trailer release: ಮಗನ ಪ್ರೀತಿಯ ‘ಜೆರ್ಸಿ’ಗಾಗಿ ಪ್ರಾಣವನ್ನೇ ಪಣಕ್ಕಿಡುವ ತಂದೆ!

author img

By

Published : Nov 25, 2021, 8:28 AM IST

jersey movie trailer  shahid kapoor films  bollywood news  entertainment news  jersey movie release date  jersey movie trailer release  jersey movie update  ಜೆರ್ಸಿ ಚಿತ್ರದ ಟ್ರೈಲರ್​ ಜೆರ್ಸಿ ಚಿತ್ರದ ಟ್ರೈಲರ್ ಬಿಡುಗಡೆ  ಶಾಹಿದ್​ ಕಪೂರ್​ ಚಿತ್ರಗಳು  ಬಾಲಿವುಡ್​ ಸುದ್ದಿಗಳು  ಮನರಂಜನಾ ಸುದ್ದಿಗಳು  ಜೆರ್ಸಿ ಚಿತ್ರ ಬಿಡುಗಡೆ ದಿನಾಂಕ  ಜೆರ್ಸಿ ಚಿತ್ರದ ಅಪ್​ಡೇಟ್​

ಗೌತಮ್ ತಿನ್ನನೂರಿ ನಿರ್ದೇಶಿಸಿದ್ದ 'ಜೆರ್ಸಿ' ಚಿತ್ರ ಹಿಂದಿಗೆ ರಿಮೇಕ್ ಆಗಿದ್ದು, ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕರಾಗಿ ನಟಿಸಿದ್ದಾರೆ. ಶಾಹಿದ್​​​ಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದು, ಚಿತ್ರದ ಟ್ರೇಲರ್​​ ಬಿಡುಗಡೆಯಾಗಿದೆ.

ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್​ನಲ್ಲಿ ತಂದೆ ಮಗನ ಪ್ರೀತಿ ಕಾಣುತ್ತದೆ. ಮಗನಿಗೆ ಇಂಡಿಯನ್​ ಜೆರ್ಸಿ ಅಂದ್ರೆ ಹುಚ್ಚು. ಅದನ್ನು ಪಡೆಯಲೇಬೇಕೆಂಬುದು ಮಗನ ಆಸೆ. ಮಗನ ಆಸೆಯಂತೆ ಹುಟ್ಟುಹಬ್ಬದಂದು ಉಡುಗೊರೆ ರೂಪದಲ್ಲಿ ಕೊಡಬೇಕೆಂಬುವುದು ತಂದೆಯ ಆಸೆ. ಆದ್ರೆ ಕೈಯಲ್ಲಿ ಹಣವಿಲ್ಲದೇ ಒದ್ದಾಡುತ್ತಿರುತ್ತಾರೆ ಶಾಹಿದ್​ ಕಪೂರ್​.

ತನ್ನ ಹೆಂಡ್ತಿಯ ಪರ್ಸ್​ನಿಂದಲೇ ಕಳ್ಳತನಕ್ಕೆ ಮುಂದಾಗುತ್ತಾರೆ. ಕೊನೆಗೂ ತನ್ನ ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುವುದಿಲ್ಲ. ಕೊನೆಗೂ ಒಂದು ತೀರ್ಮಾನಕ್ಕೆ ಬಂದ ಶಾಹಿದ್​ ತನ್ನ ಮಗನಿಗಾಗಿ ನಿಜವಾದ ಇಂಡಿಯನ್​ ಜೆರ್ಸಿ ಕೊಡಲು ನಿರ್ಧರಿಸುತ್ತಾರೆ. ಅದಕ್ಕಾಗಿ ಅರ್ಧಕ್ಕೆ ಮೊಟಕುಗೊಳಿಸಿದ್ದ ಕ್ರಿಕೆಟ್ ಆಟವನ್ನು ಮುಂದುವರಿಸುತ್ತಾರೆ. ಹೀಗೆ ಚಿತ್ರ ಸಾಗುತ್ತದೆ. ಕೊನೆಗೂ ತನ್ನ ಮಗನಿಗೆ ಇಂಡಿಯನ್​ ಜೆರ್ಸಿ ಕೊಡ್ತಾರೆ ಅಥವಾ ಇಲ್ವಾ ಅನ್ನೋದು ಚಿತ್ರದ ಕಥಾಹಂದರವಾಗಿದೆ.

ಮಗನ ಪ್ರೀತಿಯ ‘ಜೆರ್ಸಿ’ಗಾಗಿ ಪ್ರಾಣವನ್ನೇ ಪಣಕ್ಕಿಡುವ ತಂದೆ

ಶಾಹಿದ್​​ಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ವಿಶೇಷ ಎಂದರೆ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದ ಗೌತಮ್​ ತಿನ್ನನೂರಿ ಅವರೇ ಹಿಂದಿಯಲ್ಲೂ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ದಿಲ್​​​ರಾಜು ಹಾಗೂ ಅಲ್ಲು ಅರವಿಂದ್​​​ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಕೆಟ್​ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾಗಾಗಿ ಈಗಾಗಲೇ ಶಾಹಿದ್​ ಬಹಳಷ್ಟು ಶ್ರಮವಹಿಸಿದ್ದಾರೆ. ಪಾತ್ರಕ್ಕಾಗಿ ಹೆಚ್ಚಿನ ಕ್ರಿಕೆಟ್ ಅಭ್ಯಾಸ ಕೂಡಾ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕ್ರಿಕೆಟ್​ ಅಭ್ಯಾಸದ ವೇಳೆ ಅವರಿಗೆ ಬಾಲ್​ ತಾಗಿ 13 ಒಲಿಗೆ ಹಾಕಲಾಗಿತ್ತು.

ಇನ್ನು ಈ ಚಿತ್ರ ವರ್ಷದ ಕೊನೆಯ ದಿನದಂದು ಬಿಡುಗಡೆಯಾಗಲಿದೆ. ಅಂದ್ರೆ ಡಿಸೆಂಬರ್​ 31ರಂದು ಪ್ರೇಕ್ಷಕರ ಮುಂದು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.