2023ರ ಏಷ್ಯಾಕಪ್​ ಪಾಕಿಸ್ತಾನದಲ್ಲಿ ಆಯೋಜನೆ.. 17 ವರ್ಷಗಳ ನಂತರ ಪಾಕ್​ ನೆಲಕ್ಕೆ ಭಾರತ ಪ್ರವಾಸ?

author img

By

Published : Oct 15, 2021, 10:11 PM IST

Pakistan set to host Asia Cup

ಏಷ್ಯನ್ ಕ್ರಿಕೆಟ್ ಕೌನ್ಸಿಲ್​(ACC) ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, 2023ರ ಏಷ್ಯಾಕಪ್​​ ಪಾಕಿಸ್ತಾನದಲ್ಲಿ ಆಯೋಜನೆ ಮಾಡಲು ಒಮ್ಮತದ ಒಪ್ಪಿಗೆ ನೀಡಲಾಗಿದೆ.

ನವದೆಹಲಿ: 2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನೆರೆಯ ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಲಿದ್ದು, ಹೀಗಾಗಿ ಬರೋಬ್ಬರಿ 17 ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಪಾಕ್​ ಪ್ರವಾಸ ಕೈಗೊಳ್ಳಬಹುದು ಎಂಬ ಮಾತು ಕೇಳಿ ಬರಲು ಶುರುವಾಗಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್​(ACC) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 2023ರ ಏಷ್ಯಾಕಪ್​ ಪಾಕ್​​ನಲ್ಲಿ ಆಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಏಕದಿನ ಮಾದರಿಯಲ್ಲಿ ಈ ಟೂರ್ನಮೆಂಟ್​​ ಆಯೋಜನೆಗೊಳ್ಳಲಿದೆ. ಮುಂದಿನ ವರ್ಷ ಶ್ರೀಲಂಕಾದಲ್ಲಿ ಏಷ್ಯಾಕಪ್​ ಆಯೋಜನೆಗೊಂಡಿದ್ದು, ಅದೇ ಮಾದರಿಯಲ್ಲಿ ಪಾಕ್​ನಲ್ಲೂ ಟೂರ್ನಮೆಂಟ್​ ನಡೆಯಲಿದೆ.

ದುಬೈನಲ್ಲಿ ನಡೆದ ಎಸಿಸಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಲ್ಲಿ ಬಿಸಿಸಿಐನ ಕಾರ್ಯದರ್ಶಿ ಜಯ್​ ಶಾ ಭಾಗಿಯಾಗಿದ್ದರು. ನಿರ್ಧಾರವನ್ನ ಸರ್ವಾನುಮತದಿಂದ ತೆಗೆದುಕೊಂಡಿರುವ ಕಾರಣ ಭಾರತ 17 ವರ್ಷಗಳ ನಂತರ ಪಾಕ್​ ನೆಲಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಈ ಟೂರ್ನಿಯ ವೇಳಾಪಟ್ಟಿ ಶೀಘ್ರದಲ್ಲೇ ಅಂತಿಮಗೊಳ್ಳಲಿದ್ದು, ಇಂದಿನ ಸಭೆಯಲ್ಲಿ ಪಿಸಿಬಿ ಅಧ್ಯಕ್ಷ ರಮೀಝ್​​ ರಾಜಾ ಭಾಗಿಯಾಗಿದ್ದರು.

2023ರ ಅಕ್ಟೋಬರ್​-ನವೆಂಬರ್ ತಿಂಗಳಲ್ಲಿ ಐಸಿಸಿ ವಿಶ್ವಕಪ್​ ನಿಗದಿಯಾಗಿರುವ ಕಾರಣ, ಏಷ್ಯಾಕಪ್​​ ವರ್ಷದ ಮೊದಲಾರ್ಧದಲ್ಲಿ ನಡೆಯುವ ಸಾಧ್ಯತೆ ಇದೆ. 2020ರ ಏಷ್ಯಾಕಪ್​ ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಭಾರತ ಅಲ್ಲಿಗೆ ಪ್ರಯಾಣ ಬೆಳೆಸಲು ಹಿಂದೇಟು ಹಾಕಿದ್ದರಿಂದ ಶ್ರೀಲಂಕಾಗೆ ಈ ಆಯೋಜನೆ ಬಿಟ್ಟುಕೊಡಲಾಗಿತ್ತು.

ಆದರೆ ಕೋವಿಡ್​ನಿಂದಾಗಿ 2020, 21ರ ಏಷ್ಯಾಕಪ್​​ ಆಯೋಜನೆ ಸಾಧ್ಯವಾಗಿಲ್ಲ. ಇದೀಗ ಬಿಸಿಸಿಐ - ಪಿಸಿಬಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಕಾರಣ ಸೌಹಾರ್ದಯುತ ಸಭೆ ನಡೆದಿದ್ದು, ಈ ವೇಳೆ ಐಪಿಎಲ್​ ಫೈನಲ್​ ಪಂದ್ಯ ವೀಕ್ಷಣೆ ಮಾಡಲು ಬರುವಂತೆ ಜಯ್​ ಶಾ ಪಾಕ್​​ ಕ್ರಿಕೆಟ್​ ಮಂಡಳಿ ಅಧ್ಯಕ್ಷರಿಗೆ ಆಹ್ವಾನ ಸಹ ನೀಡಿದರು ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.