ಪ್ರತಿಷ್ಠಿತ ಆ್ಯಶಸ್​ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ : ಕರ್ರನ್,ಸ್ಟೋಕ್ಸ್, ಆರ್ಚರ್ ಅಲಭ್ಯ

author img

By

Published : Oct 10, 2021, 6:16 PM IST

ಜೋ ರೂಟ್​ ಮತ್ತೆ ನಾಯಕನಾಗಿ 3ನೇ ಬಾರಿ ಆ್ಯಶಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. 2017-18ರಲ್ಲಿ ಮತ್ತು 2019ರಲ್ಲಿ ರೂಟ್​ ನಾಯಕತ್ವದಲ್ಲಿ ಇಂಗ್ಲೆಂಡ್​ ಸೋಲುಂಡಿದೆ. ಇದೀಗ ಮೊದಲ ಬಾರಿಗೆ ಆ್ಯಶಸ್​ ಗೆಲ್ಲುವ ವಿಶ್ವಾಸದಿಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ವಿಕೆಟ್​ ಕೀಪರ್​ ಬ್ಯಾಟರ್​ ಜೋಸ್ ಬಟ್ಲರ್ ಉಪನಾಯಕನಾಗಿದ್ದಾರೆ..

ಲಂಡನ್ : ಡಿಸೆಂಬರ್​ 8ರಿಂದ ಆರಂಭವಾಗಲಿರುವ ಆ್ಯಶಸ್​ ಟೆಸ್ಟ್​ ಸರಣಿಗೆ ಇಂಗ್ಲೆಂಡ್ ಮತ್ತು ವೇಲ್ಸ್​ ಕ್ರಿಕೆಟ್ ಮಂಡಳಿ 17 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಜೋ ರೂಟ್​ ಮತ್ತೆ ನಾಯಕನಾಗಿ 3ನೇ ಬಾರಿ ಆ್ಯಶಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. 2017-18ರಲ್ಲಿ ಮತ್ತು 2019ರಲ್ಲಿ ರೂಟ್​ ನಾಯಕತ್ವದಲ್ಲಿ ಇಂಗ್ಲೆಂಡ್​ ಸೋಲುಂಡಿದೆ.

ಇದೀಗ ಮೊದಲ ಬಾರಿಗೆ ಆ್ಯಶಸ್​ ಗೆಲ್ಲುವ ವಿಶ್ವಾಸದಿಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ವಿಕೆಟ್​ ಕೀಪರ್​ ಬ್ಯಾಟರ್​ ಜೋಸ್ ಬಟ್ಲರ್ ಉಪನಾಯಕನಾಗಿದ್ದಾರೆ. ಆದರೆ, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲು ವಿಶ್ರಾಂತಿ ತೆಗೆದುಕೊಂಡಿರುವ ಸ್ಟಾರ್ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​, ವೇಗದ ಬೌಲರ್​ ಜೋಫ್ರಾ ಆರ್ಚರ್​ ಮತ್ತು ಇತ್ತೀಚೆಗೆ ಐಪಿಎಲ್‌ನಲ್ಲಿ ಗಾಯಗೊಂಡಿದ್ದ ಸ್ಯಾಮ್ ಕರ್ರನ್​ ತಂಡದಿಂದ ಹೊರಗುಳಿಯಲಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ಗಾಯಗೊಂಡು ಹೊರಬಿದ್ದಿದ್ದ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್​ ಮತ್ತೆ ತಂಡಕ್ಕೆ ವಾಪಸ್ ಆಗಿದ್ದಾರೆ. 5 ಪಂದ್ಯಗಳ ಸರಣಿ ಡಿಸೆಂಬರ್​ 8ರಿಂದ 12ರವರೆಗೆ ಬ್ರಿಸ್ಬೇನ್​ನ ಗಬ್ಬಾದಲ್ಲಿ ಆರಂಭವಾಗಲಿದೆ.

ಅಡಿಲೇಡ್​ನಲ್ಲಿ ಡಿ.16ರಿಂದ 20ರವರೆಗೆ ಡೇ ಅಂಡ್​ ನೈಟ್ ಟೆಸ್ಟ್​ ನಡೆಯಲಿದೆ. ಡಿಸೆಂಬರ್​ 26 ರಿಂದ 39ರವೆಗೆ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ ಜನವರಿ 5ರಿಂದ 9ರವರೆಗೆ ಸಿಡ್ನಿಯಲ್ಲಿ 4ನೇ ಟೆಸ್ಟ್​ ಮತ್ತು ಜನವರಿ 14ರಿಂದ18ರವರೆಗೆ ಪರ್ತ್​ನಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ.

ಇಂಗ್ಲೆಂಡ್ ಆ್ಯಶಸ್​ ತಂಡ

ಜೋ ರೂಟ್ (ನಾಯಕ), ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್​ಸ್ಟೋವ್, ಡಾಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜ್ಯಾಕ್ ಕ್ರಾಲಿ, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಡೇವಿಡ್ ಮಲನ್, ಕ್ರೇಗ್ ಓವರ್‌ಟನ್, ಆಲಿ ರಾಬಿನ್ಸನ್, ಆಲಿ ಪೋಪ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಇದನ್ನು ಓದಿ: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗಲಿದೆ ₹12 ಕೋಟಿ.. ಸೆಮಿಫೈನಲ್ಸ್​ ತಂಡಗಳಿಗೂ ಬಂಪರ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.