ಅತ್ಯಧಿಕ ರನ್​​​ಗಳ ಜೊತೆಯಾಟ: ಟಿ20 ಕ್ರಿಕೆಟ್​ನಲ್ಲಿ ಹೊಸ ರೆಕಾರ್ಡ್​​​ ಸೃಷ್ಟಿಸಿದ ಬಾಬರ್​-ರಿಜ್ವಾನ್​ ಜೋಡಿ

author img

By

Published : Sep 23, 2022, 7:12 AM IST

Babar Azam-Mohammad Rizwan

ಆಂಗ್ಲರ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ಕ್ಯಾಪ್ಟನ್​ ಬಾಬರ್ ಆಜಂ ಹಾಗೂ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಜೋಡಿ ಹೊಸದೊಂದು ದಾಖಲೆ ಬರೆದಿದೆ.

ಕರಾಚಿ(ಪಾಕಿಸ್ತಾನ): ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಎರಡನೇ ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ ತಂಡ 10 ರನ್​​​ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಇದರ ಜೊತೆಗೆ ಚುಟುಕು ಕ್ರಿಕೆಟ್​ನಲ್ಲಿ ಬಾಬರ್​​-ರಿಜ್ವಾನ್​ ಜೋಡಿ ವಿಶ್ವದಾಖಲೆ ಸೃಷ್ಟಿ ಮಾಡಿದೆ.

ಕಳಪೆ ಬ್ಯಾಟಿಂಗ್​ ಫಾರ್ಮ್​ನಿಂದ ಟೀಕೆಗೊಳಗಾಗಿದ್ದ ಪಾಕಿಸ್ತಾನ ಕ್ಯಾಪ್ಟನ್​ ಬಾಬರ್​ ಆಜಂ ನಿನ್ನೆ ಇಂಗ್ಲೆಂಡ್​ ಬೌಲರ್​​​ಗಳ ವಿರುದ್ಧ ಅಬ್ಬರಿಸಿದರು. ತಾವು ಎದುರಿಸಿದ ಕೇವಲ 66 ಎಸೆತಗಳಲ್ಲಿ 5 ಸಿಕ್ಸರ್​, 11 ಬೌಂಡರಿ ಸೇರಿದಂತೆ ಅಜೇಯ 110ರನ್​​​ಗಳಿಸಿದರು. ಇವರಿಗೆ ಉತ್ತಮ ಸಾಥ್​ ನೀಡಿದ ವಿಕೆಟ್ ಕೀಪರ್ ಬ್ಯಾಟರ್​​ ಮೊಹಮ್ಮದ್ ರಿಜ್ವಾನ್​​​ 51 ಎಸೆತಗಳಲ್ಲಿ 4 ಸಿಕ್ಸರ್​, 5 ಬೌಂಡರಿ ಸಮೇತ 88ರನ್​​​​ಗಳಿಸಿದರು. ಮುರಿಯದ ಜೊತೆಯಾಟವಾಡಿದ ಈ ಜೋಡಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್​​ಗಳ ಗೆಲುವು ದಾಖಲು ಮಾಡಿದೆ.

ಟಿ20ಯಲ್ಲಿ ಹೊಸ ದಾಖಲೆ ಬರೆದ ಜೋಡಿ: ಟಿ20 ಕ್ರಿಕೆಟ್​ನಲ್ಲಿ ಯಾವುದೇ ಜೋಡಿ ಇಲ್ಲಿಯವರೆಗೆ 200ರನ್​​​ಗಳ ಜೊತೆಯಾಟವಾಡಿಲ್ಲ. ಆದರೆ, ನಿನ್ನೆಯ ಇಂಗ್ಲೆಂಡ್​​ ತಂಡದ ವಿರುದ್ಧದ ಪಂದ್ಯದಲ್ಲಿ ಬಾಬರ್​​-ರಿಜ್ವಾನ್ ಜೋಡಿ ಈ ಸಾಧನೆ ಮಾಡಿದೆ. ಇಬ್ಬರು ಜೊತೆಯಾಗಿ 19.3 ಓವರ್​​​​​ಗಳಲ್ಲಿ 203ರನ್​​​ಗಳ ಆಟವಾಡಿದ್ದಾರೆ. ಬಾಬರ್​ ಅಜೇಯ 110ರನ್​ ಹಾಗೂ ರಿಜ್ವಾನ್​ ಅಜೇಯ 88ರನ್​​​ಗಳಿಸಿದರು. ವಿಶೇಷವೆಂದರೆ 2021ರ ಟಿ20 ವಿಶ್ವಕಪ್​ನಲ್ಲೂ ಈ ಜೋಡಿ ಭಾರತದ ವಿರುದ್ಧ ಇದೇ ರೀತಿಯ ಪ್ರದರ್ಶನ ನೀಡಿತ್ತು.ಜೊತೆಗೆ 10 ವಿಕೆಟ್​​ಗಳ ಗೆಲುವು ಸಹ ದಾಖಲು ಮಾಡಿತ್ತು.

ಇದನ್ನೂ ಓದಿ: ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ: ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಶಿಖರ್ ಧವನ್​

ಪಾಕಿಸ್ತಾನದ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ಗೆಲುವು ದಾಖಲು ಮಾಡಿತ್ತು. ಆದರೆ, ಇದೀಗ ಎರಡನೇ ಪಂದ್ಯದಲ್ಲಿ ಪಾಕ್​ ತಿರುಗಿಬಿದ್ದು ಜಯ ಸಾಧಿಸಿದೆ. ಹೀಗಾಗಿ, 7 ಪಂದ್ಯಗಳ ಸರಣಿಯಲ್ಲಿ ಉಭಯ ತಂಡ 1-1 ಅಂತರದ ಸಮಬಲ ಸಾಧಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.