ಇಂಟರ್​​​ನ್ಯಾಷನಲ್​​ ಫೋರ್ಬ್ಸ್ ಮ್ಯಾಗ್​ಜಿನ್ ಮುಖಪುಟದಲ್ಲಿ ರಾಕಿ ಬಾಯ್​ ಹವಾ

author img

By

Published : Oct 11, 2021, 3:11 PM IST

Updated : Oct 11, 2021, 3:51 PM IST

Yash

ಕನ್ನಡ ಚಿತ್ರರಂಗದಲ್ಲಿ ಕೆಜೆಎಫ್​ ಸಿನಿಮಾದ ಮೂಲಕ ನಟ ಯಶ್​​ ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದಾರೆ. ಇದೀಗ ಇಂಟರ್ನ್ಯಾಷನಲ್​ ಫೋರ್ಬ್ಸ್ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಸ್ಟೈಲಿಷ್ ಎಂದು ಸಾಬೀತು ಮಾಡಿದ್ದಾರೆ.

ಕೆಜಿಎಫ್ ಸಿನಿಮಾದ ಮೂಲಕ ರಾಕಿಂಗ್​ ಸ್ಟಾರ್​ ಯಶ್​​ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು, ಪ್ರತಿಷ್ಠಿತ ಜಾಹೀರಾತು ಸಂಸ್ಥೆಗಳಿಗೆ ರಾಯಭಾರಿಯಾಗಿದ್ದಾರೆ. ಇದೀಗ ಇಂಟರ್ನ್ಯಾಷನಲ್​ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೆಜೆಎಫ್​ ಸಿನಿಮಾದ ಮೂಲಕ ನಟ ಯಶ್​​ ಬೇಡಿಕೆಯ ನಟನಾಗಿದ್ದು, ಕೆಜಿಎಫ್ ಸಿನಿಮಾದ ಬಳಿಕ ಯಾವ ಭಾಷೆ, ಯಾವ ನಿರ್ದೇಶಕನ ಜೊತೆ ಸಿನಿಮಾ ಮಾಡ್ತಾರೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Yash
ನಟ ಯಶ್​​

ಕೆಲ ದಿನಗಳ ಹಿಂದೆ ತಲೆ ಕೂದಲಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಯಶ್ ಮಿಂಚಿದ್ದರು. ಇದೀಗ ಇಂಟರ್ನ್ಯಾಷನಲ್​ ಫೋರ್ಬ್ಸ್ ಮ್ಯಾಗಜಿನ್ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಸ್ಟೈಲಿಷ್ ನಟ ಎಂದು ಸಾಬೀತು ಮಾಡಿದ್ದಾರೆ.

ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯ ಸ್ಟಾರ್ ನಟರನ್ನು ಹಿಂದಿಕ್ಕಿ ಯಶ್ ವಿಶ್ವದ ಪ್ರಸಿದ್ಧ ಮ್ಯಾಗಜಿನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಈ ಮ್ಯಾಗಜಿನ್​ನಲ್ಲಿ ವಿಶ್ವದ ಶ್ರೀಮಂತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕನ್ನಡದ ನಟ ಯಶ್​ರನ್ನು ಮ್ಯಾಗಜಿನ್​ ಮುಖಪುಟದಲ್ಲಿ ನೋಡಿ ಅಭಿಮಾನಿಗಳು ಫುಲ್​ ಪಿಧಾ ಆಗಿದ್ದಾರೆ.

ಯಶ್​ ಹೊಸ ಲುಕ್​

ಯಶ್ ತಮ್ಮ ಲುಕ್ ಅನ್ನು ಬದಲಾಯಿಸಿಕೊಂಡಿದ್ದು, ಉದ್ದವಾದ ಕೂದಲಿಗೆ ಹೊಸ ಟಚ್ ನೀಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿ ಸನ್ಮಾನಿಸಿದ ಪವರ್​ ಸ್ಟಾರ್​

Last Updated :Oct 11, 2021, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.