ಭಾರತ - ಇಂಗ್ಲೆಂಡ್​ ನಡುವೆ ರದ್ದಾದ ಫೈನಲ್​​ ಟೆಸ್ಟ್​​ ಪಂದ್ಯಕ್ಕೆ ಮುಹೂರ್ತ ಫಿಕ್ಸ್​​.. ಈ ತಿಂಗಳಲ್ಲಿ ಹಣಾಹಣಿ

author img

By

Published : Oct 22, 2021, 6:03 PM IST

Fifth Test between England and India

ಕೋವಿಡ್​ ಕಾರಣದಿಂದಾಗಿ ಭಾರತ-ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್​ ಪಂಧ್ಯ ರದ್ದಾಗಿತ್ತು. ಆದರೆ ಇದೀಗ ಉಭಯ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸಿ, ಫೈನಲ್ ಪಂದ್ಯ ನಡೆಸಲು ದಿನಾಂಕ ಸಮಯ ಮಾಡಿವೆ.

ಮ್ಯಾಂಚೆಸ್ಟರ್​​: ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಕೊನೆಯ ಪಂದ್ಯ ಆಡುವುದಕ್ಕೂ ಮುಂಚಿತವಾಗಿ ಕೋವಿಡ್​ ಸೋಂಕಿಗೊಳಗಾಗಿದ್ದ ಕಾರಣ ಫೈನಲ್​ ಪಂದ್ಯ ರದ್ದಾಗಿತ್ತು. ಇದೀಗ ಆ ಪಂದ್ಯ ಮುಂದಿನ ವರ್ಷ ಜುಲೈ ತಿಂಗಳಲ್ಲಿ ಆಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಆಗಸ್ಟ್ ​​- ಸೆಪ್ಟೆಂಬರ್ ತಿಂಗಳಲ್ಲಿ ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್​​ ಸರಣಿ ಆಯೋಜನೆಗೊಂಡಿತ್ತು. ನಾಲ್ಕು ಟೆಸ್ಟ್​ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಐದನೇ ಪಂದ್ಯಕ್ಕಾಗಿ ಟೀಂ ಇಂಡಿಯಾ ತಯಾರಿ ನಡೆಸಿದ್ದ ವೇಳೆ ತಂಡದ ಸಹಾಯಕ ಸಿಬ್ಬಂದಿ ಯೋಗೇಶ್​​ ಪಾರ್ಮರ್​ಗೆ ಕೊರೊನಾ ಸೋಂಕು ದೃಢಗೊಂಡಿದ್ದರಿಂದ ಫೈನಲ್​ ಪಂದ್ಯ ದಿಢೀರ್​ ಆಗಿ ರದ್ದುಗೊಂಡಿತ್ತು.

  • The fifth match of our Men's LV= Insurance Test Series against India has been rescheduled and will now take place in July 2022.

    — England Cricket (@englandcricket) October 22, 2021 " class="align-text-top noRightClick twitterSection" data=" ">

ಐದು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 2-1 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಕೊನೆಯ ಪಂದ್ಯ ಮುಂದಿನ ವರ್ಷ ಜುಲೈ 2022ರಲ್ಲಿ ಆಯೋಜನೆ ಮಾಡುವುದಾಗಿ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​ ತಿಳಿಸಿದ್ದು, ಅದಕ್ಕೆ ಬಿಸಿಸಿಐ ಕೂಡ ಸಮ್ಮಿತಿ ಸೂಚಿಸಿದೆ.

ಈ ಹಿಂದಿನ ವೇಳಾಪಟ್ಟಿ ಪ್ರಕಾರ ಪಂದ್ಯ ಮ್ಯಾಂಚೆಸ್ಟರ್ ಬದಲಾಗಿ ಎಡ್ಜ್‌ಬಾಸ್ಟನ್(Edgbaston)ದಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಇಸಿಬಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಈಗಾಗಲೇ ವೇಳಾಪಟ್ಟಿ ನಿರ್ಧಾರಗೊಂಡಿರುವ ಕಾರಣ ಎಮಿರೇಟ್ಸ್​ ಓಲ್ಡ್​ ಟ್ರಾಫರ್ಡ್​​ನಲ್ಲಿ ಪಂದ್ಯ ಆಯೋಜನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಎಡ್ಜ್​ಬಾಸ್ಟನ್​ನಲ್ಲಿ ಪಂದ್ಯ ನಡೆಯಲಿದೆ ಎಂದಿದೆ.

Team india
ಟೀಂ ಇಂಡಿಯಾ ಆಟಗಾರರ ಸಂಭ್ರಮ

ಇದನ್ನೂ ಓದಿರಿ: ಟೀಂ ಇಂಡಿಯಾದ ಈ ಅಗ್ರ ಆಟಗಾರನೆಂದರೆ ಪಾಕ್​ ಕ್ರಿಕೆಟ್​ ಪ್ರೇಮಿಗಳಿಗೆ ಅಚ್ಚು- ಮೆಚ್ಚು; ​ಶೋಯೆಬ್ ಅಖ್ತರ್

ಉಭಯ ತಂಡಗಳ ನಡುವಿನ 4ನೇ ಟೆಸ್ಟ್​​ ಪಂಧ್ಯದ ವೇಳೆ ಟೀಂ ಇಂಡಿಯಾ ಕೋಚ್​ಗಳಾದ ರವಿಶಾಸ್ತ್ರಿ, ಭರತ್​ ಅರುಣ್​ ಹಾಗೂ ಆರ್​ ಶ್ರೀಧರ್​ಗೂ ಸೋಂಕು ದೃಢಪಟ್ಟಿತ್ತು. ಅವರು ಕ್ವಾರಂಟೈನ್​ಗೊಳಗಾಗಿದ್ದರು. ಇದರ ಬೆನ್ನಲ್ಲೇ 4ನೇ ಟೆಸ್ಟ್​ ಪಂದ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು. ಆದರೆ, ಫೈನಲ್​ ಪಂದ್ಯದ ವೇಳೆ ಫಿಸಿಯೋಗೆ ಕೊರೊನಾ ಕಾಣಿಸಿಕೊಂಡಿದ್ದ ಕಾರಣ ಪಂದ್ಯ ರದ್ದು ಮಾಡುವ ನಿರ್ಧಾರ ಕೈಗೊಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.