂಡ್ಸ್ ತಂಡದ ಆಲ್​ರೌಂಡರ್​ ನಿವೃತ್ತಿ ಘೋಷಿಸಿದರು.

41 ವರ್ಷದ ಆಟಗಾರ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್​ನಲ್ಲಿ 67ರ ವಿಶ್ವದಾಖಲೆಯ ಸರಾಸರಿಯೊಂದಿಗೆ 33 ಪಂದ್ಯಗಳಲ್ಲಿ 1541 ರನ್​ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡಸೆನ್(65) ಮಾತ್ರ 60 ಸರಾಸರಿ ಹೊಂದಿರುವ ಬ್ಯಾಟರ್ ಆಗಿದ್ದಾರೆ.

41ರ ಹರೆಯದ ಆಲ್​ರೌಂಡರ್​ ಏಕದಿನ ಕ್ರಿಕೆಟ್​ನಲ್ಲಿ 1541, ಟಿ20ಐ ಯಲ್ಲಿ 533, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 11,298, ಲಿಸ್ಟ್​ ಎ ಕ್ರಿಕೆಟ್​ನಲ್ಲಿ 6,166 ಮತ್ತು ಟಿ20 ಕ್ರಿಕೆಟ್​ನಲ್ಲಿ 7597ರನ್​ಗಳಿಸಿದ್ದಾರೆ. ಬೌಲಿಂಗ್​ನಲ್ಲಿ ನೋಡುವುದಾದರೆ, ಏಕದಿನ ಪಂದ್ಯಗಳಲ್ಲಿ 55 ಮತ್ತು 24 ಟಿ20 ಪಂದ್ಯಗಳಲ್ಲಿ 13 ವಿಕೆಟ್​ ಪಡೆದಿದ್ದಾರೆ.

"ಈ ಪ್ರವಾಸ ಕಠಿಣವಾಗಿದೆ, ವಿದಾಯ ಘೋಷಣೆ ಮಾಡುವುದಕ್ಕೆ ಇದು ಸರಿಯಾದ ಸಮಯವಲ್ಲ. ಆದರೆ ತಂಡದ ಪ್ರಯತ್ನದ ಭಾಗವಾಗಿದ್ದಕ್ಕೆ ಹೆಮ್ಮೆಯಿದೆ. ನನಗೆ ನೆದರ್ಲೆಂಡ್ಸ್​ ತಂಡವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆಯಿದೆ" ಎಂದು ರಿಯಾನ್ ಟೆನ್ ಡೋಶೇಟ್ ಹೇಳಿದರು.

ಇದನ್ನು ಓದಿ:ಇಂಡೋ- ಪಾಕ್ ಕದನಕ್ಕೆ ಕ್ಷಣಗಣನೆ: ಹಿಂದಿನ 5 ದಿಗ್ವಿಜಯಗಳ ಅಂಕಿ- ಅಂಶ ಇಲ್ಲಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.