ಸಂಕ್ರಾಂತಿ ಹಬ್ಬದಂದು ಅಪ್ಪು ನೆನೆದು ಫ್ಯಾನ್ಸ್​​ಗೆ ಸಿಹಿ ಸುದ್ದಿ ನೀಡಿದ ಶಿವಣ್ಣ

author img

By

Published : Jan 15, 2022, 3:04 PM IST

ಸಂಕ್ರಾಂತಿ ಹಬ್ಬದಂದು ಅಪ್ಪು ನೆನೆದ ಶಿವಣ್ಣ

ಬೈರಾಗಿ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಡಾಲಿ ಧನಂಜಯ್​ ಕೂಡ ಕಾಣಿಸಿರುವುದು ವಿಶೇಷ. ಟಗರು ಸಿನಿಮಾ ನಂತರ ಇವರಿಬ್ಬರ ಕಾಂಬಿನೇಷನ್​ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಶಿವಣ್ಣ, ಧನಂಜಯ್ ಅಲ್ಲದೆ ಶಿವಕುಮಾರ್​, ಅಂಜಲಿ, ಪೃಥ್ವಿ ಅಂಬರ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ..

ಸಂಕ್ರಾಂತಿ ಹಬ್ಬವನ್ನ ದೇಶದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಈ‌ ಕೊರೊನಾ ಮಧ್ಯೆಯೂ ಸ್ಯಾಂಡಲ್​​ವುಡ್​​ನಲ್ಲಿ ಸೆಲೆಬ್ರಿಟಿಗಳ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ‌ ಮಾಡಿದೆ. ಈ ಹಬ್ಬಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಶುಭಾಶಯ ಕೋರಿದ್ದಾರೆ. ಈ ವೇಳೆ ಸಹೋದರ ಪುನೀತ್​ ರಾಜ್​ಕುಮಾರ ಅವರನ್ನ ಶಿವಣ್ಣ ನೆನಪು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಸೆಂಚುರಿ ಸ್ಟಾರ್ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ.

ಬೈರಾಗಿ ಪೋಸ್ಟರ್ ರಿಲೀಸ್​
ಬೈರಾಗಿ ಪೋಸ್ಟರ್ ರಿಲೀಸ್​

ಶಿವರಾಜ್​ಕುಮಾರ್​ ನಟನೆಯ ಬೈರಾಗಿ ಚಿತ್ರದ ಶೂಟಿಂಗ್​ ಮಗಿದಿದೆ. ಸದ್ಯದಲ್ಲೇ ಈ ಸಿನಿಮಾದ ಟೀಸರ್​ ಕೂಡ ರಿಲೀಸ್​ ಆಗಲಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಬೈರಾಗಿ ಸಿನಿಮಾದ ಶೂಟಿಂಗ್ ಮುಕ್ತಾಯ ಆಯ್ತು. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ.

ಈ ವರ್ಷದ ಮೊದಲ ಬೈರಾಗಿ ಪೋಸ್ಟರ್​ ಅನ್ನು ನನ್ನ ಪೇಜ್​ನಿಂದ ರಿಲೀಸ್​ ಮಾಡುತ್ತಿದ್ದೇನೆ. ನೋಡಿ ಆನಂದಿಸಿ. ಇನ್ನು ಕೆಲವೇ ಗಂಟೆಗಳಲ್ಲಿ ಇನ್ನೊಂದು ಸರ್ಪ್ರೈಸ್​ ಕಾದಿದೆ. ಅಪ್ಪು ಐ ಲವ್​ ಯೂ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಬೈರಾಗಿ ಪೋಸ್ಟರ್ ರಿಲೀಸ್​
ಬೈರಾಗಿ ಪೋಸ್ಟರ್ ರಿಲೀಸ್​

ಇನ್ನು ​ಬೈರಾಗಿ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಡಾಲಿ ಧನಂಜಯ್​ ಕೂಡ ಕಾಣಿಸಿಕೊಳ್ಳಲಿರುವುದು ವಿಶೇಷ. ಟಗರು ಸಿನಿಮಾ ನಂತರ ಇವರಿಬ್ಬರ ಕಾಂಬಿನೇಷನ್​ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಶಿವಣ್ಣ, ಧನಂಜಯ್ ಅಲ್ಲದೆ ಶಿವಕುಮಾರ್​, ಅಂಜಲಿ, ಪೃಥ್ವಿ ಅಂಬರ್​ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕಾಲಿವುಡ್​ ಮೂಲದ ನಿರ್ದೇಶಕ ವಿಜಯ್​ ಮಿಲ್ಟನ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಸಾರ್ಥಕ್​ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆಗಿರುವ ಹೊಸ ಪೋಸ್ಟರ್ ಸಖತ್​ ವೈರಲ್​ ಆಗುತ್ತಿದೆ. ಈ ಸಿನಿಮಾ ಟೈಟಲ್‌ನಿಂದಲೇ ಅಭಿಮಾನಿಗಳಲ್ಲಿ ಕ್ಯೂರ್ಯಾಸಿಟಿ ಹುಟ್ಟಿಸಿರೋ ಬೈರಾಗಿ ಕೊರೊನಾ ಕಡಿಮೆ ಆದ್ಮೇಲೆ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.