ವಿಶ್ವಕಪ್ ಫೈನಲ್ ಪಂದ್ಯ: ಮುಂಬೈನಿಂದ ಅಹಮದಾಬಾದ್‌ಗೆ 3 ವಿಶೇಷ ರೈಲು

ವಿಶ್ವಕಪ್ ಫೈನಲ್ ಪಂದ್ಯ: ಮುಂಬೈನಿಂದ ಅಹಮದಾಬಾದ್‌ಗೆ 3 ವಿಶೇಷ ರೈಲು
ನಾಳೆ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್ನಲ್ಲಿ ನಡೆಯಲಿದ್ದು, ಇದಕ್ಕಾಗಿ ಮುಂಬೈ ನಿಂದ 3 ವಿಶೇಷ ರೈಲುಗಳು ಅಹಮದಾಬಾದ್‌ಗೆ ಚಲಿಸಲಿವೆ.
ಮುಂಬೈ: ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್ (World Cup) ಸರಣಿ ಈಗಾಗಲೇ ಅಂತಿಮಘಟ್ಟ ತಲುಪಿದ್ದು, 2023ರ ವಿಶ್ವಕಪ್ ವಿಜೇತರನ್ನು ನಿರ್ಧರಿಸಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು ಭಾನುವಾರ (ನಾಳೆ) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆಲುವಿಗಾಗಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಫೈನಲ್ ಪಂದ್ಯವಾದ ಕಾರಣ ನಾಳೆ ಪ್ರಧಾನಿ ಮೋದಿ ಸೇರಿದಂತೆ ಸಿನಿತಾರೆಯರು, ಗಣ್ಯರು ಪಂದ್ಯ ವೀಕ್ಷಣೆಗೆ ಆಗಮಿಸಿದುತ್ತಿದ್ದಾರೆ. ಜತೆಗೆ ಈ ವಿಶೇಷ ಕ್ಷಣವನ್ನು ಆನಂದಿಸಲು ಕ್ರಿಕೆಟ್ ಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಅಹಮದಾಬಾದ್‌ಗೆ ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಭಾರತೀಯ ರೈಲ್ವೆ ವಿವಿಧ ರಾಜ್ಯಗಳಿಂದ ವಿಶೇಷ ರೈಲುಗಳನ್ನು ಓಡಿಸಲು ಸಿದ್ದವಾಗಿದೆ. ಈ ಪೈಕಿ ಮುಂಬೈ ನಿಂದ ಅಹಮದಾಬಾದ್‌ಗೆ 3 ವಿಶೇಷ ರೈಲುಗಳು ಸಂಚರಿಸಲಿವೆ.
ಮುಂಬೈ ನಿಂದ ಅಹಮದಾಬಾದ್‌ಗೆ 3 ವಿಶೇಷ ರೈಲುಗಳು ವಿವರ
ಮೊದಲ ರೈಲು: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಅಹಮದಾಬಾದ್ ಸ್ಪೇಷಲ್ ಎಕ್ಸ್‌ಪ್ರೆಸ್ (01153) ನವೆಂಬರ್ 18ರಂದು ಮುಂಬೈನಿಂದ ರಾತ್ರಿ 10.30ಕ್ಕೆ ಹೊರಡಲಿದ್ದು, ನವೆಂಬರ್ 19 ರಂದು ಬೆಳಗ್ಗೆ 6.40ಕ್ಕೆ ಅಹಮದಾಬಾದ್ ತಲುಪಲಿದೆ.
ಹಿಂತಿರುಗುವ ಸಮಯ: ಪಂದ್ಯ ಮುಕ್ತಾಯದ ನಂತರ ಅಹಮದಾಬಾದ್ - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಸ್ಪೇಷಲ್ ಎಕ್ಸ್‌ಪ್ರೆಸ್ (01154) ಮಧ್ಯರಾತ್ರಿ 01.44 ಕ್ಕೆ ಹೊರಡಲಿದ್ದು, ನವೆಂಬರ್ 20 ರಂದು ಬೆಳಗ್ಗೆ 10.35ಕ್ಕೆ ಮುಂಬೈ ತಲುಪಲಿದೆ. ಒಟ್ಟು 17 ಬೋಗಿಗಳನ್ನು ಹೊಂದಿರುತ್ತದೆ.
ಎರಡನೇ ರೈಲು: ಬಾಂದ್ರಾ ಟರ್ಮಿನಸ್ - ಅಹಮದಾಬಾದ್ ಸ್ಪೇಷಲ್ (09001) ಬಾಂದ್ರಾ ಟರ್ಮಿನಸ್‌ನಿಂದ ನವೆಂಬರ್ 18ರಂದು ರಾತ್ರಿ 11.45ಕ್ಕೆ ಹೊರಟು 19 ನವೆಂಬರ್ 2023 ಭಾನುವಾರ ಬೆಳಗ್ಗೆ 07.20ಕ್ಕೆ ಅಹಮದಾಬಾದ್ ತಲುಪುತ್ತದೆ
ಹಿಂತಿರುಗುವ ಸಮಯ: ನವೆಂಬರ್20 ರಂದು ಅಹಮದಾಬಾದ್ - ಬಾಂದ್ರಾ ಟರ್ಮಿನಸ್ (09002) ಬೆಳಗ್ಗೆ 4 ಗಂಟೆಗೆ ಹೊರಟು, ಅದೇ ದಿನ ಮಧ್ಯಾಹ್ನ 12.10ಕ್ಕೆ ಬಾಂದ್ರಾ ಟರ್ಮಿನಸ್ ತಲುಪುತ್ತದೆ. ಈ ರೈಲು ದಾದರ್, ಬೊರಿವಲಿ, ಪಾಲ್ಘರ್, ವಾಪಿ, ವಲ್ಸಾದ್, ನವಸಾರಿ, ಸೂರತ್ ಮತ್ತು ವಡೋದರಾ ಮಾರ್ಗವಾಗಿ ಚಲಿಸಲಿದೆ.
ಮೂರನೇ ರೈಲು: ಮುಂಬೈ ಸೆಂಟ್ರಲ್ - ಅಹಮದಾಬಾದ್ (09049) ನವೆಂಬರ್ 18 ರಂದು ಮುಂಬೈ ಸೆಂಟ್ರಲ್‌ನಿಂದ ರಾತ್ರಿ 11.55ಕ್ಕೆ ಹೊರಟು 19 ನವೆಂಬರ್ 2023 ಭಾನುವಾರದಂದು ಬೆಳಗ್ಗೆ 08.45ಕ್ಕೆ ಅಹಮದಾಬಾದ್ ತಲುಪುತ್ತದೆ.
ಹಿಂತಿರುಗುವ ಸಮಯ: ಅಹಮದಾಬಾದ್ - ಮುಂಬೈ ಸೆಂಟ್ರಲ್ (09050) ಅಹಮದಾಬಾದ್‌ನಿಂದ ನವೆಂಬರ್ 20 ರಂದು ಬೆಳಗ್ಗೆ 06.20ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 02.10 ಕ್ಕೆ ಮುಂಬೈ ಸೆಂಟ್ರಲ್ ತಲುಪುತ್ತದೆ. ಈ ರೈಲು ಬೋರಿವಲಿ, ವಾಪಿ, ವಲ್ಸಾದ್, ನವಸಾರಿ, ಸೂರತ್, ಭರೂಚ್ ಮತ್ತು ವಡೋದರಾ ಮಾರ್ಗವಾಗಿ ಚಲಿಸಲಿದೆ.
