2023ರ ಏಷ್ಯಾಕಪ್ ಪಾಕಿಸ್ತಾನದಲ್ಲಿ ಕನ್ಫರ್ಮ್, ಅದು 50 ಓವರ್​ಗಳ ಟೂರ್ನಿಯಾಗಿರಲಿದೆ: ಪಿಸಿಬಿ ಮುಖ್ಯಸ್ಥ ರಾಜಾ

author img

By

Published : Oct 18, 2021, 10:05 PM IST

2023ರ ಏಷ್ಯಾಕಪ್

ಎಸಿಸಿ 2023ರ ಏಷ್ಯಾಕಪ್​ ಪಾಕಿಸ್ತಾನದಲ್ಲಿ ಆಯೋಜಿಸಲು ಒಪ್ಪಿಗೆ ಸೂಚಿಸಿದೆ. ಈ ಟೂರ್ನಿ 50 ಓವರ್​ಗಳ ಸ್ಪರ್ಧೆಯಾಗಿರಲಿದ್ದು, ಸೆಪ್ಟೆಂಬರ್​ ತಿಂಗಳಲ್ಲಿ ನಡೆಯಲಿದೆ. ಇದು ಭಾರತದಲ್ಲಿ ಅದೇ ವರ್ಷ ಅಕ್ಟೋಬರ್ - ನವೆಂಬರ್​ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಉತ್ತಮವಾಗಿ ಹೊಂದಿಕೊಳ್ಳಲಿದೆ ಎಂದು ರಾಜಾ ಪಿಸಿಬಿ ವೆಬ್​ಸೈಟ್​ಗೆ ಹೇಳಿದ್ದಾರೆ.

ದುಬೈ: 2023ರ ಏಷ್ಯಾಕಪ್​ ಪಾಕಿಸ್ತಾನದಲ್ಲಿ ನಡೆಯಲಿದ್ದು, ಅದರು 50 ಓವರ್​ಗಳ ಟೂರ್ನಿಯಾಗಿರಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಅವರು ಹೇಳಿದ್ದಾರೆ. ಇದು ಅದೇ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯುವ ಅವಕಾಶ ತುಂಬಾ ಕಡಿಮೆ, ಅದು ಉತ್ತಮ ಹಂತಕ್ಕೆ ಬರಬೇಕಾದರೆ ಇನ್ನೂ ಸಾಕಷ್ಟು ಕೆಲಸ ನಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ಕಾರ್ಯದರ್ಶಿ ಜಯ ಶಾ ಇದ್ದ ಎಸಿಸಿ ಸಭೆಯಲ್ಲಿ ರಮೀಜ್ ಭಾಗವಹಿಸಿದ್ದರು. ಎಸಿಸಿ 2023ರ ಏಷ್ಯಾಕಪ್​ ಪಾಕಿಸ್ತಾನದಲ್ಲಿ ಆಯೋಜಿಸಲು ಒಪ್ಪಿಗೆ ಸೂಚಿಸಿದೆ. ಈ ಟೂರ್ನಿ 50 ಓವರ್​ಗಳ ಸ್ಪರ್ಧೆಯಾಗಿರಲಿದ್ದು, ಸೆಪ್ಟೆಂಬರ್​ ತಿಂಗಳಲ್ಲಿ ನಡೆಯಲಿದೆ. ಇದು ಭಾರತದಲ್ಲಿ ಅದೇ ವರ್ಷ ಅಕ್ಟೋಬರ್-ನವೆಂಬರ್​ ತಿಂಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಉತ್ತಮವಾಗಿ ಹೊಂದಿಕೊಳ್ಳಲಿದೆ ಎಂದು ರಾಜಾ ಪಿಸಿಬಿ ವೆಬ್​ಸೈಟ್​ಗೆ ಹೇಳಿದ್ದಾರೆ.

ಟೂರ್ನಮೆಂಟ್​ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ, ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಭಾರತ ಇಲ್ಲಿಗೆ ಭೇಟಿ ನೀಡುವ ಸಾಧ್ಯತೆಗಳು ಶೂನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು 2021ರ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್​ ಕೌನ್ಸಿಲ್ ಸೋಮವಾರ ಖಚಿತಪಡಿಸಿದೆ. ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ನಡೆಯುವುದರಿಂದ ತಯಾರಿಗಾಗಿ 20 ಓವರ್​ಗಳ ಟೂರ್ನಿಯನ್ನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ರಾಜಾ ಹೇಳಿದ್ದಾರೆ.

ಇದನ್ನು ಓದಿ:ವಿಶ್ವಕಪ್​ನಲ್ಲಿ ರೋಹಿತ್​ ಜೊತೆ ರಾಹುಲ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ: ದೃಢಪಡಿಸಿದ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.