ಕೋಲ್ಕತ್ತಾ ಬೌಲಿಂಗ್​ ದಾಳಿಗೆ ಡೆಲ್ಲಿ ತತ್ತರ.. ಗೆಲುವಿಗೆ 136 ರನ್​ ಟಾರ್ಗೆಟ್ ನೀಡಿದ ಪಂತ್​ ಪಡೆ

author img

By

Published : Oct 13, 2021, 9:22 PM IST

Updated : Oct 13, 2021, 9:29 PM IST

IPL 2021 Qualifier 2

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್​ ರನ್​ಗಳಿಸಲು ಹರಸಾಹಸ ಪಟ್ಟಿದ್ದು, ಇದೀಗ ಕೆಕೆಆರ್​ ಗೆಲುವಿಗೆ 136ರನ್​​​​​ಗಳ ಸುಲಭ ಟಾರ್ಗೆಟ್ ನೀಡಿದೆ.

ಶಾರ್ಜಾ: 14ನೇ ಆವೃತ್ತಿ ಐಪಿಎಲ್​​ನ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​​​​ ಮುಖಾಮುಖಿಯಾಗಿದ್ದು, ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ರಿಷಭ್ ಪಂತ್​ ಬಳಗ ನಿಗದಿತ 20 ಓವರ್​ಗಳಲ್ಲಿ 135 ರನ್​​ ರನ್​ಗಳಿಕೆ ಮಾಡಿದೆ.

ಶಾರ್ಜಾ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಕೆಕೆಆರ್​ ತಂಡದ ಬೌಲರ್​ಗಳ ವಿರುದ್ಧ ಡೆಲ್ಲಿ ರನ್​ಗಳಿಕೆ ಮಾಡಲು ಹರಸಾಹಸ ಪಡುವಂತಾಯಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್​ ಹಾಗೂ ಪೃಥ್ವಿ ಶಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಮೊದಲ 4 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೇ 32 ರನ್​ಗಳಿಕೆ ಮಾಡಿದರು. 18ರನ್​ಗಳಿಕೆ ಮಾಡಿದ್ದ ಪೃಥ್ವಿ ಶಾ ವರುಣ್​​ ಚಕ್ರವರ್ತಿ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಒಂದಾದ ಧವನ್​(29)-ಸ್ಟೋನಿಸ್(15)​ ಜೋಡಿ 10 ಓವರ್​ಗಳ ಅಂತ್ಯಕ್ಕೆ 65ರನ್​ಗಳಿಕೆ ಮಾಡಿತು.

18ರನ್​ಗಳಿಕೆ ಮಾಡಿ ಬ್ಯಾಟ್​ ಮಾಡ್ತಿದ್ದ ಸ್ಟೋನಿಸ್​ ವಿಕೆಟ್​ ಪಡೆದುಕೊಳ್ಳುವಲ್ಲಿ ಶಿವಂ ಮಾವಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಧವನ್ ಕೂಡ 36ರನ್​ಗಳಿಕೆ ಮಾಡಿ ವರುಣ್​ ಚಕ್ರವರ್ತಿ ಓವರ್​ನಲ್ಲಿ ವಿಕೆಟ್​ ಒಪ್ಪಿಸಿ, ಪೆವಿಲಿಯನ್​ ಸೇರಿಕೊಂಡರು. ಇದಾದ ಬಳಿಕ ಬಂದ ಕ್ಯಾಪ್ಟನ್​ ಪಂತ್ ಕೂಡ ಕೇವಲ 6ರನ್​​ಗಳಿಕೆ ಮಾಡಿ ನಿರಾಸೆ ಮೂಡಿಸಿದರು. ಸ್ಫೋಟಕ ಆಟಗಾರ ಹೆಟ್ಮಾಯರ್​​​ 17ರನ್​ಗಳಿಕೆ ಮಾಡಿ ರನೌಟ್ ಬಲೆಗೆ ಬಿದ್ದರು.

ಇದಾದ ಬಳಿಕ ಶ್ರೇಯಸ್ ಅಯ್ಯರ್ ಅಜೇಯ 37ರನ್​ಗಳಿಕೆ ಮಾಡಿದ್ರೆ, ಅಕ್ಸರ್ ಪಟೇಲ್​ 4ರನ್​ಗಳಿಸಿದರು. ತಂಡ ಕೊನೆಯದಾಗಿ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 135ರನ್​ಗಳಿಕೆ ಮಾಡಿತು.

ಇದನ್ನೂ ಓದಿರಿ: ಪ್ಲಂಬರ್​ಗೆ ಒಲಿದ ಅದೃಷ್ಟ ಲಕ್ಷ್ಮಿ​​.. ಡ್ರೀಮ್​ 11ನಿಂದ 1 ಕೋಟಿ ರೂ. ಗೆದ್ದ!

ಕೋಲ್ಕತ್ತಾ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಚಕ್ರವರ್ತಿ 2 ವಿಕೆಟ್​, ಶಿವಂ ಮಾವಿ, ಫಾರ್ಗೂಸನ್​ ತಲಾ 1 ವಿಕೆಟ್​ ಪಡೆದುಕೊಂಡರು. ಬೌಲಿಂಗ್ ಮಾಡಿದ ಹಸನ್​ ಅಲಿ, ನರೈನ್​ ವಿಕೆಟ್​ ಪಡೆದುಕೊಳ್ಳುವಲ್ಲಿ ವಿಫಲರಾದರೂ, ರನ್​​ಗತಿಗೆ ಕಡಿವಾಣ ಹಾಕಿದರು.

Last Updated :Oct 13, 2021, 9:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.