ಅವಕಾಶ ಸಿಕ್ಕರೆ ಐಪಿಎಲ್​ನಲ್ಲಿ ಆಡುವುದಕ್ಕೆ ಇಷ್ಟ ಪಡುತ್ತೇನೆ: ಅಜಾಜ್ ಪಟೇಲ್​

author img

By

Published : Dec 7, 2021, 9:35 PM IST

ajaz patel on IPL

ಐಪಿಎಲ್​ನಲ್ಲಿ ಆಡುವುದಕ್ಕೆ ಅವಕಾಶ ಸಿಕ್ಕರೆ ಅದು ದೊಡ್ಡ ಗೌರವ ಎಂದು ಭಾವಿಸುತ್ತೇನೆ. ಒಂದು ವೇಳೆ ಅವಕಾಶ ಸಿಕ್ಕರೆ ಭಾರತದಲ್ಲಿ ಐಪಿಎಲ್ ಆಡುವುದಕ್ಕೆ ಇಷ್ಟಪಡುತ್ತೇನೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂಬೈ: ವಾಂಖೆಡೆಯಲ್ಲಿ 2ನೇ ಟೆಸ್ಟ್​ ಪಂದ್ಯದ ವೇಳೆ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಎಲ್ಲ 10 ವಿಕೆಟ್​ಗಳನ್ನು ಪಡೆದು ದಾಖಲೆ ಬರೆದಿದ್ದ ಭಾರತೀಯ ಮೂಲದ ಅಜಾಜ್ ಪಟೇಲ್ ಅವಕಾಶ ಸಿಕ್ಕರೆ ಐಪಿಎಲ್​ನಲ್ಲಿ ಆಡುವುದಕ್ಕೆ ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಐಪಿಎಲ್​ನಲ್ಲಿ ಆಡುವುದಕ್ಕೆ ಅವಕಾಶ ಸಿಕ್ಕರೆ ಅದು ದೊಡ್ಡ ಗೌರವ ಎಂದು ಭಾವಿಸುತ್ತೇನೆ. ಒಂದು ವೇಳೆ ಅವಕಾಶ ಸಿಕ್ಕರೆ ಭಾರತದಲ್ಲಿ ಐಪಿಎಲ್ ಆಡುವುದಕ್ಕೆ ಇಷ್ಟಪಡುತ್ತೇನೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೊಂದು ಅದ್ಭುತವಾದ ಟೂರ್ನಮೆಂಟ್​, ಪ್ರತಿಯೊಬ್ಬರೂ ತುಂಬಾ ಹತ್ತಿರದಿಂದ ನೋಡುತ್ತಾರೆ. ವಿಶ್ವಾದ್ಯಂತ ಸಾಕಷ್ಟು ಪ್ರಶಂಸೆ ಮತ್ತು ರೋಮಾಂಚನವನ್ನುಂಟು ಮಾಡುತ್ತದೆ. ಆದ್ದರಿಂದ, ಇದು ಅತ್ಯುತ್ತಮ ಟೂರ್ನಮೆಂಟ್​ ಮತ್ತು ನನಗೇನಾದರೂ ಅವಕಾಶ ಸಿಕ್ಕರೆ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಪಟೇಲ್ ಐಪಿಎಲ್​ನಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧ 10 ವಿಕೆಟ್ ಸಾಧನೆ ಮಾಡಿದ ನಂತರ ವಿಶ್ವಾದ್ಯಂತ ಅಭಿಮಾನಿಗಳು ಮತ್ತು ಕ್ರಿಕೆಟ್​ ಪಂಡಿತರಿಂದ ಮೆಚ್ಚುಗೆ ಪಡೆದಿದ್ದರು. ಅನಿಲ್ ಕುಂಬ್ಳೆ ಮತ್ತು ಜಿಮ್ ಲೇಕರ್​ ಮಾತ್ರ ಈ ಹಿಂದೆ ಈ ಸಾಧನೆ ಮಾಡಿದ್ದರು.

MCAಗೆ ಜರ್ಸಿ ಉಡುಗೊರೆ ನೀಡಿದ ಪಟೇಲ್

ಭಾರತ ವಿರುದ್ಧ 10 ವಿಕೆಟ್​ ಪಡೆದು ದಾಖಲೆ ಬರೆದ ಅಜಾಜ್ ಪಟೇಲ್​ ತಮ್ಮ ತಮ್ಮ ಸಹಿ ಇರುವ ನ್ಯೂಜಿಲ್ಯಾಂಡ್​ ಟೆಸ್ಟ್​ ಜರ್ಸಿಯನ್ನು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷ ವಿಜಯ್ ಪಾಟಿಲ್​ ಅವರಿಗೆ ನೀಡಿದ್ದಾರೆ. ಎಂಸಿಎನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಕ್ರಿಕೆಟ್ ಮಂಡಳಿಯ ಹೊಸ ಮ್ಯೂಸಿಯಂನಲ್ಲಿ ಈ ಜರ್ಸಿ ಇಡಲಾಗುತ್ತದೆ. ಎಂಸಿಎ ಕೂಡ 10 ವಿಕೆಟ್​ ಪಡೆದ ನೆನಪಿಗಾಗಿ ಪಂದ್ಯದಲ್ಲಿ ಬಳಿಸಿದ್ದ ಸ್ಕೋರ್​ ಶೀಟ್​ ಮತ್ತು ಒಂದು ಮೆಮೆಂಟೋವನ್ನು ಅಜಾಜ್​ಗೆ ಉಡುಗೊರೆಯಾಗಿ ನೀಡಿ ಗೌರವಿಸಿದರು.

ಇದನ್ನೂ ಓದಿ:ಭಾರತ ಇಲ್ಲದಿದ್ದರೆ ನನ್ನ ಬ್ರ್ಯಾಂಡ್​ ಈಗಿರುವ​ ಅರ್ಧದಷ್ಟೂ ಇರುತ್ತಿರಲಿಲ್ಲ: ಡ್ವೇನ್​ ಬ್ರಾವೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.