ಗ್ರೂಪ್​ ಚಾಟ್​​ನಲ್ಲಿ ಇನ್ಮುಂದೆ ಪ್ರೊಫೈಲ್​ ವೀಕ್ಷಣೆ: ವಾಟ್ಸ್​ಆ್ಯಪ್​ನಿಂದ ಹೊಸ ಫೀಚರ್​​

author img

By

Published : Nov 17, 2022, 6:06 PM IST

ಗ್ರೂಪ್​ ಚಾಟ್​​ನಲ್ಲಿ ಇನ್ಮುಂದೆ ಪ್ರೋಫೈಲ್​ ವೀಕ್ಷಣೆ: ವಾಟ್ಸಾಪ್​ನಿಂದ ಹೊಸ ಫೀಚರ್​​

ಈ ಹೊಸ ಫೀಚರ್​ನಿಂದ ಗ್ರೂಪ್​ ಮೆಂಬರ್​ಗಳು ಫೋನ್​ ನಂಬರ್​ ಇರದೇ ಹೋದರೂ ಅಥವಾ ಅದೇ ಹೆಸರು ಹೊಂದಿದ್ದಾಗಲೂ ಅವರನ್ನು ಪತ್ತೆ ಮಾಡಬಹುದಾಗಿದೆ .

ಹೈದರಾಬಾದ್​: ಬೆಟಾ ಪರೀಕ್ಷೆ ಮೂಲಕ ವಾಟ್ಸ್​ಆ್ಯಪ್​​​ ಹೊಸ ಫೀಚರ್​ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಇದರ ಅನುಸಾರ ಡೆಸ್ಕ್​ಟಾಪ್​ನಲ್ಲಿ ಬಳಕೆದಾರರು ಗ್ರೂಪ್​ಚಾಟ್​ ವೇಳೆ ಫ್ರೋಫೈಲ್​ ಫೋಟೋಗಳನ್ನು ವೀಕ್ಷಿಸಬಹುದಾಗಿದೆ.

ಈ ಹೊಸ ಫೀಚರ್​ನಿಂದ ಗ್ರೂಪ್​ ಮೆಂಬರ್​ಗಳು ಫೋನ್​ ನಂಬರ್​ ಇರದೇ ಹೋದರೂ ಅಥವಾ ಅದೇ ಹೆಸರು ಹೊಂದಿದ್ದಾಗಲೂ ಅವರನ್ನು ಪತ್ತೆ ಮಾಡಬಹುದಾಗಿದೆ. ಒಂದು ವೇಳೆ ಗ್ರೂಪ್​ ಸದಸ್ಯರು ತಮ್ಮ ಪ್ರೋಫೈಲ್​ ಚಿತ್ರ ಹೊಂದಿಲ್ಲದಿದ್ದಾಗ ಅಥವಾ ಪ್ರೊಫೈಲ್​ ಫೋಟೋ ಹೈಡ್​ ಮಾಡಿದಾಗ ಡೀಫಾಲ್ಟ್ ಪ್ರೊಫೈಲ್ ಐಕಾನ್ ಕಾಣಿಸಿಕೊಳ್ಳುತ್ತದೆ. ಜೊತೆಗೆ ಕಾಂಟಾಕ್ಟ್​ ನೇಮ್​ನಲ್ಲಿಯೂ ಅದೇ ಬಣ್ಣವನ್ನು ಹೈಲೈಟ್ ಮಾಡಲಾಗುತ್ತದೆ.

ಈ ಹೊಸ ಫೀಚರ್​ ಅನ್ನು ಶೀಘ್ರದಲ್ಲೇ ಆಂಡ್ರಾಯ್ಡ್​ ವಾಟ್ಸ್​ಆಪ್​ ಬೆಟಾಗೆ ಬಿಡುಗಡೆ ಮಾಡಲಾಗುವುದು. ಕಳೆದ ಅಕ್ಟೋಬರ್​ನಲ್ಲಿ ವಾಟ್ಸಾಪ್​ ಡೆಸ್ಕ್​ಟಾಪ್​ ಬೆಟಾದ ಮೇಲೆ ವಾಟ್ಸಾಪ್​ ಕೆಲಸ ಶುರು ಮಾಡಿತ್ತು. ಡೆಸ್ಕ್​​ಟಾಪ್​ ಮತ್ತು ಐಒಎಸ್​ ಬೆಟಾ ಈ ಫೀಚರ್​ ಪರಿಚಯಿಸುವ ಮೂಲಕ ಗ್ರೂಪ್​ ಮೆಂಬರ್​ ಪತ್ತೆ ಮಾಡಲು ಸಹಾಯಕವಾಗಲಿದೆ.

ಇದನ್ನೂ ಓದಿ: ಹೆಡ್​ಫೋನ್​, ಲೌಡ್​ ಮ್ಯೂಸಿಕ್​ನಿಂದ 1 ಬಿಲಿಯನ್​ಗೂ ಹೆಚ್ಚಿನ ಯುವಜನತೆಯಲ್ಲಿ ಶ್ರವಣ ಸಮಸ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.