World Cup Theme Song: ನಾಳೆ ಬರಲಿದೆ ವಿಶ್ವಕಪ್ ಥೀಮ್ ಸಾಂಗ್ 'ದಿಲ್ ಜೆಶ್ನ ಬೋಲೆ'..

World Cup Theme Song: ನಾಳೆ ಬರಲಿದೆ ವಿಶ್ವಕಪ್ ಥೀಮ್ ಸಾಂಗ್ 'ದಿಲ್ ಜೆಶ್ನ ಬೋಲೆ'..
ದಿಲ್ ಜೆಶ್ನ ಬೋಲೆ ಎಂಬ ವಿಶ್ವಕಪ್ ಥೀಮ್ ಸಾಂಗ್ ನಾಳೆ ಬಿಡುಗಡೆ ಆಗಲಿದೆ. ಈ ಹಾಡಿನ ಮುಖ್ಯಭೂಮಿಕೆಯಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ಹೈದರಾಬಾದ್: 2023ರ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮೊದಲ ಪಂದ್ಯ ನಡೆಯಲಿದೆ. ಐಸಿಸಿ ವಿಶ್ವಕಪ್ನ ಅಧಿಕೃತ ಗೀತೆಯನ್ನು ಸೆಪ್ಟೆಂಬರ್ 20 ರಂದು (ಬುಧವಾರ) ಪ್ರಾರಂಭಿಸಲು ಸಜ್ಜಾಗಿದೆ. ಥೀಮ್ ಸಾಂಗ್‌ನಲ್ಲಿ ರಣವೀರ್ ಸಿಂಗ್ ಮತ್ತು ಧನಶ್ರೀ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡನ್ನು 'ದಿಲ್ ಜೆಶ್ನ ಬೋಲೆ' ಎಂದು ಹೆಸರಿಸಲಾಗಿದೆ, ಇದನ್ನು ಜನಪ್ರಿಯ ಸಂಗೀತ ಸಂಯೋಜನೆಯ ಪ್ರೀತಮ್ ಸಂಯೋಜಿಸಿದ್ದಾರೆ.
ಸೆಪ್ಟೆಂಬರ್ 20 ರಂದು ವಿಶ್ವಕಪ್ ಥೀಮ್ ಸಾಂಗ್ ಅನಾವರಣ: ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ ಆ್ಯಪ್ ಖಾತೆಯಲ್ಲಿ (ಹಿಂದಿನ ಟ್ವಿಟರ್) ಐಸಿಸಿ ಅಪ್‌ಲೋಡ್ ಮಾಡಿದ ಪೋಸ್ಟರ್‌ನಲ್ಲಿ, ಪ್ರಮುಖ ನಟ ರಣವೀರ್ ನೇವಿ ಬ್ಲೂ ಶರ್ಟ್ ಧರಿಸಿ, ಮರೂನ್ ಬಣ್ಣದ ಬ್ಲೇಜರ್ ಮತ್ತು ಮ್ಯಾಚಿಂಗ್ ಹ್ಯಾಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಅಭಿಮಾನಿಗಳನ್ನೂ ಕಾಣಬಹುದು. ಪೋಸ್ಟ್ ಪ್ರಕಾರ, ಥೀಮ್ ಬುಧವಾರ (ಸೆಪ್ಟೆಂಬರ್ 20) ಮಧ್ಯಾಹ್ನ 12 ಗಂಟೆಗೆ ಹಾಡು ಬಿಡುಗಡೆಗೊಳ್ಳುತ್ತದೆ.
-
The greatest cricketing Jashn is almost here, 12pm IST tomorrow! #CWC23 👀 pic.twitter.com/vqAURnVWlV
— ICC (@ICC) September 19, 2023
ಆತಿಥೇಯ ಭಾರತ ಅಕ್ಟೋಬರ್ 8 ರಂದು ಐದು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ವಿಶ್ವಕಪ್ನಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವು ಇತರ ಒಂಬತ್ತು ತಂಡಗಳನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಡುತ್ತದೆ ಮತ್ತು ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತ ಮತ್ತು ಸೆಮಿ-ಫೈನಲ್‌ಗಳಿಗೆ ಅರ್ಹತೆ ಪಡೆಯುತ್ತವೆ.
-
A scrapbook of ICC Men's Cricket World Cup winning captains 😍
— ICC (@ICC) September 19, 2023
Who will etch their name in the history books at #CWC23? 🏆 pic.twitter.com/ot6eOcsaXd
ಆಸ್ಟ್ರೇಲಿಯಾ ಸರಣಿ: ವಿಶ್ವಕಪ್ಗೂ ಮುನ್ನ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯದ ಸರಣಿಯನ್ನು ಆಡಲಿದೆ. ಏಷ್ಯಾಕಪ್ ಗೆದ್ದಿರುವ ಹುಮ್ಮಸ್ಸಿನಲ್ಲಿದೆ. ಉಭಯ ತಂಡಗಳಿಗೆ ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿಯಲ್ಲಿ ತಯಾರಿಯ ಭಾಗವಾಗಿದೆ. ನಿನ್ನೆ ಈ ಸರಣಿಗೆ ಭಾರತ ಎರಡು ತಂಡವನ್ನು ಪ್ರಕಟಿಸಿದ್ದು, ಮೊದಲೆರಡು ಪಂದ್ಯಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕುಲ್ದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ವಿಶ್ರಾಂತಿಯಲ್ಲಿರಲಿದ್ದಾರೆ. ಕೊನೆಯ ಏಕದಿನಕ್ಕೆ ಈ ನಾಲ್ವರು ಆಟಗಾರರು ತಂಡವನ್ನು ಸೇರಿಕೊಳ್ಳುತ್ತಾರೆ. ಅಕ್ಷರ್ ಪಟೇಲ್ ಗಾಯಗೊಂಡಿರುವ ಕಾರಣ ರವಿಚಂದ್ರನ್ ಅಶ್ವಿನ್ ಮೂರು ಏಕದಿನ ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ.
ವಿಶ್ವಕಪ್ ಗೆಲ್ಲುವ ಭರವಸೆಯಲ್ಲಿ ಭಾರತ: 2011ರ ವಿಶ್ವಕಪ್ನ ಕ್ಷಣಗಳು ಮತ್ತೆ ಮರುಕಳಿಸಲಿವೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 2013ರ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ವಿಶ್ವಕಪ್ ತವರಿನಲ್ಲಿ ನಡೆಯುತ್ತಿದ್ದು ಗೆಲ್ಲುವ ಫೇವ್ರೇಟ್ ತಂಡವಾಗಿದೆ. 5 ವರ್ಷಗಳ ನಂತರ ಏಷ್ಯಾಕಪ್ ಗೆಲ್ಲುವ ಮೂಲಕ ಉತ್ತಮ ಲಯದಲ್ಲಿ ಏಕದಿನ ಕಂಡು ಬಂದಿರುವುದು ಭರವಸೆಯನ್ನು ಇನ್ನಷ್ಟೂ ಹೆಚ್ಚುಮಾಡಿದೆ.
