ಐಪಿಎಲ್​​​ ಹಾಗೂ ಹಣಕ್ಕೋಸ್ಕರ ಮ್ಯಾಂಚೆಸ್ಟರ್​ ಟೆಸ್ಟ್​​ ಪಂದ್ಯ ರದ್ಧು : ಮೈಕಲ್​ ವಾನ್​​ ಆರೋಪ

author img

By

Published : Sep 11, 2021, 3:23 PM IST

Vaughan

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ರದ್ಧುಗೊಳಿಸಲಾಗಿದೆ. ಈಗಾಗಲೇ ಕೆಲ ಪ್ಲೇಯರ್ಸ್​​ ಮ್ಯಾಂಚೆಸ್ಟರ್​ನಿಂದ ದುಬೈಗೆ ಪ್ರಯಾಣ ಬೆಳೆಸಿದ್ದು, ಇಂದು ತಡರಾತ್ರಿ ಅಥವಾ ನಾಳೆ ಬೆಳಗ್ಗೆಯೊಳಗೆ ದುಬೈಗೆ ಬಂದು ಸೇರಲಿದ್ದಾರೆ..

ಮ್ಯಾಂಚೆಸ್ಟರ್​​ : ಇಂಡಿಯನ್​​ ಪ್ರೀಮಿಯರ್ ಲೀಗ್​ ಹಾಗೂ ಹಣಕ್ಕೋಸ್ಕರ ಭಾರತ-ಇಂಗ್ಲೆಂಡ್​ ನಡುವಿನ ಫೈನಲ್​ ಟೆಸ್ಟ್​​ ಪಂದ್ಯ ರದ್ಧುಗೊಳಿಸಲಾಗಿದೆ ಎಂದು ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್ ಮೈಕಲ್​ ವಾನ್​ ಆರೋಪ ಮಾಡಿದ್ದಾರೆ.

ಉಭಯ ತಂಡಗಳ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್​​​ ಪಂದ್ಯ ರದ್ಧುಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆಟಗಾರರು ಐಪಿಎಲ್​​ ಮಿಸ್​ ಮಾಡಿಕೊಳ್ಳಲಿದ್ದಾರೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಹಣ ಮತ್ತು ಐಪಿಎಲ್​ಗೋಸ್ಕರ ಮ್ಯಾಚೆಂಸ್ಟರ್​​ ಟೆಸ್ಟ್​​ ಪಂದ್ಯ ರದ್ಧುಗೊಳಿಸಲಾಗಿದೆ. ಆಟಗಾರರು ಕೋವಿಡ್​​ ಸೋಂಕಿಗೊಳಗಾಗುವ ಹಾಗೂ ಐಪಿಎಲ್​​​ನಿಂದ ಹೊರಗುಳಿಯುವ ಭಯದಲ್ಲಿದ್ದರು ಎಂದು ವಾನ್​​ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಫೈನಲ್​ ಟೆಸ್ಟ್​ ಪಂದ್ಯಕ್ಕೆ 11 ಆಟಗಾರರನ್ನ ಕಣಕ್ಕಿಳಿಸಲು ಭಾರತಕ್ಕೆ ಕಷ್ಟವಾಯಿತು ಎಂಬುದನ್ನ ನಂಬಲು ಸಾಧ್ಯವಿಲ್ಲ. ಟಾಸ್​ ಮಾಡಲು ಕೇವಲ 90 ನಿಮಿಷಗಳ ಕಾಲ ಬಾಕಿ ಇರುವಾಗ ಟೆಸ್ಟ್​​ ಪಂದ್ಯ ರದ್ಧು ಮಾಡುವುದು ಎಷ್ಟರ ಮಟ್ಟಿಗೆ ಸರಿ.

ಇದು ಟೆಸ್ಟ್​​ ಪಂದ್ಯ ವೀಕ್ಷಣೆ ಮಾಡಲು ಆಗಮಿಸಲು ಬಂದಿದ್ದ ಕ್ರೀಡಾಭಿಮಾನಿಗಳಿಗೆ ತೋರಿರುವ ಅಗೌರವ ಎಂದಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಇಂಗ್ಲೆಂಡ್​​ನ ಮಾಜಿ ನಾಯಕ ನಾಸೀರ್ ಹುಸೇನ್​, ಐಪಿಎಲ್​​ ಟಿ-20 ಗೋಸ್ಕರ ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಪಂದ್ಯ ರದ್ಧುಗೊಳಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿರಿ: ಮ್ಯಾಂಚೆಸ್ಟರ್​ನಿಂದ ದುಬೈಗೆ ಬರಲು ಕೊಹ್ಲಿ​, ಸಿರಾಜ್​ಗೋಸ್ಕರ RCBಯಿಂದ ವಿಶೇಷ ಚಾರ್ಟರ್​!

ಟೀಂ ಇಂಡಿಯಾ ಕ್ಯಾಂಪ್​ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಉಭಯ ತಂಡಗಳ ನಡುವಿನ ಫೈನಲ್ ಪಂದ್ಯ ರದ್ಧುಗೊಳಿಸಲಾಗಿದೆ. ಈಗಾಗಲೇ ಕೆಲ ಪ್ಲೇಯರ್ಸ್​​ ಮ್ಯಾಂಚೆಸ್ಟರ್​ನಿಂದ ದುಬೈಗೆ ಪ್ರಯಾಣ ಬೆಳೆಸಿದ್ದು, ಇಂದು ತಡರಾತ್ರಿ ಅಥವಾ ನಾಳೆ ಬೆಳಗ್ಗೆಯೊಳಗೆ ದುಬೈಗೆ ಬಂದು ಸೇರಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.