ಬಲಿಷ್ಠ ಭಾರತದೆದುರು ಸರಣಿ ಜಯ ಸಾಧಿಸಿದ ದ.ಆಫ್ರಿಕಾ; ಐತಿಹಾಸಿಕ ಅವಕಾಶ ಕೈಚೆಲ್ಲಿದ ಕೊಹ್ಲಿ ಪಡೆ

author img

By

Published : Jan 14, 2022, 5:18 PM IST

Updated : Jan 14, 2022, 5:25 PM IST

Team india lose test series in SA

ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವ ಇರಾದೆಯೊಂದಿಗೆ ಪ್ರಯಾಣ ಬೆಳೆಸಿದ್ದ ಟೀಂ ಇಂಡಿಯಾಗೆ ನಿರಾಸೆಯಾಗಿದೆ. ಹರಿಣಗಳ ನಾಡಲ್ಲಿ ಭಾರತ ಮತ್ತೊಮ್ಮೆ ಸೋಲಿನ ಸರಪಳಿಯಿಂದ ಹೊರಬರಲು ಸಾಧ್ಯವಾಗಲಿಲ್ಲ.

ಕೇಪ್​ಟೌನ್​: ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲುವ ಗುರಿಯೊಂದಿಗೆ ಪ್ರಯಾಣ ಬೆಳೆಸಿದ್ದ ಟೀಂ ಇಂಡಿಯಾ ನಿರಾಸೆಗೊಳಗಾಗಿದೆ. ಮೂರು ಟೆಸ್ಟ್​ ಪಂದ್ಯಗಳ ಸರಣಿಯನ್ನು 2-1ರ ಅಂತರದಿಂದ ಕೈಚೆಲ್ಲಿದ್ದು, ಈ ಮೂಲಕ ಐತಿಹಾಸಿಕ ಸಾಧನೆ ನಿರ್ಮಾಣ ಮಾಡುವ ಭಾರತದ ಕನಸು ಕನಸಾಗಿಯೇ ಉಳಿದಿದೆ. ಕೇಪ್​ಟೌನ್​ನಲ್ಲಿ ನಡೆದ ನಿರ್ಣಾಯಕ ಟೆಸ್ಟ್​ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಅಂತರದಿಂದ ಸೋಲು ಕಂಡಿದೆ.

Team india lose test series in SA
ಸರಣಿಯಲ್ಲಿ 2-1 ಅಂತರದ ಜಯ ಸಾಧಿಸಿದ ಎಲ್ಗರ್ ಪಡೆ

ಕೇಪ್​ಟೌನ್​​ನಲ್ಲಿ ನಡೆದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡ ಕೊಹ್ಲಿ ಪಡೆಗೆ ಸೋಲಿನ ರುಚಿ ತೋರಿಸಿತು. ಪೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ 79 ರನ್​ಗಳ ನೆರವಿನಿಂದ 223ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 210ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಂ ಇಂಡಿಯಾ 13ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು.

Team india lose test series in SA
ಎರಡನೇ ಇನ್ನಿಂಗ್ಸ್​ನಲ್ಲಿ ತಂಡಕ್ಕೆ ಆಸರೆಯಾಗಿದ್ದ ರಿಷಭ್​ ಪಂತ್‌

ಎರಡನೇ ಇನ್ನಿಂಗ್ಸ್​​ನಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದೆಲ್ಲ ಪ್ಲೇಯರ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ತಂಡ 198ರನ್​ಗಳಿಗೆ ಆಲೌಟ್​ ಆಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಪರ ರಬಾಡಾ, ನಿಂಗಿಡಿ ತಲಾ 3 ವಿಕೆಟ್ ಪಡೆದರೆ, ಜಾನ್ಸನ್​ 4 ವಿಕೆಟ್ ಕಿತ್ತರು. ಟೀಂ ಇಂಡಿಯಾ ಪರ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸಿದರು.

ಸರಣಿ ನಿರ್ಣಯಿಸುವ ಪಂದ್ಯದಲ್ಲಿ ಭಾರತ ನೀಡಿದ್ದ 212 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮರ್ಕ್ರಾಮ್​ 16 ರನ್​ ಹಾಗೂ ಎಲ್ಗರ್​​ 30 ರನ್​ಗಳಿಕೆ ಮಾಡಿದರು. ಇದರ ಬಳಿಕ ಮೈದಾನಕ್ಕೆ ಬಂದ ಪೀಟರ್ಸನ್​​ 82 ರನ್​ಗಳಿಕೆ ಮಾಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಕೊನೆಯದಾಗಿ ಬವುಮಾ ಅಜೇಯ 32 ರನ್​ ಹಾಗೂ ಡುಸೆನ್​​ ಅಜೇಯ 41ರನ್​ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಂಡ 63.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ನಷ್ಟಕ್ಕೆ 212ರನ್​​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು.

ಸೆಂಚುರಿಯನ್​​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 113ರನ್​ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ 1--0 ಅಂತರದ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ ನಂತರ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಸರಣಿ 1-1 ಅಂತರದಲ್ಲಿ ಸಮಗೊಂಡಿತ್ತು.

Last Updated :Jan 14, 2022, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.