18 ಬೌಂಡರಿ, 4 ಸಿಕ್ಸರ್‌, 143 ರನ್! 11 ಎಸೆತಗಳಲ್ಲೇ 43 ರನ್‌: ಹರ್ಮನ್‌ ಕೌರ್‌ ಬ್ಯಾಟಿಂಗ್ ವೈಭವ!

author img

By

Published : Sep 22, 2022, 7:40 AM IST

Harmanpreet Kaur

ಟೀಂ ಇಂಡಿಯಾ ನಾಯಕಿ ಹರ್ಮನ್​​ಪ್ರೀತ್ ಕೌರ್​​ ಆಂಗ್ಲರ ವಿರುದ್ಧ ಅಬ್ಬರಿಸಿದ್ದು, 18 ಬೌಂಡರಿ, 4 ಸಿಕ್ಸರ್​​​ಗಳ ಮೂಲಕ ಕೇವಲ 111 ಎಸೆತಗಳಲ್ಲಿ ಭರ್ಜರಿ 143 ರನ್​​​​ಗಳಿಸಿದರು.

ಕ್ಯಾಂಟರ್ಬರಿ(ಇಂಗ್ಲೆಂಡ್​): ಆಂಗ್ಲರ ನೆಲದಲ್ಲಿ ಪಾರಮ್ಯ ಮೆರೆದಿರುವ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಅದ್ಭುತ ಫಾರ್ಮ್​​ನಲ್ಲಿರುವ ಕ್ಯಾಪ್ಟನ್​ ಹರ್ಮನ್​​ಪ್ರೀತ್​ ಕೌರ್​ ದಾಖಲೆಯ 143ರನ್​​​ಗಳ ಆಟವಾಡಿದರು. ಇದರಲ್ಲಿ ಕೊನೆಯ 43 ರನ್​​​​ಗಳು ಕೇವಲ 11 ಎಸೆತಗಳಲ್ಲಿ ಹರಿದು ಬಂದಿವೆ ಎಂಬುದು ಗಮನಾರ್ಹ.

ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಬಂದ ನಾಯಕಿ ಹರ್ಮನ್​​ಪ್ರೀತ್​ ಕೌರ್​ ರನ್​ ಮಳೆ ಹರಿಸಿದರು. ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಅವರು, 64 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಬಳಿಕ ತಮ್ಮ ಬ್ಯಾಟಿಂಗ್​​​ಗೆ ವೇಗ ನೀಡಿ 100 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ 23 ವರ್ಷಗಳ ಬಳಿಕ ODI ಸರಣಿ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್‌ ಟೀಂ

11 ಎಸೆತಗಳಲ್ಲಿ 43 ರನ್!​​: ಪಂದ್ಯದಲ್ಲಿ ಟೀಂ ಇಂಡಿಯಾ 47 ಓವರ್​​​​ಗಳಲ್ಲಿ 271ರನ್​​​​​ಗಳಿಕೆ ಮಾಡಿತ್ತು. ಇನ್ನುಳಿದ ಮೂರು ಓವರ್​​​​ಗಳಲ್ಲಿ ತಂಡ ದಾಖಲೆಯ 62 ರನ್​ ಸೊರೆಗೈದಿದೆ. ಇದರಲ್ಲಿ ಹರ್ಮನ್​​ಪ್ರೀತ್ ಕೌರ್​​ 11 ಎಸೆತಗಳಲ್ಲಿ 43 ರನ್​​​ಗಳಿಕೆ ಮಾಡಿದ್ದರು. ಈ ಮೂಲಕ ಅಜೇಯ 143 ರನ್ ಸಂಪಾದಿಸಿದರು. ಇವರ ಇನ್ನಿಂಗ್ಸ್​​ನಲ್ಲಿ 4 ಸಿಕ್ಸರ್​, 18 ಬೌಂಡರಿಗಳು ಸೇರಿದ್ದವು. ಮಹಿಳಾ ಕ್ರಿಕೆಟ್​ನಲ್ಲಿ ಹರ್ಮನ್​ ಪ್ರೀತ್​ ಬ್ಯಾಟ್​​ನಿಂದ ಸಿಡಿದಿರುವ 5ನೇ ಹಾಗೂ ಎರಡನೇ ವೇಗದ ಶತಕ ಇದಾಗಿದೆ.

ಹರ್ಮನ್​ ಆಟಕ್ಕೆ ಮೆಚ್ಚುಗೆ: ಹರ್ಮನ್​ಪ್ರೀತ್ ಕೌರ್​ ಬ್ಯಾಟಿಂಗ್​ ವೈಖರಿಗೆ ಮಾಜಿ ಆಟಗಾರರಾದ ದೀಪ್​ ದಾಸ್​​ಗುಪ್ತಾ, ಅಮಿತ್ ಮಿಶ್ರಾ ಹಾಗೂ ಇಯಾನ್ ಬಿಷಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.​ ವಾಸೀಂ ಜಾಫರ್​,ಅಭಿನವ್​ ಮುಕ್ಕುಂದ್ ಸಹ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.