ಕೆಕೆಆರ್ ಮಾರಕ ಬೌಲಿಂಗ್ ದಾಳಿ: ಕೇವಲ 92ಕ್ಕೆ ಸರ್ವಪತನ ಕಂಡ RCB

author img

By

Published : Sep 20, 2021, 9:31 PM IST

Updated : Sep 20, 2021, 9:46 PM IST

RCB bundled out for 92 by KKR

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಸ್ವತಃ 5ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು, ತಮ್ಮ 200ನೇ ಪಂದ್ಯದಲ್ಲಿ ನಿರಾಶೆಯನುಭವಿಸಿದರು.

ಅಬು ದಾಬಿ: ಕೋಲ್ಕತ್ತಾ ನೈಟ್​ ರೈಡರ್ಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್​​ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 92 ರನ್​ಗಳಿಗೆ ಆಲೌಟ್ ಆಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಸ್ವತಃ 5ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದು, ತಮ್ಮ 200ನೇ ಪಂದ್ಯದಲ್ಲಿ ನಿರಾಶೆಯನುಭವಿಸಿದರು.

ನಂತರ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಯುವ ಆಟಗಾರರಾದ ದೇವದತ್ ಪಡಿಕ್ಕಲ್(22) ಮತ್ತು ಪದಾರ್ಪಣೆ ಬ್ಯಾಟ್ಸ್​ಮನ್ ಶ್ರೀಕಾರ್​ ಭರತ್​(16) 2ನೇ ವಿಕೆಟ್​ಗೆ 31 ರನ್​ ಸೇರಿಸಿದರು. ಪಡಿಕ್ಕಲ್(22)​ ಲಾಕಿ ಫರ್ಗ್ಯುಸನ್​ ಬೌಲಿಂಗ್​ನಲ್ಲಿ ಕಾರ್ತಿಕ್​ಗೆ ಕ್ಯಾಚ್​ ನೀಡಿ ನಿರ್ಗಮಿಸುತ್ತಿದ್ದಂತೆ ಆರ್​ಸಿಬಿ ಅಧಃಫತನ ಆರಂಭವಾಯಿತು.

ನಂತರ 16 ರನ್​ಗಳಿಸಿದ್ದ ಭರತ್​ ವಿಂಡೀಸ್ ದೈತ್ಯ ರಸೆಲ್​ ಬೌಲಿಂಗ್​ನಲ್ಲಿ ಗಿಲ್​ಗೆ ಕ್ಯಾಚ್​​ ನೀಡಿದರೆ, ನಂತರದ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ ಕ್ಲೀನ್​ ಬೌಲ್ಡ್​ ಆಗಿ ಗೋಲ್ಡನ್​ ಡಕ್​ ಆದರು.

17 ಎಸೆತಗಳನ್ನೆದುರಿಸಿದರೂ ಲಯ ಕಳೆದುಕೊಳ್ಳಲು ವಿಫಲರಾದ ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟ್ಸ್​ಮನ್ ಮ್ಯಾಕ್ಸ್​ವೆಲ್ ಕೇವಲ 10 ರನ್​ಗಳಿಸಿ​ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಮ್ಯಾಕ್ಸ್​ವೆಲ್ ವಿಕೆಟ್​ ಪತನದೊಂದಿಗೆ ಆರ್​ಸಿಬಿಯ ಸ್ಪರ್ಧಾತ್ಮಕ ಮೊತ್ತದ ಕನಸು ಕೂಡ ನುಚ್ಚು ನೂರಾಯಿತು.

ನಂತರ ಬಂದ ಹಸರಂಗ(0), ಸಚಿನ್ ಬೇಬಿ(7),ಕೈಲ್ ಜೆಮೀಸನ್(4) ಹರ್ಷಲ್ ಪಟೇಲ್ (12) ಮತ್ತು ಸಿರಾಜ್​ (8) ರನ್​ಗಳಿಸಿ ಔಟಾದರು.

ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 13ಕ್ಕೆ 3, ಆ್ಯಂಡ್ರೆ ರಸೆಲ್ 9ಕ್ಕೆ3, ಲಾಕಿ ಫರ್ಗ್ಯುಸನ್​ 24ಕ್ಕೆ 2 ಮತ್ತು ಪ್ರಸಿಧ್ ಕೃಷ್ಣ 24ಕ್ಕೆ 1 ವಿಕೆಟ್ ಪಡೆದು ಆರ್​ಸಿಬಿಯನ್ನು 100ರೊಳಗೆ ಕಟ್ಟಿಹಾಕಿದರು.

ಇದನ್ನು ಓದಿ: ನೀವು ಆರ್​ಸಿಬಿ ಪರ 350-400 ಪಂದ್ಯಗಳನ್ನಾಡುತ್ತೀರಿ ಎಂಬ ವಿಶ್ವಾಸವಿದೆ : ಕೊಹ್ಲಿಗೆ ಆರ್​ಸಿಬಿ ಬಳಗದಿಂದ ಅಭಿನಂದನೆ

Last Updated :Sep 20, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.