CWG 2022: ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಬಗ್ಗುಬಡಿದು ಫೈನಲ್​​ಗೆ ಲಗ್ಗೆ ಇಟ್ಟ ಟೀಂ ಇಂಡಿಯಾ

author img

By

Published : Aug 6, 2022, 7:35 PM IST

India women cricket team enter the final

Commonwealth Games 2022: ಕಾಮನ್​ವೆಲ್ತ್​ ಗೇಮ್ಸ್​​ನ ಕ್ರಿಕೆಟ್​ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 4 ರನ್‌ಗಳ ಅಂತರದಿಂದ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಫೈನಲ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ.

ಬರ್ಮಿಂಗ್​ಹ್ಯಾಮ್​: ಕಾಮನ್​ವೆಲ್ತ್​ ಗೇಮ್ಸ್​​ನ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತ ಸೆಮಿಫೈನಲ್​​ನಲ್ಲಿ ರೋಚಕ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಪ್ರಪ್ರಥಮ ತಂಡವಾಗಿ ಫೈನಲ್​ಗೆ ಲಗ್ಗೆ ಹಾಕಿದೆ. ಬಲಿಷ್ಠ ಆಂಗ್ಲರ ತಂಡಕ್ಕೆ ಸೋಲಿನ ರುಚಿ ತೋರಿಸಿರುವ ಹರ್ಮನ್​ಪ್ರೀತ್ ಕೌರ್ ಬಳಗ ಕಾಮನ್​ವೆಲ್ತ್​ ಗೇಮ್ಸ್​​ನ ಚೊಚ್ಚಲ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈ ಮೂಲಕ ಕ್ರಿಕೆಟ್​ನಲ್ಲೂ ಪದಕ ಖಚಿತಗೊಳಿಸಿದೆ.

ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಮಹಿಳಾ ತಂಡ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ​ನಷ್ಟಕ್ಕೆ 164 ರನ್​​ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿದ್ದರಿಂದ 4ರನ್​​ಗಳ ಸೋಲು ಕಂಡಿದೆ.

ಅಬ್ಬರಿಸಿ ಬೊಬ್ಬೆರೆದ ಸ್ಮೃತಿ ಮಂದಾನ
ಅಬ್ಬರಿಸಿ ಬೊಬ್ಬೆರೆದ ಸ್ಮೃತಿ ಮಂದಾನ

ಮಿಂಚಿದ ಮಂದಾನ- ರೋಡ್ರಿಗಸ್​​: ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಮಂದಾನ-ಶೆಫಾಲಿ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತ್ತು. 7.5 ಓವರ್​​ಗಳಲ್ಲಿ 76ರನ್​​​ಗಳಿಕೆ ಮಾಡಿತು. ತಾವು ಎದುರಿಸಿದ 32 ಎಸೆತಗಳಲ್ಲಿ ಸ್ಮೃತಿ ಮಂದಾನ 3 ಸಿಕ್ಸರ್, 8 ಬೌಂಡರಿ ಸಮೇತ 61ರನ್​ಗಳಿಕೆ ಮಾಡಿದರು. ಈ ವೇಳೆ ಸ್ಕಿವರ್ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನ್ಲಲೇ ಶೆಫಾಲಿ(15) ಕೂಡ ಔಟಾದರು.

ತದನಂತರ ಬಂದ ರೋಡ್ರಿಗಸ್​ ಅಜೇಯ(44ರನ್​), ಕ್ಯಾಪ್ಟನ್​ ಹರ್ಮನ್ ಪ್ರೀತ್ ಕೌರ್​(20), ದೀಫ್ತಿ ಶರ್ಮಾ(22)ರನ್​​ಗಳಿಕೆ ಮಾಡಿ, ತಂಡ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್ ​ನಷ್ಟಕ್ಕೆ 164ರನ್​​ಗಳಿಸಿದರು. ಇಂಗ್ಲೆಂಡ್ ಪರ ಫ್ರೇಯಾ ಕೆಂಪ್ 2 ವಿಕೆಟ್​,ಸ್ಕಿವರ್ ಹಾಗೂ ಬ್ರಂಟ್ ತಲಾ 1 ವಿಕೆಟ್ ಪಡೆದುಕೊಂಡರು.

ಸುಲಭ ಗೆಲುವು ಕೈಚೆಲ್ಲಿದ ಇಂಗ್ಲೆಂಡ್​: 165ರನ್​​ಗಳ ಗೆಲುವಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಸೋಫಿಯಾ(19), ಡೇನಿಯಲ್​(35) ತಂಡಕ್ಕೆ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಬೇರ್ಪಡಿಸುವಲ್ಲಿ ದೀಪ್ತಿ ಶರ್ಮಾ ಯಶಸ್ವಿಯಾದರು. 19ರನ್​​ಗಳಿಕೆ ಮಾಡಿದ್ದ ಸೋಫಿಯಾ ದೀಪ್ತಿ ಓವರ್​ನಲ್ಲಿ ಔಟಾದರೆ, 35ರನ್​​ಗಳಿಸಿದ್ದ ಡೇನಿಯಲ್​ ಸ್ನೇಹಾ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಕ್ಯಾಪ್ಸೆ(13), ಕ್ಯಾಪ್ಟನ್​​ ಸ್ಕಿವರ್​(41)ರನ್​​ಗಳಿಸಿ ತಂಡವನ್ನ ಸುಲಭವಾಗಿ ಗೆಲುವಿನ ದಡ ಸೇರಿಸುವ ಕೆಲಸಕ್ಕೆ ಮುಂದಾದರು. ಆದರೆ, ಇಬ್ಬರು ಪ್ಲೇಯರ್ಸ್ ರನೌಟ್ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿರಿ: CWG, IND vs ENG ಸೆಮಿಫೈನಲ್​​​: ಮಂದಾನ ಸ್ಫೋಟಕ ಆಟ.. ಇಂಗ್ಲೆಂಡ್ ಗೆಲುವಿಗೆ 165 ರನ್​ಗಳ ಟಾರ್ಗೆಟ್​

ಇದಾದ ಬಳಿಕ ಇಂಗ್ಲೆಂಡ್​ನ ಯಾವುದೇ ಪ್ಲೇಯರ್ಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ನಿಗದಿತ 20 ಓವರ್​​​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 160ರನ್​ಗಳಿಕೆ ಮಾಡಿ, ಸೋಲು ಕಂಡಿದೆ. ಈ ಮೂಲಕ ಫೈನಲ್​ನಿಂದ ಹೊರಬಿದ್ದಿದೆ. ಭಾರತದ ಪರ ಮಿಂಚಿದ ಸ್ನೇಹಾ ರಾಣಾ 2 ವಿಕೆಟ್​, ದೀಪ್ತಿ ಶರ್ಮಾ 1 ವಿಕೆಟ್ ಪಡೆದುಕೊಂಡರು. ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಮುಖಾಮುಖಿಯಾಗಲಿವೆ. ಇಲ್ಲಿ ಗೆಲ್ಲುವ ತಂಡ ಭಾರತದ ವಿರುದ್ಧ ಫೈನಲ್​​ನಲ್ಲಿ ಸೆಣಸಾಟ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.