ಐಪಿಎಲ್ ಕದನ ಪುನಾರಂಭ: ಹಾಲಿ ಚಾಂಪಿಯನ್ಸ್ ಮುಂಬೈಗೆ ಚೆನ್ನೈ ಸವಾಲು

author img

By

Published : Sep 19, 2021, 5:33 AM IST

Updated : Sep 19, 2021, 8:27 AM IST

ಮುಂಬೈ ಇಂಡಿಯನ್ಸ್​ vs ಚೆನ್ನೈ ಸೂಪರ್ ಕಿಂಗ್ಸ್

2020ರ ಐಪಿಎಲ್​ ಆವೃತ್ತಿಯು ಚೆನ್ನೈ ತಂಡಕ್ಕೆ ಸಿಹಿಗಿಂತ ಹೆಚ್ಚು ಕಹಿಯನ್ನೇ ನೀಡಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ ಸಮಾಧಾನಕರ ಸಂಗತಿಯೆಂದರೆ ದುಬೈನಲ್ಲಿ ಆಡಿದ 6 ಪಂದ್ಯಗಳಲ್ಲಿ ಚೆನ್ನೈ 4ರಲ್ಲಿ ಗೆಲುವು ಸಾಧಿಸಿತ್ತು

ದುಬೈ: ಕೋವಿಡ್​-19 ಕಾರಣ ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯ ಐಪಿಎಲ್​ ಇಂದಿನಿಂದ ಪುನರಾಂಭಗೊಳ್ಳಲಿದ್ದು, ಮೊದಲ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ನಡೆಯಲಿದೆ.

ಚೆನ್ನೈ ಸೂಪರ್​ ಕಿಂಗ್ಸ್​ 2020ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿ 7ನೇ ಸ್ಥಾನಕ್ಕೆ ಕುಸಿದಿತ್ತು. ಐಪಿಎಲ್​ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಎಸ್​ಕೆ ಪ್ಲೇಆಫ್​ ತಲುಪಲು ವಿಫಲವಾಗಿತ್ತು. ಆದರೆ 2021ರಲ್ಲಿ ಅದ್ವಿತೀಯ ಪ್ರದರ್ಶನ ತೋರಿರುವ ಸಿಎಸ್​ಕೆ ಆಡಿರುವ 7 ಪಂದ್ಯಗಲ್ಲಿ 5 ಗೆಲುವು ಮತ್ತು 2 ಸೋಲುಗಳೊಂದಿಗೆ 10 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಆಡಿರುವ 7 ಪಂದ್ಯಗಳಲ್ಲಿ 3 ಸೋಲು ಮತ್ತು 4 ಗೆಲುವುಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.

2020ರ ಆವೃತ್ತಿ ಚೆನ್ನೈ ತಂಡವು ಸಿಹಿಗಿಂತ ಹೆಚ್ಚು ಕಹಿಯನ್ನೇ ಅನುಭವಿಸಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ ಸಮಾಧಾನಕರ ಸಂಗತಿಯೆಂದರೆ ದುಬೈನಲ್ಲಿ ಆಡಿದ 6 ಪಂದ್ಯಗಳಲ್ಲಿ ಚೆನ್ನೈ 4ರಲ್ಲಿ ಗೆಲುವು ಸಾಧಿಸಿತ್ತು.

ಮುಂಬೈ ಇಂಡಿಯನ್ಸ್​ಗೆ ಯಾವುದೇ ಸ್ಥಳವಾದರೂ ಚಿಂತೆಯಿಲ್ಲ. ತಂಡವು ಎಲ್ಲಾ ಪರಿಸ್ಥಿತಿಯಲ್ಲಿ ಹೊಂದಿಕೊಳ್ಳುವ ಆಟಗಾರರನ್ನು ಹೊಂದಿದೆ. ಪೊಲಾರ್ಡ್​ ಕಳೆದ ಆವೃತ್ತಿಯಲ್ಲಿ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಮುಂಬೈ ವೇಗದ ಬೌಲರ್​ಗಳು ಶ್ರೇಷ್ಠ ಪ್ರದರ್ಶನ ತೋರಿ ತಂಡ 5ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುಲು ನೆರವಾಗಿದ್ದರು.

ಮುಖಾಮುಖಿ:

ಎರಡೂ ತಂಡಗಳು ಐಪಿಎಲ್​ನ ಯಶಸ್ವಿ ತಂಡಗಳಾಗಿವೆ. ಸಿಎಸ್​ಕೆ 3 ಬಾರಿ ಚಾಂಪಿಯನ್​ ಆಗಿದ್ದರೆ, ಮುಂಬೈ 5 ಬಾರಿ ಟ್ರೋಫಿ ಗೆದ್ದಿದೆ. ಇನ್ನು ಎರಡೂ ತಂಡಗಳು 32 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 19ರಲ್ಲಿ ಸಿಎಸ್​ಕೆ 13ರಲ್ಲಿ ಗೆಲುವು ಸಾಧಿಸಿದೆ. ಐಪಿಎಲ್​ನಲ್ಲಿ ಸಿಎಸ್​ಕೆ ಬಹುಪಾಲು ತಂಡಗಳ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಆದರೆ ಮುಂಬೈ ಮಾತ್ರ ಸಿಎಸ್​ಕೆ ವಿರುದ್ಧ ಸೋಲಿಗಿಂತ ಹೆಚ್ಚು ಗೆಲುವು ಪಡೆದಿರುವ ಏಕೈಕ ತಂಡವಾಗಿದೆ.

ಸಂಭಾವ್ಯ ಇಲೆವೆನ್:

ಮುಂಬೈ ಇಂಡಿಯನ್ಸ್: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ(ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ರಾಹುಲ್ ಚಹರ್, ನಾಥನ್ ಕೌಲ್ಟರ್-ನೈಲ್/ಆಡಮ್ ಮಿಲ್ನೆ/ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್/ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ಲುಂಗಿ ಎನ್​ಗಿಡಿ, ದೀಪಕ್ ಚಹರ್

ಇದನ್ನು ಓದಿ: IPL 2021 ದ್ವೀತಿಯಾರ್ಧದ ಪಂದ್ಯಗಳ ವೇಳಾಪಟ್ಟಿ; ಯಾವ ದಿನ, ಯಾವ ಪಂದ್ಯ ನೋಡಿ ಸಂಪೂರ್ಣ ಮಾಹಿತಿ!

Last Updated :Sep 19, 2021, 8:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.