'ಅತ್ರಂಗಿ ರೇ' ಫಸ್ಟ್ ಮೋಷನ್ ಪೋಸ್ಟರ್ ರಿಲೀಸ್​

author img

By

Published : Nov 24, 2021, 9:51 AM IST

Updated : Nov 24, 2021, 11:08 AM IST

Atrangi Re

ಅಕ್ಷಯ್ ಕುಮಾರ್, ಸಾರಾ ಅಲಿಖಾನ್, ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಅತ್ರಂಗಿ ರೇ" (Atrangi re) ಫಸ್ಟ್ ಮೋಷನ್ ಪೋಸ್ಟರ್ ರಿಲೀಸ್​ ಮಾಡಲಾಗಿದೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಸಾರಾ ಅಲಿಖಾನ್‌ ಮತ್ತು ಧನುಶ್‌ ನಟನೆಯ ‘ಅತ್ರಂಗಿ ರೇ’ ಹಿಂದಿ ಸಿನಿಮಾದ ಫಸ್ಟ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಾರಾ ಅಲಿಖಾನ್ ಅವರು ತಮ್ಮ ಇನ್ಸ್​ಸ್ಟಾಗ್ರಾಮ್​ನಲ್ಲಿ ಮೊದಲು ಧನುಷ್ ಪಾತ್ರದ ಕುರಿತಾದ ಫಸ್ಟ್ ಮೋಷನ್ ಪೋಸ್ಟರ್​ ಅನ್ನು ಪೋಸ್ಟ್​ ಮಾಡಿದ್ದಾರೆ. ಆನಂತರ ಅಕ್ಷಯ್‌ ಕುಮಾರ್‌ ಅವರ ಪೋಸ್ಟರ್ ಹಾಗೂ ಕೊನೆಗೆ ತಮ್ಮ ಪಾತ್ರದ ಕುರಿತಾದ ಫಸ್ಟ್ ಮೋಷನ್ ಪೋಸ್ಟರ್ ಶೇರ್​ ಮಾಡಿದ್ದಾರೆ. ಇನ್ನು ಚಿತ್ರದ ಟ್ರೇಲರ್ ಮಂಗಳವಾರ ಬಿಡುಗಡೆಯಾಗಲಿದೆ.

'ಅತ್ರಂಗಿ ರೆ ಫಸ್ಟ್ ಮೋಷನ್ ಪೋಸ್ಟರ್ ಬಿಡುಗಡೆ

ವಿಭಿನ್ನ ನೆಲೆಗಟ್ಟಿನ ಸಾಂಸ್ಕೃತಿಕ ಪ್ರೇಮ ಕಥನವನ್ನು ಈ ಸಿನಿಮಾ ಒಳಗೊಂಡಿದೆ. 2018ರಲ್ಲಿ ತೆರೆಕಂಡ ‘ಜೀರೊ’ ಚಿತ್ರದ ಬಳಿಕ ಆನಂದ್‌ ರೈ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದಕ್ಕೆ ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜಿಸಿದ್ದಾರೆ.

Last Updated :Nov 24, 2021, 11:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.