ಹೊಸ ಪೇಜ್​ನೊಂದಿಗೆ ಬರಲಿದೆ ಯೂಟ್ಯೂಬ್.. ಮೊಬೈಲ್​, ವೆಬ್​ ವೀಕ್ಷಣೆ ವಿನ್ಯಾಸ ಬೇರೆ ಬೇರೆ

author img

By

Published : Sep 20, 2022, 3:35 PM IST

Etv Bharatyoutube-bringing-new-video-page-on-mobile-web

ಗೂಗಲ್​ ಒಡೆತನದ ವಿಡಿಯೋ ಸೈಟ್​ ಆದ ಯೂಟ್ಯೂಬ್​ ಹೊಸ ಮಾದರಿಯಲ್ಲಿ ಬಳಕೆದಾರರ ಕೈ ಸೇರಲು ಸಿದ್ಧವಾಗಿದೆ. ವಿಡಿಯೋ ಪೇಜ್​ ವಿನ್ಯಾಸವನ್ನು ಪರಿಷ್ಕರಿಸಲಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಒಡೆತನದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಹೊಸ ವಿಡಿಯೋ ಪುಟವನ್ನು ಹೊರತರುತ್ತಿದೆ. ಹಲವಾರು ಅಂಶಗಳುಳ್ಳ ವಿಡಿಯೋ ಪೇಜ್​ ಅನ್ನು ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್‌ನಲ್ಲಿ ವೀಕ್ಷಿಸಲು ಅನುವಾಗುವಂತೆ ವಿನ್ಯಾಸವನ್ನು ರೂಪಿಸುತ್ತಿದೆ.

ಗೂಗಲ್​ ಪ್ರಕಾರ, ಮರುವಿನ್ಯಾಸ ಮಾಡಲಾಗುತ್ತಿರುವ ವಿಡಿಯೋ ಪೇಜ್​ನ ಪ್ರಮುಖ ಅಂಶವೆಂದರೆ ವೃತ್ತಾಕಾರದ ಬಟನ್‌ಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಲೈಕ್​ ಮಾಡಲು, ಡಿಸ್​ಲೈಕ್​ ಮಾಡಲು ಇರುವ ಬಟನ್​ ಬದಲಾಗಿ ಒಂದರಲ್ಲೇ ಅದನ್ನು ಅಳವಡಿಸಲಾಗಿರುತ್ತದೆ.

ವಿಡಿಯೋಗಳನ್ನು ಶೇರ್​, ಕ್ರಿಯೇಟ್​, ಡೌನ್​ಲೋಡ್​ ಮತ್ತು ಅವುಗಳನ್ನು ಪರಿಷ್ಕರಿಸುವ ಅವಕಾಶವನ್ನೂ ಹೊಸ ಪೇಜ್​ ನೀಡಲಿದೆ. ಮೊಬೈಲ್​ನಲ್ಲಿ ಮೇಲೆ ಕೆಳಗೆ ಸ್ಕ್ರಾಲ್ ಮಾಡಿದಾಗ ವಿಡಿಯೋದ ವಿವರಣೆ ಅಡಿ ಲಭ್ಯವಿರುತ್ತದೆ. ವಿಡಿಯೋ ಶೀರ್ಷಿಕೆ, ಎಷ್ಟು ವೀಕ್ಷಣೆ ಕಂಡಿದೆ, ಪ್ರಕಟವಾದ ದಿನಾಂಕ ಮತ್ತು ಹ್ಯಾಶ್‌ಟ್ಯಾಗ್‌ಗಳೂ ಇಲ್ಲಿ ಕಾಣಿಸುತ್ತವೆ.

ಹೊಸ ವಿನ್ಯಾಸವು "ಆಂಬಿಯೆಂಟ್ ಮೋಡ್"ನೊಂದಿಗೆ ಹೊಂದಿಕೆಯಾಗಬಹುದು. ಇದು ವೀಕ್ಷಕರನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಪ್ರೇರೇಪಿಸುವಂತೆ ಮಾಡಲು ವಿಡಿಯೋದ ಕೆಳಭಾಗದಲ್ಲಿ ವಿವರಣೆ ವಿಭಾಗ ಮತ್ತು ಸಿಸ್ಟಮ್ ಬಾರ್‌ ಅನ್ನು ಇನ್ನಷ್ಟು ಆಕರ್ಷಣೀಯ ಮಾಡಲಾಗಿದೆ.

ಓವರ್‌ಫ್ಲೋ ಮೆನುವಿನಿಂದ ವಿಡಿಯೋವನ್ನು ಸಕ್ರಿಯ ಮತ್ತು ನಿಷ್ಕ್ರಿಯಗೊಳಿಸಬಹುದಾಗಿದೆ. ಈ ಹೊಸ ಪೇಜ್​ನಲ್ಲಿ ಪರದೆಯ ಮೇಲೆ ಎದ್ದು ಕಾಣುವಂತೆ ಕಂಟೇನರ್‌ನಲ್ಲಿ ಅಗ್ರ ಕಾಮೆಂಟ್ ಅನ್ನು ಇರಿಸಲಾಗುತ್ತದೆ. ಇದು ಯೂಟ್ಯೂಬ್​ ಅನ್ನು ಜನರು ಹೆಚ್ಚು ಬಳಸುವಂತೆ ಮಾಡಲು ಪ್ರೇರೇಪಿಸುತ್ತದೆ.

ಇನ್ನು ವೆಬ್​ ಪೇಜ್​ ಅಂದರೆ ಕಂಪ್ಯೂಟರ್​ ಪರದೆಯ ಮೇಲೆ ಯೂಟ್ಯೂಬ್​ ವೀಕ್ಷಿಸಿದಾಗ ಮೊಬೈಲ್​ನಲ್ಲಿ ವೀಕ್ಷಿಸುವುದಕ್ಕಿಂತಲೂ ಸ್ವಲ್ಪ ಭಿನ್ನವಾಗಿದೆ. ವಿಡಿಯೋದ ಬಗೆಗಿನ ಬರಹಗಳು ದೃಶ್ಯಗಳಾಗಿ ನೋಡುಬಹುದು. ಈ ಆಯ್ಕೆಯನ್ನು ಕ್ರಿಯೇಟರ್​ಗಳು ಮಾತ್ರ ಪಡೆದುಕೊಳ್ಳುತ್ತಾರೆ. ಸದ್ಯಕ್ಕೆ ಇದು ಎಲ್ಲ ಮಾದರಿಯ ಬಳಕೆದಾರರಿಗೆ ಲಭ್ಯವಿಲ್ಲವಾದರೂ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಓದಿ: ಸ್ಮಾರ್ಟ್​ವಾಚ್​ ಮಾರುಕಟ್ಟೆಗೆ ನಾರ್ಡ್​ ಎಂಟ್ರಿ.. ಶೀಘ್ರ ಭಾರತದಲ್ಲಿ ವಾಚ್​ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.