ಐಸಿಸಿ ಟಿ-20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ... ಮೆಂಟರ್ ಆಗಿ ಆಯ್ಕೆಯಾದ ಎಂಎಸ್ ಧೋನಿ

author img

By

Published : Sep 8, 2021, 9:22 PM IST

Updated : Sep 8, 2021, 10:57 PM IST

India Squad

ಐಸಿಸಿ ಟಿ-20 ವಿಶ್ವಕಪ್​ಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದೆ. ಪ್ರಮುಖವಾಗಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಮೆಂಟರ್​​ ಆಗಿ ನೇಮಕಗೊಂಡಿದ್ದಾರೆಂದು ಬಿಸಿಸಿಐ ತಿಳಿಸಿದೆ.

ಮುಂಬೈ: ಯುಎಇನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್​ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ವಿರಾಟ್​​ ಕೊಹ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.

India Squad
ಟಿ20 ವಿಶ್ವಕಪ್​ಗಾಗಿ ಟೀಂ ಇಂಡಿಯಾ

ಟೀಂ ಇಂಡಿಯಾ ತಂಡ ಇಂತಿದೆ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ರೋಹಿತ್ ಶರ್ಮಾ(ಉಪನಾಯಕ), ಕೆ.ಎಲ್ ರಾಹುಲ್​, ಸೂರ್ಯಕುಮಾರ್​ ಯಾದವ್, ರಿಷಭ್ ಪಂತ್(ವಿ​,ಕೀ), ಇಶಾನ್ ಕಿಶನ್​(ವಿ.ಕೀ),ಹಾರ್ದಿಕ್​ ಪಾಂಡ್ಯಾ, ರವೀಂದ್ರ ಜಡೇಜಾ, ರಾಹುಲ್​ ಚಹರ್​, ಆರ್​.ಅಶ್ವಿನ್​, ಅಕ್ಸರ್ ಪಟೇಲ್​, ವರುಣ್​ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್​ ಕುಮಾರ್​, ಮೊಹಮ್ಮದ್ ಶಮಿ

  • TEAM - Virat Kohli (Capt), Rohit Sharma (vc), KL Rahul, Suryakumar Yadav, Rishabh Pant (wk), Ishan Kishan (wk), Hardik Pandya, Ravindra Jadeja, Rahul Chahar, Ravichandran Ashwin, Axar Patel, Varun Chakravarthy, Jasprit Bumrah, Bhuvneshwar Kumar, Mohd Shami.#TeamIndia

    — BCCI (@BCCI) September 8, 2021 " class="align-text-top noRightClick twitterSection" data=" ">

ಸ್ಟ್ಯಾಂಡ್ ಬೈ ಆಟಗಾರರು: ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್.

ಟೀಂ ಇಂಡಿಯಾ ಟಿ-20 ಕ್ರಿಕೆಟ್​ನ ಖಾಯಂ ಸದಸ್ಯರಾಗಿದ್ದ ಯಜುವೇಂದ್ರ ಚಹಲ್​ಗೆ ವಿಶ್ವಕಪ್​ಗೆ ಅವಕಾಶ ನೀಡಿಲ್ಲ. ಇದರ ಜೊತೆಗೆ ಶ್ರೀಲಂಕಾದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಶಿಖರ್​​ ಧವನ್​ಗೂ ತಂಡದಿಂದ ಕೈಬಿಡಲಾಗಿದೆ. ವಿಶೇಷವೆಂದರೆ ತಂಡದಲ್ಲಿ ಅನುಭವಿ ಆಲ್​ರೌಂಡರ್ ಆರ್​.ಅಶ್ವಿನ್​ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

India Squad
ವಿಶ್ವಕಪ್​ಗಾಗಿ ಟೀಂ ಇಂಡಿಯಾ

ಏಕೈಕ ಕನ್ನಡಿಗನಿಗೆ ಮಣೆ, ಪ್ರಮುಖರಿಗೆ ಗೇಟ್​ಪಾಸ್​

15 ಸದಸ್ಯರನ್ನೊಳಗೊಂಡ ತಂಡದಲ್ಲಿ ಪ್ರಮುಖ ಆಟಗಾರರಿಗೆ ಬಿಸಿಸಿಐ ಗೇಟ್​ ಪಾಸ್​ ನೀಡಿದ್ದು, ತಂಡದಲ್ಲಿ ಏಕೈಕ ಕನ್ನಡಿಗ ಕೆ.ಎಲ್​ ರಾಹುಲ್​ಗೆ ಅವಕಾಶ ನೀಡಲಾಗಿದೆ. ಆದರೆ ಮನೀಷ್ ಪಾಂಡೆಗೆ ಗೇಟ್ ಪಾಸ್ ನೀಡಲಾಗಿದೆ.

MS Dhoni mentor
ಟೀಂ ಇಂಡಿಯಾಗೆ ಧೋನಿ ಮೆಂಟರ್​​

ಮೆಂಟರ್​ ಆಗಿ ಎಂಎಸ್​ ಧೋನಿ

ಟೀಂ ಇಂಡಿಯಾ ಕ್ಯಾಪ್ಟನ್​ ಆಗಿ ಈಗಾಗಲೇ ಯಶಸ್ವಿಯಾಗಿರುವ ಮಹೇಂದ್ರ ಸಿಂಗ್ ಧೋನಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಟಿ-20 ವಿಶ್ವಕಪ್​ನಲ್ಲಿ ತಂಡದ ಮೆಂಟರ್​ ಆಗಿ ನೇಮಕಗೊಂಡಿದ್ದಾರೆ.

MS Dhoni
ಧೋನಿಗೆ ಮನೆ ಹಾಕಿರುವ ಬಿಸಿಸಿಐ

ಉಳಿದಂತೆ ಚೈನಾಮ್ಯಾನ್ ಖ್ಯಾತಿಯ ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಟಿ ನಟರಾಜನ್, ಶಿಖರ್ ಧವನ್, ಸಂಜು ಸ್ಯಾಮ್ಸನ್, ಮನೀಶ್ ಪಾಂಡೆಗೆ ಗೇಟ್​ಪಾಸ್​ ನೀಡಲಾಗಿದೆ. ಆದರೆ ಹೊಸ ಮುಖಗಳಾದ ಇಶಾನ್ ಕಿಶನ್​, ರಾಹುಲ್​ ಚಹಾರ್​, ಅಕ್ಸರ್ ಪಟೇಲ್​, ವರುಣ್​​ ಚಕ್ರವರ್ತಿ,ಸೂರ್ಯಕುಮಾರ್​ ಯಾದವ್​ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಅಕ್ಟೋಬರ್​ 17ರಿಂದ ನವೆಂಬರ್​​ 14ರವರೆಗೆ ಟೂರ್ನಿ ನಡೆಯಲಿದ್ದು, ಅಕ್ಟೋಬರ್​ 24ರಂದು ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ಭಾರತ ತನ್ನ ಟಿ-20 ವಿಶ್ವಕಪ್​ ಅಭಿಯಾನ ಆರಂಭ ಮಾಡಲಿದೆ. ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಒಂದಾಗಿದೆ. ಟೂರ್ನಿಗಾಗಿ ಈಗಾಗಲೇ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಪ್ರಕಟಗೊಂಡಿವೆ.

Last Updated :Sep 8, 2021, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.