ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ: ಸೋಶಿಯಲ್ ಮೀಡಿಯಾದಲ್ಲಿ ಬಯೋಪಿಕ್​ ಚರ್ಚೆ

author img

By

Published : Sep 22, 2021, 5:49 PM IST

Deepika-Sindhu play badminton

ಪಿ.ವಿ.ಸಿಂಧು ವಿಶ್ವಚಾಂಪಿಯನ್​ಶಿಪ್​ ಗೆದ್ದಿರುವ ಜೊತೆಗೆ ಸತತ ಎರಡು ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ರಿಯೋದಲ್ಲಿ ಬೆಳ್ಳಿ ಗೆದ್ದರೆ, ಕಳೆದ ತಿಂಗಳು ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಸಾಧನೆ ತೋರಿದ್ದರು.

ಮುಂಬೈ: ಬಾಲಿವುಡ್​ ಸ್ಟಾರ್ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶ್ವಚಾಂಪಿಯನ್​ ಪಿ.ವಿ.ಸಿಂಧು ಅವರ ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ. ನೆಟ್ಟಿಗರಲ್ಲಿ ಸಿಂಧು ಬಯೋಪಿಕ್​ ಬರಬಹುದೇ? ಎಂಬ ಚರ್ಚೆ ನಡೆಸುತ್ತಿದ್ದಾರೆ.

ಪಿ.ವಿ.ಸಿಂಧು ವಿಶ್ವಚಾಂಪಿಯನ್​ಶಿಪ್​ ಗೆದ್ದಿರುವ ಜೊತೆಗೆ ಸತತ ಎರಡು ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ರಿಯೋದಲ್ಲಿ ಬೆಳ್ಳಿ ಗೆದ್ದರೆ, ಕಳೆದ ತಿಂಗಳು ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಸಾಧನೆ ತೋರಿದ್ದರು.

ಪಿ.ವಿ.ಸಿಂಧೂ ದೀಪಿಕಾ ಪಡುಕೋಣೆ ಜೊತೆಗೆ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕೂತೂಹಲ ಮೂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಬಯೋಪಿಕ್​​ಗಳು ಬಾಲಿವುಡ್​ನಲ್ಲಿ ಯಶಸ್ವಿಯಾಗುತ್ತಿದ್ದು ದೇಶದ ಬ್ಯಾಡ್ಮಿಂಟನ್​ ಸ್ಟಾರ್​ ಸಿಂಧು ಬಯೋಪಿಕ್​ಗೆ ದೀಪಿಕಾ ಸದ್ದಿಲ್ಲದೇ ಸಿದ್ಧತೆ ನಡೆಯುತ್ತಿದ್ದಾರೆಯೇ? ಎಂಬ ಕೂತೂಹಲ ಹೆಚ್ಚಾಗಿದೆ.

ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಕೂಡ ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್​ ಪಟುವಾಗಿದ್ದರು. ಹಾಗಾಗಿ ಬ್ಯಾಡ್ಮಿಂಟನ್​ ಜೊತೆಗೆ ಸಿನಿಮಾದಲ್ಲೂ ಉತ್ತುಂಗದಲ್ಲಿರುವ ದೀಪಿಕಾ, ಪಿ.ವಿ.ಸಿಂಧು ಅವರ ಪಾತ್ರ ನಿರ್ವಹಿಸಲು ಅತ್ಯುತ್ತಮ ಆಯ್ಕೆ ಅನ್ನೋದನ್ನು ಅಲ್ಲಗಳೆಯುವಂತಿಲ್ಲ.

ಈ ಇಬ್ಬರು ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು 1.9 ಮಿಲಿಯನ್ಸ್ ಲೈಕ್ಸ್​ ಪಡೆದುಕೊಂಡಿವೆ.

ಇದನ್ನೂ ಓದಿ: ದೀಪಿಕಾ ದಂಪತಿ ಜತೆ ಕಾಣಿಸಿಕೊಂಡ ಬ್ಯಾಡ್ಮಿಂಟನ್​ ತಾರೆ ಪಿ.ವಿ. ಸಿಂಧು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.