ಚೆಂಡು ಬ್ಯಾಟ್​ಗೆ ತಾಗದಿದ್ದರೂ ಮೈದಾನದಿಂದ ಹೊರ ನಡೆದು ಎಡವಟ್ಟು ಮಾಡ್ಕೊಂಡ ವಾರ್ನರ್!

author img

By

Published : Nov 11, 2021, 11:27 PM IST

david warner

ವಾರ್ನರ್​ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 49 ರನ್​ಗಳಿಸಿ ಔಟಾಗಿದ್ದರು. ಇವರ ದುಡುಕಿನ ನಿರ್ಧಾರದಿಂದ ಗೆಲುವಿನತ್ತ ಸಾಗುತ್ತಿದ್ದ ಆಸ್ಟ್ರೇಲಿಯಾ ದಿಢೀರ್ ಹಿನ್ನಡೆ ಅನುಭವಿಸಿತು. ಇವರ ಬೆನ್ನಲ್ಲೆ ಗ್ಲೇನ್ ಮ್ಯಾಕ್ಸ್​ವೆಲ್(7) ಕೂಡ ರಿವರ್ಸ್​ ಸ್ವೀಪ್ ಮಾಡುವ ಯತ್ನದಲ್ಲಿ ವಿಫಲರಾಗಿ ಔಟಾದರು.

ದುಬೈ: ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಬಾರಿ ಎಡವಟ್ಟು ಮಾಡಿಕೊಂಡಿದ್ದಾರೆ. ಚೆಂಡು ಬ್ಯಾಟ್​ಗೆ ತಾಗದಿದ್ದರೂ ಅಂಪೈರ್ ಔಟೆಂದು ತೀರ್ಪು ನೀಡಿದ ಬೆನ್ನಲ್ಲೇ ಮೈದಾನ ದಿಂದ ಹೊರನಡದು ಆಸ್ಟ್ರೇಲಿಯಾ ಕೈಯಲ್ಲಿದ್ದ ಪಂದ್ಯ ಪಾಕಿಸ್ತಾನದ ಕಡೆಗೆ ತಿರುಗುವಂತೆ ಮಾಡಿದ್ದಾರೆ.

ಶದಬ್​ ಖಾನ್ ಎಸೆದ 11ಓವರ್​ನ ಮೊದಲ ಎಸೆತದಲ್ಲಿ ಈ ಅಚ್ಚರಿಯ ಘಟನೆ ನಡೆಯಿತು. ಶದಬ್​ ಖಾನ್ ಎಸೆದ ಚೆಂಡನ್ನು ದಂಡಿಸುವಲ್ಲಿ ವಾರ್ನರ್​ ವಿಫಲರಾದರು. ಆದರೆ ಬ್ಯಾಟ್​ಗೆ ತಾಗಿದ ಶಬ್ದ ಕೇಳಿದ ಕೂಡಲೆ ಕೀಪರ್ ರಿಜ್ವಾನ್ ಮತ್ತು ಶದಬ್​ ಜೋರಾಗಿ ಅಫೀಲ್ ಮಾಡಿದರು. ಅಂಪೈರ್​ ಕೂಡ ಬೆರಳನ್ನೆತ್ತಿದರು. ಆದರೆ ವಾರ್ನರ್​ ಹಿಂದೆ ಮುಂದೆ ಯೋಚಿಸದೆ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು.

ಆದರೆ ಟಿವಿ ರಿಪ್ಲೇನಲ್ಲಿ ಬ್ಯಾಟ್​ಗೂ ಚೆಂಡಿಗೂ ಅಂತರ ಇರುವುದು ಸ್ಪಷ್ಟವಾಗಿ ಕಂಡುಬಂದಿತು. ಅಲ್ಟ್ರಾ ಎಡ್ಜ್​ನಲ್ಲೂ ಬ್ಯಾಟ್​ಗೆ ತಾಗಿದ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ವಾರ್ನರ್​ ನಡೆದ ಕ್ರಿಕೆಟ್​ ಅಭಿಮಾನಿಗಳಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಬ್ಯಾಟ್​​ನ ಹ್ಯಾಂಡಲ್​ನಲ್ಲಿ ಶಬ್ದ ಬಂದಿದ್ದರಿಂದ ವಾರ್ನರ್​ ಹೊರ ನಡೆದಿರಬಹುದು ಎಂದು ಕೂಡ ಹೇಳಲಾಗುತ್ತಿದೆ.

ವಾರ್ನರ್​ 30 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 49 ರನ್​ಗಳಿಸಿ ಔಟಾಗಿದ್ದರು. ಇವರ ದುಡುಕಿನ ನಿರ್ಧಾರದಿಂದ ಗೆಲುವಿನತ್ತ ಸಾಗುತ್ತಿದ್ದ ಆಸ್ಟ್ರೇಲಿಯಾ ದಿಢೀರ್ ಹಿನ್ನಡೆ ಅನುಭವಿಸಿತು. ಇವರ ಬೆನ್ನಲ್ಲೆ ಗ್ಲೇನ್ ಮ್ಯಾಕ್ಸ್​ವೆಲ್(7) ಕೂಡ ರಿವರ್ಸ್​ ಸ್ವೀಪ್ ಮಾಡುವ ಯತ್ನದಲ್ಲಿ ವಿಫಲರಾಗಿ ಔಟಾದರು.

ಇದನ್ನೂ ಓದಿ:T20 ಯಲ್ಲಿ ವೇಗದ 2500 ರನ್​: ವಿರಾಟ್​ ದಾಖಲೆ ಬ್ರೇಕ್​ ಮಾಡಿದ ಬಾಬರ್​ ಆಜಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.