ನುಸ್ರತ್ ಜಹಾನ್​ ಮಗುವಿನ ತಂದೆಯ ಕುರಿತಾದ ಊಹಾಪೋಹಕ್ಕೆ ತೆರೆ: ಶಿಶು ಜನನ ಪ್ರಮಾಣ ಪತ್ರದಲ್ಲೇನಿದೆ?

author img

By

Published : Sep 17, 2021, 11:05 AM IST

Updated : Sep 17, 2021, 11:14 AM IST

Nusrat Jahan

ಕೋಲ್ಕತ್ತಾ ಮಹಾನಗರ ಪಾಲಿಕೆ ವೆಬ್‌ಸೈಟ್‌ನಲ್ಲಿ ನುಸ್ರತ್ ಜಹಾನ್​​​​ ಮಗುವಿನ ಶಿಶು ಜನನ ಪ್ರಮಾಣಪತ್ರವನ್ನು ಹಾಕಲಾಗಿದ್ದು, ಮಗುವಿನ ತಂದೆ ಯಶ್​ ದಾಸ್​​ಗುಪ್ತಾ ಎಂದು ದಾಖಲಾಗಿದೆ.

ಬಂಗಾಳಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್​ ಆಗಸ್ಟ್ 26 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಕಳೆದ ನವೆಂಬರ್​ನಲ್ಲಿ ಪತಿಯಿಂದ ಬೇರೆಯಾಗಿದ್ದ ನಟಿಗೆ ಮಗು ಜನಿಸಿದ ನಂತರ ಮಗುವಿನ ತಂದೆಯ ಕುರಿತಾಗಿ ಉಹಾಪೋಹಗಳು ಕೇಳಿ ಬಂದಿತ್ತು. ಆದ್ರೀಗ ಕೋಲ್ಕತಾ ಮಹಾನಗರ ಪಾಲಿಕೆ ವೆಬ್‌ಸೈಟ್‌ನಲ್ಲಿ ನುಸ್ರತ್ ಜಹಾನ್​​​​ ಮಗುವಿನ ಶಿಶು ಜನನ ಪ್ರಮಾಣಪತ್ರವನ್ನು ಹಾಕಲಾಗಿದೆ.

ಶಿಶು ಜನನ ಪ್ರಮಾಣ ಪತ್ರದಲ್ಲಿ ಮಗುವಿನ ತಂದೆ ಬೆಂಗಾಳಿ ನಟ ಯಶ್​ ದಾಸ್​​ಗುಪ್ತಾ ಎಂದು ದಾಖಲಾಗಿದೆ.

ಇದನ್ನೂ ಓದಿ: ಹೆರಿಗೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರುತ್​.. ಮಗುವಿನ ತಂದೆ ಬಗ್ಗೆ ಪ್ರತಿಕ್ರಿಯೆ ಏನು?

ನುಸ್ರತ್ ಜಹಾನ್​ 2019ರ ಜೂನ್​ 19ರಲ್ಲಿ ಟರ್ಕಿಯಲ್ಲಿ ನಿಖಿಲ್​ ಜೈನ್ ಎಂಬುವರನ್ನು ವಿವಾಹವಾಗಿದ್ದರು. ಆದರೆ, 2021ರಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ, ಭಾರತದ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್​​ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು.

Last Updated :Sep 17, 2021, 11:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.