ಡಿಆರ್​​ಎಸ್​ ವಿವಾದ: ಟೀಂ ಇಂಡಿಯಾ ಹತಾಶೆ & ಒತ್ತಡದಲ್ಲಿದೆ ಎಂದ ಲುಂಗಿ ಎಂಗಿಡಿ

author img

By

Published : Jan 14, 2022, 3:15 PM IST

India vs South Africa

ಪ್ರವಾಸಿ ಭಾರತ ಹಾಗೂ ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಮತ್ತು ಅಂತಿಮ ಟೆಸ್ಟ್​ ಪಂದ್ಯದಲ್ಲಿ ಮತ್ತೊಮ್ಮೆ ಡಿಆರ್​ಎಸ್​ ವಿವಾದ ಕೇಳಿ ಬಂದಿದ್ದು, ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಕೇಪ್​ಟೌನ್​(ದಕ್ಷಿಣ ಆಫ್ರಿಕಾ): ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್​​​ ಪಂದ್ಯದಲ್ಲಿ ಡಿಸಿಶನ್ ರಿವ್ಯೂ ಸಿಸ್ಟಂ (ಡಿಆರ್​ಎಸ್)​ ವಿವಾದ ಮತ್ತೊಮ್ಮೆ ಕೇಳಿ ಬಂದಿದ್ದು, ಎಲ್​ಬಿ ಬಲೆಗೆ ಬಿದ್ದ ಡೀನ್​ ಎಲ್ಗರ್​​​ ವಿಚಾರವಾಗಿ ಟೀಂ ಇಂಡಿಯಾ ಆಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ವೇಗಿ​​​​ ಲುಂಗಿ ಎಂಗಿಡಿ, ಭಾರತ ತಂಡ ಹತಾಶೆ ಮತ್ತು ಒತ್ತಡದಲ್ಲಿದೆ ಎಂದಿದ್ದಾರೆ.

ಕ್ರೀಸ್​​ನಲ್ಲಿ ಬ್ಯಾಟಿಂಗ್​ ಮಾಡ್ತಿದ್ದ ಡೀನ್ ಎಲ್ಗರ್​​​​ ಆಫ್​​ ಸ್ಪಿನ್ನರ್​​ ರವಿಚಂದ್ರನ್​ ಅಶ್ವಿನ್​​ ಓವರ್​​ನಲ್ಲಿ ಎಲ್​ಬಿಡಬ್ಲೂ ಬಲೆಗೆ ಸಿಲುಕಿದ್ದರು. ಈ ವೇಳೆ ಅಂಪೈರ್​ ಕೂಡ ಔಟ್​ ಎಂದು ಘೋಷಿಸಿದ್ದರು. ಆದರೆ, ಬ್ಯಾಟರ್ ಎಲ್ಗರ್​ ಡಿಆರ್​​ಎಸ್​ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ - ಭಾರತ 3ನೇ ಟೆಸ್ಟ್​: ಡಿಆರ್​ಎಸ್​ಗೆ ಕೊಹ್ಲಿ ಕೆಂಡಾಮಂಡಲ.. ಗೆಲುವಿನ ಸನಿಹ ಆತಿಥೇಯ ತಂಡ

ಡಿಆರ್​ಎಸ್​​ನಲ್ಲಿ ಚೆಂಡು​ ವಿಕೆಟ್​ಗೆ ತಾಕದೇ ಮೇಲೆ ಹೋದಂತೆ ತೋರಿಸಿ, ನಾಟ್​ಔಟ್​ ಎಂದು ತೀರ್ಪು ನೀಡಲಾಯಿತು. ಈ ವಿಚಾರವಾಗಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​, ರವಿಚಂದ್ರನ್​ ಅಶ್ವಿನ್ ಹಾಗೂ ಕೆ.ಎಲ್.ರಾಹುಲ್​ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಗಿಡಿ, ಟೀಂ ಇಂಡಿಯಾ ಹತಾಶೆ ಮತ್ತು ಒತ್ತಡದಲ್ಲಿದ್ದಾರೆ. ಇದರಿಂದಲೇ ಅನೇಕ ತಂಡಗಳು ಲಾಭ ಪಡೆದುಕೊಳ್ಳಲು ಮುಂದಾಗುತ್ತವೆ ಎಂದು ಟೀಕಿಸಿದರು.

ಕೇಪ್​ಟೌನ್​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಅಂತಿಮ ಟೆಸ್ಟ್​​ ಪಂದ್ಯದಲ್ಲಿ ಹರಿಣಗಳ ತಂಡ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.